Just In
- 27 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೊಲೆರೊ ನಿಯೋ ಬ್ಯಾಡ್ಜ್‌ನೊಂದಿಗೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300
ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಟಿಯುವಿ 300 ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿಯು ಭಾರತದಲ್ಲಿ ಇತ್ತೀಚೆಗೆ ಬೊಲೆರೊ ನಿಯೋ ಬ್ಯಾಡ್ಜ್‌ನೊಂದಿಗೆ ಕಾಣಿಸಿಕೊಂಡಿದೆ.

ಕೆಲವು ವರದಿಗಳ ಪ್ರಕಾರ ಮುಂಬರು ಈ ಎಸ್‍ಯುವಿಯನ್ನು ಬೆಲೆರೊ ನಿಯೋ ಎಂದು ಕರೆಯಬಹುದು. ಹೊಸ ಮಹೀಂದ್ರಾ ಎಸ್‍ಯುವಿಯು ಯಾವುದೇ ಮಾರುಮಾಚುವಿಕೆಯಿಲ್ಲದೆ ಕಾಣಿಸಿಕೊಂಡಿದೆ. ಸ್ಪೈ ಚಿತ್ರಗಳಲ್ಲಿ ಹೊಸ ಮಹೀಂದ್ರಾ ಟಿಯುವಿ300 ಎಸ್‍ಯುವಿಯು ಟೈಲ್‌ಗೇಟ್-ಮೌಂಟಡ್ ಸ್ಪೇರ್ ವ್ಹೀಲ್ ಕವರ್‌ನಲ್ಲಿ ಬೊಲೆರೊ ಹೆಸರನ್ನು ಮತ್ತು ಬೂಟ್-ಲಿಡ್ ನಲ್ಲಿ ನಿಯೋ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಹೊಸ ಮಹೀಂದ್ರಾ ಎಸ್‍ಯುವಿಯ ಟಿವಿಸಿ ಯನ್ನು ಚಿತ್ರೀಕರಿಸುವ ವೇಳೆಯಲ್ಲಿ ಇದು ಕಾಣಿಸಿಕೊಂಡಿದೆ. ವರದಿಯ ಪ್ರಕಾರ ಇದನ್ನು ಮಹಾರಾಷ್ಟ್ರದ ಮಲ್ಶೆಜ್ ಘಾಟ್‌ನಲ್ಲಿ ಆಫ್-ರೋಡ್ ಸ್ಥಳದಲ್ಲಿ ಗುರುತಿಸಲಾಗಿದೆ. ಶೀಘ್ರದಲ್ಲೇ ಮುಂಬರುವ ಬೊಲೆರೊ ನಿಯೋವನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ನಿರೀಕ್ಷಿಸುತ್ತೇವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬೊಲೆರೊ ನಿಯೋ ಅಥವಾ ಟಿಯುವಿ300 ಎಸ್‍ಯುವಿಯ ಬದಲಾವಣೆಗಳ ಕುರಿತು ಮಾತನಾಡುತ್ತಾ ಇದು ಇಂಟಿಗ್ರೇಟೆಡ್ (ಡಿಆರ್‌ಎಲ್) ಡೇಟೈಮ್ ರನ್ನಿಂಗ್ ಲೈಟ್ಸ್, ನವೀಕರಿಸಿದ ಗ್ರಿಲ್, ಫಾಗ್ ಲ್ಯಾಂಪ್ ಯುನಿಟ್ ಮತ್ತು ಬಂಪರ್ ವಿನ್ಯಾಸದೊಂದಿಗೆ ನವೀಕರಿಸಿದ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿರುತ್ತದೆ.

ಇನ್ನು ಬಾನೆಟ್ ವಿನ್ಯಾಸವು ಒಂದೇ ಆಗಿರುತ್ತದೆ. ಡಿ-ಪಿಲ್ಲರ್ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ಪಡೆಯುವುದರೊಂದಿಗೆ ಬೊಲೆರೊ ನಿಯೋದ ಸೈಡ್ ಪ್ರೊಫೈಲ್ ಬದಲಾಗಿದೆ. ಮುಂಬರುವ ಕಾಂಪ್ಯಾಕ್ಟ್-ಎಸ್‌ಯುವಿಯ ಅಲಾಯ್-ವ್ಹೀಲ್ ಗಳು ಸಹ ಬದಲಾಗಿವೆ ಮತ್ತು ಈಗ ಐದು-ಸ್ಪೋಕ್ ವಿನ್ಯಾಸವನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಈ ಎಸ್‍ಯುವಿಯು ಒಟ್ಟಾರೆ ಬಾಕ್ಸಿ ವಿನ್ಯಾಸವು ಹೊಸ ಮಾದರಿಯಲ್ಲಿ ಬದಲಾಗದೆ ಉಳಿದಿದೆ. ಹೊಸ ಬೊಲೆರೊ ನಿಯೋ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಗಿಂತ ಕೆಲವು ನವೀಕರಣಗಳನ್ನು ಹೊಂದಿರುತ್ತದೆ. ನವೀಕರಿಸಿದ ಕಾಂಪ್ಯಾಕ್ಟ್-ಎಸ್‌ಯುವಿ ಕ್ಯಾಬಿನ್‌ಗೆ ಹೊಸ ಲುಕ್ ಮತ್ತು ಪ್ರೀಮಿಯಂ ಅನುಭವವನ್ನು ನೀಡಲು ಸಾಕಷ್ಟು ಬದಲಾವಣೆಗಳನ್ನು ಮಾಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ನೊಂದಿಗೆ ನವೀಕರಿಸಿದ ಇನ್ಫೋಟೈನ್ಮೆಂಟ್ ಟಚ್-ಸ್ಕ್ರೀನ್ ಸಿಸ್ಟಂ ಅನ್ನು ಒಳಗೊಂಡಿರಬಹುದು. ಇನ್ನು ಹಿಂದಿನ ಮಾದರಿಯಲ್ಲಿದ್ದ ಕೀ ಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕರ ಸೀಟ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಫೀಚರ್ ಗಳನ್ನು ಇದರಲ್ಲಿಯು ಮುಂದುವರೆಸಬಹುದು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 1.5-ಲೀಟರ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 240 ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜನಪ್ರಿಯ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ಮಾರಾಟವನ್ನು ಹೆಚ್ಚಿಸಲು ಮಹೀಂದ್ರಾ ಟಿವಿಯು300 ಅನ್ನು ಬೊಲೆರೊ ನಿಯೋ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಕಾಂಪ್ಯಾಕ್ಟ್-ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗ ಬಳಿಕ ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ, ಹೋಂಡಾ ಡಬ್ಲ್ಯುಆರ್-ವಿ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.