ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಮಾಲಿನ್ಯಕ್ಕೆ ಕಾರಣವಾಗುವ 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳನ್ನು ಸ್ಕ್ರಾಪ್ ಮಾಡಲು ಕೇಂದ್ರ ಸರ್ಕಾರವು ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಡಿ 15 ವರ್ಷ ಹಳೆಯದಾದ ವಾಣಿಜ್ಯ ವಾಹನ ಹಾಗೂ 20 ವರ್ಷ ಹಳೆಯದಾದ ಖಾಸಗಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಗೋವಾದ ಬಸ್ ಚಾಲಕರ ಸಂಘವು ಕೇಂದ್ರ ಸರ್ಕಾರದ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತಪಡಿಸಿದೆ. ಸ್ಕ್ರ್ಯಾಪಿಂಗ್ ನೀತಿಯನ್ನು ಬದಲಾಯಿಸುವಂತೆ ಕೋರಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಗೋವಾ ಬಸ್ ಚಾಲಕರ ಸಂಘವು ತಿಳಿಸಿದೆ. ಸಂಘವು 15 ವರ್ಷಗಳ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆಗಳಿವೆ.

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ವಾಹನ ಸ್ಕ್ರ್ಯಾಪಿಂಗ್ ನೀತಿಯಡಿಯಲ್ಲಿ, 20 ವರ್ಷ ಹಳೆಯದಾದ 51 ಲಕ್ಷ ಲಘು ಮೋಟಾರು ವಾಹನ, 15 ವರ್ಷ ಹಳೆಯದಾದ 34 ಲಕ್ಷ ಲಘು ಮೋಟಾರು ವಾಹನ ಹಾಗೂ 15 ವರ್ಷ ಹಳೆಯದಾದ 17 ಲಕ್ಷಕ್ಕೂ ಹೆಚ್ಚು ಮಧ್ಯಮ ಹಾಗೂ ಭಾರವಾದ ಮೋಟಾರು ವಾಹನಗಳನ್ನು ಸ್ಕ್ರಾಪ್ ಮಾಡಲು ಗುರುತಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಈ ವಾಹನಗಳು ಹೊಸ ವಾಹನಗಳಿಗಿಂತ 10-12 ಪಟ್ಟು ಹೆಚ್ಚು ಹೊಗೆಯನ್ನು ಹೊರಸೂಸುತ್ತವೆ. ಹೊಸ ವಾಹನಗಳು ಇಂಧನ ಬಳಕೆಯನ್ನು ಕಡಿಮೆ ಮಾಡಿ, ಮಾಲಿನ್ಯವನ್ನು ಕಡಿಮೆ ಮಾಡುತ್ತವೆ.

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಇದರಿಂದ ಸರ್ಕಾರವು ತೈಲ ಆಮದನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಇನ್ನು ಮುಂದೆ 8 ವರ್ಷಗಳಿಗೊಮ್ಮೆ ವಾಹನಗಳನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಈ ಪರೀಕ್ಷೆಯಲ್ಲಿ ವಿಫಲವಾಗುವ ವಾಹನಗಳನ್ನು ಸಹ ಸ್ಕ್ರಾಪ್ ಮಾಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಸ್ಕ್ರ್ಯಾಪಿಂಗ್ ನೀತಿಯಡಿಯಲ್ಲಿ ತಮ್ಮ ಹಳೆಯ ವಾಹನವನ್ನು ಸ್ಕ್ರಾಪ್ ಮಾಡುವ ಗ್ರಾಹಕರಿಗೆ ಹೊಸ ವಾಹನದ ಬೆಲೆಯ ಮೇಲೆ 5%ನಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಿಸಿದೆ.

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ವಾಹನಗಳ ಮಾಲಿನ್ಯ ಪರೀಕ್ಷೆ ನಡೆಸಲು ಅನುಕೂಲ ಕಲ್ಪಿಸಲು ಸರ್ಕಾರವು ಖಾಸಗಿ ಕಂಪನಿಗಳ ಸಹಾಯದಿಂದ ಸ್ವಯಂಚಾಲಿತ ಮಾಲಿನ್ಯ ಪರೀಕ್ಷಾ ಕೇಂದ್ರಗಳನ್ನು ತೆರೆಯಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ಸ್ಕ್ರ್ಯಾಪಿಂಗ್ ನೀತಿಯು ದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಸ್ಕ್ರ್ಯಾಪಿಂಗ್ ನೀತಿಯಡಿ ಕೇಂದ್ರ ಸರ್ಕಾರವು ರೂ.10,000 ಕೋಟಿ ಹೂಡಿಕೆ ಮಾಡಲಿದ್ದು, ಇದರಿಂದ 50,000 ಉದ್ಯೋಗಗಳು ಸೃಷ್ಟಿಯಾಗಲಿವೆ.

ವಾಹನ ಸ್ಕ್ರ್ಯಾಪಿಂಗ್ ನೀತಿಗೆ ವಿರೋಧ ವ್ಯಕ್ತ ಪಡಿಸಿದ ಬಸ್ ಚಾಲಕರ ಸಂಘ

ವೆಹಿಕಲ್ ಸ್ಕ್ರ್ಯಾಪ್ ನೀತಿಯ ಮೂಲಕ ದೇಶದ ವಾಹನ ತಯಾರಕ ಕಂಪನಿಗಳ ವಹಿವಾಟು 30%ನಷ್ಟು ಹೆಚ್ಚಳಗೊಂಡು 10 ಲಕ್ಷ ಕೋಟಿ ತಲುಪಲಿದೆ. ಸದ್ಯಕ್ಕೆ ಈ ಉದ್ಯಮವು ರೂ.4.5 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ. ಕಂಪನಿಗಳ ಜೊತೆಗೆ ಸ್ಕ್ರ್ಯಾಪ್ ಉದ್ಯಮಕ್ಕೆ ಸಂಬಂಧಿಸಿದ ಜನರ ಆದಾಯವೂ ಹೆಚ್ಚಾಗಲಿದೆ.

Most Read Articles

Kannada
English summary
Bus operators in Goa protests against vehicle scrappage policy. Read in Kannada.
Story first published: Tuesday, March 9, 2021, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X