43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಫೋರ್ಡ್ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಬ್ರಾಂಕೋ ಸಹ ಒಂದು. ಈ ಕಾರ್ ಅನ್ನು ರೂ.7.8 ಕೋಟಿ ನೀಡಿ ಹರಾಜಿನಲ್ಲಿ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಭಾರೀ ಬೆಲೆಗೆ ಮಾರಾಟವಾದ ಕಾರು ಮೊದಲ ಉತ್ಪಾದನಾ ಕಾರು ಎಂಬುದು ವಿಶೇಷ.

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಅಂದರೆ ಫೋರ್ಡ್ ಕಂಪನಿಯು ಬ್ರಾಂಕೋ ಕಾರ್ ಅನ್ನು ಆರಂಭಿಸಿದ ನಂತರ ಉತ್ಪಾದನೆ ಮಾಡಿದ ಮೊದಲ ಯುನಿಟ್. ಈ ಕಾರಣಕ್ಕೆ ಉದ್ಯಮಿಯೊಬ್ಬರು ಈ ಕಾರಿಗೆ ದುಬಾರಿ ಮೊತ್ತ ನೀಡಿ ಖರೀದಿಸಿದ್ದಾರೆ. ಫೋರ್ಡ್ ಬ್ರಾಂಕೊ ಕಾರ್ ಅನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು.

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಕಂಪನಿಯು ಈ ಕಾರ್ ಅನ್ನು ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಯುನಿಟ್'ಗಳು ಮಾರಾಟವಾದವು. ಸುಮಾರು 3,500 ಯುನಿಟ್ ಬ್ರಾಂಕೋ ಕಾರುಗಳನ್ನು ಮೊದಲ ಹಂತದಲ್ಲಿ ಮಾರಾಟ ಮಾಡಲಾಯಿತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಎರಡನೇ ಹಂತದಲ್ಲಿಯೂ ಬ್ರಾಂಕೋ ಕಾರನ್ನು ಮಾರಾಟಕ್ಕೆ ಇಡಲಾಯಿತು. ಫೋರ್ಡ್ ಕಂಪನಿಯು ವಿನ್001 ಚಾಸಿಸ್ ಸಂಖ್ಯೆ ಹೊಂದಿರುವ ಬ್ರಾಂಕೋ ಕಾರನ್ನು ಅರಿಜೋನಾದಲ್ಲಿ ಹರಾಜು ಹಾಕಿತು.

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಈ ಹರಾಜಿನಲ್ಲಿ ಭಾಗವಹಿಸಿದ್ದ ಅರಿಜೋನಾದ ಉದ್ಯಮಿಯೊಬ್ಬರು ಸುಮಾರು 1,075,000 ಡಾಲರ್ ನೀಡಿ ಈ ಕಾರ್ ಅನ್ನು ಖರೀದಿಸಿದರು. ಈ ಮೂಲಕ ಈ ಕಾರು ದುಬಾರಿ ಬೆಲೆಯ ಬ್ರಾಂಕೋ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಎರಡು ಡೋರುಗಳನ್ನು ಹೊಂದಿರುವ ಬ್ರಾಂಕೋ ಕಾರಿನ ಬೆಲೆ 59,305 ಅಮೆರಿಕನ್ ಡಾಲರ್ ಅಂದರೆ ರೂ. 43,66,805ಗಳಾದರೆ, ನಾಲ್ಕು ಡೋರುಗಳ ಮಾದರಿಯ ಬೆಲೆ 63,500 ಅಮೆರಿಕನ್ ಡಾಲರ್ ಅಂದರೆ ರೂ. 46,75,695ಗಳಾಗಿದೆ.

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಎರಡು ಡೋರುಗಳ ಮಾದರಿಯ ಫೋರ್ಡ್ ಬ್ರಾಂಕೊ ಕಾರ್ ಅನ್ನು ಅರಿಜೋನಾ ಉದ್ಯಮಿಯೊಬ್ಬರು ಹಲವಾರು ಕೋಟಿ ನೀಡಿ ಖರೀದಿಸಿದ್ದಾರೆ. ಈ ಕಾರು ವಿಶಿಷ್ಟವಾಗಿರುವ ಕಾರಣಕ್ಕೆ ದುಬಾರಿ ಬೆಲೆಯನ್ನು ನೀಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಅರಿಜೋನಾದಲ್ಲಿ ನಡೆದ ಈ ಘಟನೆಯು ಇಡೀ ವಾಹನ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಫೋರ್ಡ್ ಬ್ರಾಂಕೊ ಕಾರಿನಲ್ಲಿ 2.3-ಲೀಟರ್ ಇಕೊಪೋಸ್ಟ್ 4-ಸಿಲಿಂಡರ್ ಹಾಗೂ 2.7-ಲೀಟರ್ ಇಕೊಪೋಸ್ಟ್ 6-ಸಿಲಿಂಡರ್ ವಿ 6 ಎಂಜಿನ್ ಅಳವಡಿಸಲಾಗಿದೆ.

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

2.3-ಲೀಟರ್ ಇಕೊಪೋಸ್ಟ್ 4-ಸಿಲಿಂಡರ್ ಎಂಜಿನ್ 270 ಬಿ‌ಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 2.7-ಲೀಟರ್ ಇಕೊಪೋಸ್ಟ್ 6-ಸಿಲಿಂಡರ್ ವಿ 6 ಎಂಜಿನ್ 310 ಬಿ‌ಹೆಚ್‌ಪಿ ಪವರ್ ಹಾಗೂ 542 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

43 ಲಕ್ಷ ಬೆಲೆಯ ಕಾರ್ ಅನ್ನು 7 ಕೋಟಿ ನೀಡಿ ಖರೀದಿಸಿದ ಉದ್ಯಮಿ

ಹರಾಜಿನಲ್ಲಿ ಬಂದ ಹಣವನ್ನು ಫೋರ್ಡ್ ಕಂಪನಿಯು ಕಾಡುಗಳ ನಿರ್ವಹಣೆಗಾಗಿ ಬಳಸಲಿದೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಫೋರ್ಡ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ.

ಮೂಲ: ಬ್ಯಾರೆಟ್ ಜ್ಯಾಕ್ಸನ್/ಫೇಸ್ ಬುಕ್

Most Read Articles

Kannada
Read more on ಫೋರ್ಡ್ ford
English summary
Businessman purchases Ford Bronco for Rs 7 crore in auction. Read in Kannada.
Story first published: Monday, March 29, 2021, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X