ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಬಿವೈಡಿ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಇ6 ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅತ್ಯಧಿಕ ಮೈಲೇಜ್ ರೇಂಜ್ ಫೀಚರ್ಸ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಬಿವೈಡಿ ಇವಿ ಎಲೆಕ್ಟ್ರಿಕ್ ಎಂಪಿವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 29.15 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಆರಂಭಿಕವಾಗಿ ಬಿ2ಬಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡಲಿದೆ. ಬಿ2ಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗಾಗಿ ಪರಿಚಯಿಸಲಾಗಿರುವ ಹೊಸ ಇ6 ಕಾರನ್ನು ಸದ್ಯಕ್ಕೆ ಫ್ಲೀಟ್ ಆಪರೇಟರ್‌ಗಳು ಮತ್ತು ಇತರೆ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಖರೀದಿಸಬಹುದಾಗಿದ್ದು, ಮುಂಬರುವ ಕೆಲ ತಿಂಗಳ ನಂತರ ಹೊಸ ಕಾರನ್ನು ವ್ಯಯಕ್ತಿಕ ಕಾರು ಬಳಕೆದಾರರು ಕೂಡಾ ಖರೀದಿಸಬಹುದಾಗಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ವ್ಯಯಕ್ತಿಕ ಕಾರು ಬಳಕೆದಾರರಿಗೆ ಹೊಸ ಇ6 ಕಾರು ಯಾವಾಗ ಲಭ್ಯವಿರಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ ಹೊಸ ಕಾರು ಶೀಘ್ರದಲ್ಲೇ ಫ್ಲೀಟ್ ಆಪರೇಟರ್‌ಗಳು ಮತ್ತು ಇತರ ಕಾರ್ಪೊರೇಟ್ ಖರೀದಿದಾರಿಗೆ ವಿತರಣೆಯಾಗಲಿದ್ದು, ಹೊಸ ಕಾರು ದೆಹಲಿ ಎನ್‌ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ವಿಜಯವಾಡ, ಕೊಚ್ಚಿ ಮತ್ತು ಅಹಮದಾಬಾದ್‌ನಲ್ಲಿರುವ ಬಿವೈಡಿ ಶೋರೂಂಗಳಲ್ಲಿ ಖರೀದಿಸಬಹುದಾಗಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಮಾದರಿಯಾಗಿರುವ ಇ6 ಇವಿ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, 71.6kWh 'ಬ್ಲೇಡ್' ಲಿಥಿಯಂ ಫೆರೋ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನಲ್ಲಿ ಬ್ಲೇಡ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್‌ AC ಮತ್ತು DC ಚಾರ್ಜಿಂಗ್ ಮಾನದಂಡಗಳನ್ನು ಬೆಂಬಲಿಸಲಿದ್ದು, WLTP ಮಾನದಂಡಗಳ ಪ್ರಕಾರ ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 415 ಕಿ.ಮೀ ನಿಂದ ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನ ಮೈಲೇಜ್ ಪ್ರಮಾಣವು ಕಾರಿನಲ್ಲಿರುವ ವಿವಿಧ ಡ್ರೈವಿಂಗ್ ಮೋಡ್ ಆಧರಿಸಿ ನಿರ್ಧಾರವಾಗಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಕಾರಿನಲ್ಲಿರುವ ಎಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದಾಗ ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 6 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಿದ್ದರೆ ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಿದರೆ ಕೇವಲ 35 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಲಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಇ6 ಕಾರಿನಲ್ಲಿರುವ ಕೋಬಾಲ್ಟ್-ಮುಕ್ತ LiFePO4 ಬ್ಯಾಟರಿ ಪ್ಯಾಕ್ ಹೆಚ್ಚು ಸುರಕ್ಷಿತವಾಗಿದ್ದು, ಸ್ಫೋಟ ಮುಕ್ತವಾಗಿರುವ ಈ ಬ್ಯಾಟರಿ ಹೆಚ್ಚು ವಿಶ್ವಾರ್ಹತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಮೇಲೆ ಅಭಿವೃದ್ದಿಗೊಂಡಿದೆ. ಅತ್ಯುತ್ತಮ-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಉತ್ತಮವಾದ ಚಾಲನಾ ಅನುಭವವನ್ನು ಒದಗಿಸುವ ಹೊಸ ಕಾರು 4,695 ಎಂಎಂ ಉದ್ದ, 1,810 ಎಂಎಂ ಅಗಲ ಮತ್ತು 1,670 ಎಂಎಂ ಎತ್ತರ ಹೊಂದಿದ್ದು, 570 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಹಾಗೆಯೇ ಸ್ಪೋರ್ಟಿ ವಿನ್ಯಾಸದೊಂದಿಗೆ ಹೊಸ ಇ6 ಎಂಪಿವಿ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‌, ಕ್ರೋಮ್ ಬಾರ್‌ ಒಳಗೊಂಡ ಬಿವೈಡಿ ಲೊಗೊ, ಆಕರ್ಷಕ ಸ್ಪಾಯ್ಲರ್, ಸ್ಲಿಕ್ ಎಲ್ಇಡಿ ಟೈಲ್‌ಲೈಟ್‌ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಹೊಸ ಕಾರಿನಲ್ಲಿ ಹೊರಭಾಗದಲ್ಲಿರುವಂತೆ ಒಳಭಾಗದಲ್ಲಿರುವ ಫೀಚರ್ಸ್‌ಗಳು ಕೂಡಾ ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ 10 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಲೆದರ್ ಸೀಟ್‌ಗಳು, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್‌ಗಳು ಮತ್ತು ಏರ್ ಫಿಲ್ಟರ್ ಸಿಸ್ಟಂ ಹೊಂದಿದೆ.

ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಇ 6 ಎಲೆಕ್ಟ್ರಿಕ್ ಎಂಪಿವಿ ಭಾರತದಲ್ಲಿ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಹಲವಾರು ಸುರಕ್ಷತಾ ವೈಶಿಷ್ಟ್ಯತೆಗಳಿದ್ದು, 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ. ಹಾಗೆಯೇ ಹೊಸ ಕಾರಿನ ಖರೀದಿ ಮೇಲೆ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷಗಳ ಕಾಲ ವಾರಂಟಿ ನೀಡಿದೆ.

More from DriveSpark

Article Published On: Monday, November 1, 2021, 19:49 [IST]
English summary
Byd e6 electric mpv launched in india price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+