ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಕಾರು ತಯಾರಕ ಕಂಪನಿಗಳು ಏಪ್ರಿಲ್ ತಿಂಗಳ ಅಂತ್ಯದಲ್ಲಿ ತಮ್ಮ ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದವು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳಿಂದಾಗಿ ಹೊಸ ಕಾರುಗಳ ಬಿಡುಗಡೆಯನ್ನು ಮುಂದೂಡಲಾಗಿದೆ.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಕೋವಿಡ್ 19 ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣದಿಂದಾಗಿ ಸ್ಕೋಡಾ ಆಕ್ಟೇವಿಯಾ, ಹ್ಯುಂಡೈ ಅಲ್ಕಾಜರ್, ಹೊಸ ಕಿಯಾ ಸೊನೆಟ್ ಹಾಗೂ ಹೊಸ ಸೆಲ್ಟೋಸ್ ಕಾರುಗಳ ಬಿಡುಗಡೆಯನ್ನು ಮುಂದೂಡಲಾಗಿದೆ.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಸ್ಕೋಡಾ ಕಂಪನಿಯು ಶೀಘ್ರದಲ್ಲೇ ಹೊಸ ಆಕ್ಟೇವಿಯಾ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರ್ ಅನ್ನು ಕಂಪನಿಯು ಡೀಲರ್'ಗಳಿಗೆ ತಲುಪಿಸುತ್ತಿತ್ತು. ಈಗ ಕಂಪನಿಯು ಹೊಸ ಆಕ್ಟೇವಿಯಾ ಕಾರಿನ ಬಿಡುಗಡೆಯನ್ನು ಮುಂದೂಡಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಸ್ಕೋಡಾ ಕಂಪನಿಯು ಪರಿಸ್ಥಿತಿ ಸುಧಾರಿಸಿದ ನಂತರ ಹೊಸ ಕಾರಿನ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದೆ. ಇತ್ತೀಚೆಗೆ ಈ ಕಾರು ಮಹಾರಾಷ್ಟ್ರದ ಸ್ಕೋಡಾ ಡೀಲರ್'ಗಳ ಬಳಿ ಕಾಣಿಸಿಕೊಂಡಿದ್ದ ಕಾರಣ ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಬಹುದು ಎಂದು ನಂಬಲಾಗಿತ್ತು.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಸ್ಕೋಡಾ ಕಂಪನಿಯ ಉತ್ಪಾದನಾ ಘಟಕವು ಮಹಾರಾಷ್ಟ್ರದಲ್ಲಿದೆ. ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಹೊಸ ಆಕ್ಟೇವಿಯಾ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಈ ಕಾರನ್ನು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಹೊಸ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. ಈ ಕಾರು ಹಳೆಯ ಮಾದರಿಗಿಂತ ಹೆಚ್ಚು ಉದ್ದ ಹಾಗೂ ಅಗಲವಾಗಿದೆ. ಕೋವಿಡ್ 19 ಸ್ಕೋಡಾ ಕುಶಾಕ್‌ ಕಾರು ಬಿಡುಗಡೆಯ ಮೇಲೂ ಪರಿಣಾಮ ಬೀರಿದೆ.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಹ್ಯುಂಡೈ ಅಲ್ಕಾಜಾರ್ ಕಾರ್ ಅನ್ನು ಏಪ್ರಿಲ್ ಅಂತ್ಯದಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಕಾರಿನ ಬಿಡುಗಡೆಯನ್ನು ಮೇ ಅಂತ್ಯದವರೆಗೆ ಮುಂದೂಡಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಹ್ಯುಂಡೈ ಅಲ್ಕಾಜಾರ್ ಕಾರ್ ಅನ್ನು ಏಪ್ರಿಲ್ ಆರಂಭದಲ್ಲಿ ಅನಾವರಣಗೊಳಿಸಲಾಯಿತು. ಈ ಕಾರು ಕ್ರೆಟಾದ 5 ಸೀಟುಗಳ ಮಾದರಿಯಿಂದ ಸ್ಫೂರ್ತಿ ಪಡೆದ 6/7 ಸೀಟುಗಳ ಎಸ್‌ಯುವಿಯಾಗಿದೆ. ಹ್ಯುಂಡೈ ಅಲ್ಕಾಜರ್ ಬಿಡುಗಡೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಅಲ್ಕಾಜರ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಪರಿಚಯಿಸಿದ ನಂತರ ಅದರ ಬುಕ್ಕಿಂಗ್'ಗಳನ್ನು ಆರಂಭಿಸಬಹುದು ಎಂದು ನಂಬಲಾಗಿತ್ತು. ಇನ್ನು ಕಿಯಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು ಹೊಸ ಸೆಲ್ಟೋಸ್ ಹಾಗೂ ಹೊಸ ಸೊನೆಟ್ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿತ್ತು.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಆದರೆ ಈಗ ಕಂಪನಿಯು ಈ ಕಾರುಗಳ ಬಿಡುಗಡೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೋಸ್ ಕಾರಿನ ಗ್ರಾವಿಟಿ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಕರೋನಾ ಸಂಕಷ್ಟ: ಹೊಸ ಕಾರುಗಳ ಬಿಡುಗಡೆ ಮುಂದೂಡಿದ ಕಾರು ತಯಾರಕ ಕಂಪನಿಗಳು

ಮರ್ಸಿಡಿಸ್ ಬೆಂಝ್ ಕಂಪನಿಯು ಈ ತಿಂಗಳು ಜಿಎಲ್ಎ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿತ್ತು. ಈಗ ಈ ಎಸ್‌ಯುವಿಯ ಬಿಡುಗಡೆಯನ್ನು ಸಹ ಮುಂದೂಡಲಾಗಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Car companies postpones new car launches. Read in Kannada.
Story first published: Tuesday, April 27, 2021, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X