ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಭಾರತದಲ್ಲಿರುವ ಕಾರು ತಯಾರಕ ಕಂಪನಿಗಳು 2020ರ ಡಿಸೆಂಬರ್ ತಿಂಗಳ ಮಾರಾಟ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿವೆ. ಕೆಲವು ಕಂಪನಿಗಳು 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಹೆಚ್ಚಳವನ್ನು ಕಂಡರೆ, ಕೆಲವು ಕಾರು ತಯಾರಕ ಕಂಪನಿಗಳು ಕುಸಿತವನ್ನು ದಾಖಲಿಸಿವೆ.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಕರೋನಾ ಸಾಂಕ್ರಾಮಿಕದ ನಡುವೆಯೂ ಕಾರು ತಯಾರಕ ಕಂಪನಿಗಳ ಮಾರಾಟವು ಉತ್ತಮವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಕಾರು ತಯಾರಕ ಕಂಪನಿಗಳ ಮಾರಾಟದ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯು ನಂಬರ್ 1 ಸ್ಥಾನದಲ್ಲಿದೆ.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

2020ರ ಡಿಸೆಂಬರ್ ತಿಂಗಳಿನಲ್ಲಿ ಕಾರು ತಯಾರಕ ಕಂಪನಿಗಳು ಒಟ್ಟಾರೆಯಾಗಿ 2,76,544 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿವೆ. 2020ರ ನವೆಂಬರ್ ತಿಂಗಳಿನಲ್ಲಿ ಒಟ್ಟು 2,86,436 ಯುನಿಟ್ ಕಾರುಗಳು ಮಾರಾಟವಾಗಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಇದರಿಂದಾಗಿ 2020ರ ಡಿಸೆಂಬರ್ ತಿಂಗಳ ಮಾರಾಟವು ನವೆಂಬರ್ ತಿಂಗಳ ಮಾರಾಟಕ್ಕಿಂತ 3%ನಷ್ಟು ಕಡಿಮೆಯಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ 1,40,754 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಮಾರುತಿ ಸುಜುಕಿ ಕಂಪನಿಯು 2020ರ ನವೆಂಬರ್‌ ತಿಂಗಳಿನಲ್ಲಿ 1,35,775 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಡಿಸೆಂಬರ್‌ ತಿಂಗಳಿನಲ್ಲಿ ಕಂಪನಿಯ ಮಾರಾಟವು 3.67%ನಷ್ಟು ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಇನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹ್ಯುಂಡೈ ಕಂಪನಿಯು 2020ರ ಡಿಸೆಂಬರ್ ತಿಂಗಳಿನಲ್ಲಿ 47,400 ಕಾರುಗಳನ್ನು ಮಾರಾಟ ಮಾಡಿದೆ.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಕಂಪನಿಯು 2020ರ ನವೆಂಬರ್ ತಿಂಗಳಿನಲ್ಲಿ ಕಂಪನಿಯು 48,800 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಹ್ಯುಂಡೈ ಕಂಪನಿಯ ಮಾರಾಟವು ನವೆಂಬರ್ ತಿಂಗಳಿಗಿಂತ 2.87%ನಷ್ಟು ಕಡಿಮೆಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು 23,546 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ 21,641 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಡಿಸೆಂಬರ್ ತಿಂಗಳ ಮಾರಾಟವು ನವೆಂಬರ್ ತಿಂಗಳಿಗಿಂತ 8.80%ನಷ್ಟು ಹೆಚ್ಚಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಕಳೆದ ತಿಂಗಳು 16,182 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

2020ರ ನವೆಂಬರ್‌ ತಿಂಗಳಿನಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು 18,212 ಯೂನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಕಳೆದ ತಿಂಗಳು 11.15%ನಷ್ಟು ಕುಸಿದಿದೆ.

ಡಿಸೆಂಬರ್ ತಿಂಗಳ ಮಾರಾಟದಲ್ಲಿ ಏರಿಳಿತ ಕಂಡ ಕಾರು ತಯಾರಕ ಕಂಪನಿಗಳು

ಐದನೇ ಸ್ಥಾನದಲ್ಲಿರುವ ಕಿಯಾ ಮೋಟಾರ್ಸ್ 2020ರ ಡಿಸೆಂಬರ್‌ ತಿಂಗಳಿನಲ್ಲಿ 11,818 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ನವೆಂಬರ್‌ ತಿಂಗಳಿನಲ್ಲಿ 21,022 ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಕಳೆದ ತಿಂಗಳು 43.78%ನಷ್ಟು ಕುಸಿದಿದೆ.

Article Published On: Saturday, January 2, 2021, 18:10 [IST]
English summary
Car companies witness fluctuations in December month sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+