ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಯಾವುದೇ ತೊಂದರೆಯಾಗಿಲ್ಲವೆಂದು ಮಾರುತಿ ಸುಜುಕಿ ಕಂಪನಿಯ ಅಧ್ಯಕ್ಷರಾದ ಆರ್.ಸಿ.ಭಾರ್ಗವ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಇದರ ಹೊರತಾಗಿಯೂ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಜನರು ಸುಲಭವಾಗಿ ಕಾರುಗಳನ್ನು ಖರೀದಿಸುತ್ತಿದ್ದಾರೆ ಎಂದು ಇದರಿಂದ ಸಾಬೀತಾಗಿದೆ. ಕಾರುಗಳಿಗೆ ಸುಲಭವಾಗಿ ಹಣಕಾಸಿನ ಸೌಲಭ್ಯ ದೊರಕುತ್ತಿರುವುದು ಹಾಗೂ ಕಾರು ಸಾಲಗಳ ಮೇಲೆ ಕಡಿಮೆ ಬಡ್ಡಿ ದರ ವಿಧಿಸುತ್ತಿರುವುದು ಸಹ ಕಾರುಗಳ ಮಾರಾಟ ಹೆಚ್ಚಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಈ ಎಲ್ಲಾ ಕಾರಣಗಳಿಂದಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ರೂ.100 ಗಡಿ ದಾತಿದ್ದರೂ ಜನರು ಕಾರು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ ಎಂದು ಆರ್.ಸಿ.ಭಾರ್ಗವ ಹೇಳಿದರು. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ಇದೇ ವೇಳೆ ಇಂಧನಗಳ ಬೆಲೆ ಹೆಚ್ಚುತ್ತಿರುವ ಕಾರಣ ನೆರೆಯ ದೇಶವಾದ ನೇಪಾಳದಿಂದ ಪೆಟ್ರೋಲ್ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಸ್ಕ್ರ್ಯಾಪಿಂಗ್ ನೀತಿಯ ಬಗ್ಗೆ ಪ್ರತಿಕ್ರಿಯಿಸಿದ ಭಾರ್ಗವ, ಈ ನೀತಿಯಿಂದಾಗಿ ದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣವು ಕಡಿಮೆಯಾಗಲಿದೆ ಎಂದು ಹೇಳಿದರು.ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಬಂದ ನಂತರ ಜನರು ತಮ್ಮ ವಾಹನಗಳನ್ನು ಸರಿಯಾಗಿ ನಿರ್ವಹಿಸುವುದನ್ನು ಕಲಿಯಲಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಸ್ಕ್ರ್ಯಾಪಿಂಗ್ ನೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ ಅವರು, ಈ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದರಿಂದ ವಾಹನ ತಯಾರಕ ಕಂಪನಿಗಳಿಗೂ ತುಂಬಾ ಉಪಯೋಗವಾಗಲಿದೆ ಎಂದು ಹೇಳಿದರು.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಸ್ಕ್ರ್ಯಾಪಿಂಗ್ ನೀತಿಯ ಅಗತ್ಯತೆ, ಮೂಲಸೌಕರ್ಯ ಹಾಗೂ ಕಾರ್ಯಚಟುವಟಿಕೆಗಳನ್ನು ಸರಿಯಾಗಿ ಪಾಲಿಸಿದಾಗ ಅದರ ಪ್ರಯೋಜನಗಳು ಬಹಿರಂಗಗೊಳ್ಳುತ್ತವೆ ಎಂದು ಅವರು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ವಾಹನ ಸ್ಕ್ರ್ಯಾಪಿಂಗ್ ನೀತಿಯಡಿಯಲ್ಲಿ ಸರ್ಕಾರವು ಕಾಲಕಾಲಕ್ಕೆ ವಾಹನ ತಪಾಸಣೆ ನಡೆಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸರ್ಕಾರವು ಖಾಸಗಿ ಕಂಪನಿಗಳ ನೆರವಿನಿಂದ ಮಾನವರಹಿತ ಮಾಲಿನ್ಯ ಪರೀಕ್ಷಾ ಕೇಂದ್ರಗಳನ್ನು ತೆರೆಯಲಿದೆ.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಈ ಕೇಂದ್ರಗಳಲ್ಲಿನ ಪರೀಕ್ಷೆಗಳು ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿರುತ್ತವೆ. ಇದರಿಂದ ಭ್ರಷ್ಟಾಚಾರವನ್ನು ತಡೆಯಬಹುದು. ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು 5%ನಷ್ಟು ರಿಯಾಯಿತಿ ನೀಡುವ ನೀತಿಯನ್ನು ಸರ್ಕಾರವು ಮರುಪರಿಶೀಲಿಸಬೇಕು ಎಂದು ಅವರು ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಇತರ ದೇಶಗಳಲ್ಲಿ ಸ್ಕ್ರ್ಯಾಪ್ ವಾಹನಗಳನ್ನು ಮನ್ನಾ ಮಾಡುವ ನೀತಿಯು ಹಲವು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದ ಅವರು, ಇದನ್ನು ಭಾರತದಲ್ಲಿ ಶಾಶ್ವತವಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಪೆಟ್ರೋಲ್ ಬೆಲೆ ಏರಿಕೆ ನಡುವೆಯೂ ಹೆಚ್ಚಾದ ಕಾರುಗಳ ಮಾರಾಟ ಪ್ರಮಾಣ

ಮಾರುತಿ ಸುಜುಕಿ ಕಂಪನಿಯ ಹೊರತಾಗಿ, ಕೇಂದ್ರ ಸರ್ಕಾರದ ಸ್ಕ್ರ್ಯಾಪಿಂಗ್ ನೀತಿಯನ್ನು ರೆನಾಲ್ಟ್ ಕಂಪನಿಯು ಸಹ ಬೆಂಬಲಿಸಿದೆ. ಇದು ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ಹೆಜ್ಜೆ ಎಂದು ಹೇಳಿರುವ ರೆನಾಲ್ಟ್ ಕಂಪನಿಯು ಈ ನೀತಿಯ ಅನುಷ್ಠಾನದ ನಂತರ ದೇಶದ ಆರ್ಥಿಕ ಗತಿಯು ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದೆ.

Most Read Articles

Kannada
English summary
Car demand continue to rise despite fuel price hike. Read in Kannada.
Story first published: Sunday, March 21, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X