ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

2021ರ ಜೂನ್ ತಿಂಗಳಿನಲ್ಲಿ ಕಾರು ತಯಾರಕ ಕಂಪನಿಗಳು ಹೆಚ್ಚು ವಾಹನಗಳನ್ನು ರಫ್ತು ಮಾಡಿವೆ. ಜೂನ್ ತಿಂಗಳಿನಲ್ಲಿ ಭಾರತದಿಂದ ರಫ್ತು ಮಾಡಲಾದ ಟಾಪ್ 10 ಕಾರುಗಳ ಪಟ್ಟಿಯನ್ನು ಬಹಿರಂಗಪಡಿಸಲಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

2021ರ ಜೂನ್‌ ತಿಂಗಳಿನಲ್ಲಿ ಭಾರತದಿಂದ ಒಟ್ಟು 52,935 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ. 2020ರ ಜೂನ್ ತಿಂಗಳಿನಲ್ಲಿ ಭಾರತದಿಂದ ಒಟ್ಟು 24,561 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿತ್ತು. ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ಹ್ಯುಂಡೈ ಹಾಗೂ ಮಾರುತಿ ಸುಜುಕಿ ಕಂಪನಿಗೆ ಸೇರಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಈ ಟಾಪ್ 10 ಪಟ್ಟಿಯಲ್ಲಿ ಹ್ಯುಂಡೈ ಕಂಪನಿಯ ನಾಲ್ಕು ಕಾರುಗಳಿದ್ದರೆ, ಮಾರುತಿ ಸುಜುಕಿ ಕಂಪನಿಯ ಮೂರು ಕಾರುಗಳಿವೆ. ಇವುಗಳ ಜೊತೆಗೆ ನಿಸ್ಸಾನ್, ಫೋಕ್ಸ್‌ವ್ಯಾಗನ್ ಹಾಗೂ ಕಿಯಾ ಮೋಟಾರ್ಸ್‌ ಕಂಪನಿಯ ತಲಾ ಒಂದು ಕಾರುಗಳು ಈ ಪಟ್ಟಿಯಲ್ಲಿವೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಈ ಪಟ್ಟಿಯಲ್ಲಿ ನಿಸ್ಸಾನ್‌ ಕಂಪನಿಯ ಸನ್ನಿ ಸೆಡಾನ್ ಕಾರು ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು ಸನ್ನಿ ಸೆಡಾನ್ ಕಾರಿನ ಒಟ್ಟು 4,310 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. 2020ರ ಜೂನ್ ತಿಂಗಳಿನಲ್ಲಿ ಈ ಕಾರಿನ 1,327 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಸನ್ನಿ ಕಾರಿನ ರಫ್ತು ಪ್ರಮಾಣವು 2020ರ ಜೂನ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಜೂನ್ ತಿಂಗಳಿನಲ್ಲಿ 224.79% ನಷ್ಟು ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಹ್ಯುಂಡೈ ಕಂಪನಿಯ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಕ್ರೆಟಾ ಎರಡನೇ ಸ್ಥಾನದಲ್ಲಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಕಳೆದ ತಿಂಗಳು ಕ್ರೆಟಾ ಎಸ್‌ಯುವಿಯ 4,141 ಯುನಿಟ್‌ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 2020ರ ಜೂನ್‌ ತಿಂಗಳಿನಲ್ಲಿ ಈ ಎಸ್‌ಯುವಿಯ ಕೇವಲ 154 ಯುನಿಟ್‌ಗಳನ್ನು ಮಾತ್ರ ರಫ್ತು ಮಾಡಲಾಗಿತ್ತು.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಈ ವರ್ಷ ಕ್ರೆಟಾ ಎಸ್‌ಯುವಿಯ ರಫ್ತು ಪ್ರಮಾಣವು 2,589% ನಷ್ಟು ಹೆಚ್ಚಾಗಿದೆ. ಮಾರುತಿ ಸುಜುಕಿ ಕಂಪನಿಯ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಕಳೆದ ತಿಂಗಳು ಈ ಕಾರಿನ ಒಟ್ಟು 3,901 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. 2020ರ ಜೂನ್ ತಿಂಗಳಿನಲ್ಲಿ ಈ ಕಾರಿನ 512 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಈ ಬಾರಿ ಬಲೆನೊ ಕಾರಿನ ರಫ್ತು ಪ್ರಮಾಣವು 661.91% ನಷ್ಟು ಹೆಚ್ಚಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಫೋಕ್ಸ್‌ವ್ಯಾಗನ್ ಕಂಪನಿಯ ವೆಂಟೊ ಕಾರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ 3,193 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಈ ಕಾರಿನ 2,526 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ವೆಂಟೊ ಕಾರಿನ ರಫ್ತು ಪ್ರಮಾಣವು 26.41% ನಷ್ಟು ಹೆಚ್ಚಾಗಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರಿನ 3,024 ಯುನಿಟ್‌ಗಳನ್ನು ಕಳೆದ ತಿಂಗಳು ರಫ್ತು ಮಾಡಲಾಗಿದೆ. ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಈ ಕಾರಿನ 1,006 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಈ ವರ್ಷ ಡಿಜೈರ್ ಕಾರಿನ ರಫ್ತು ಪ್ರಮಾಣವು 200.60% ನಷ್ಟು ಹೆಚ್ಚಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ 10 ಕಾರು 2,999 ಯುನಿಟ್‌ ರಫ್ತಿನೊಂದಿಗೆ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಕಿಯಾ ಸೆಲ್ಟೋಸ್ 2,848 ಯುನಿಟ್‌ ರಫ್ತಿನೊಂದಿಗೆ 7ನೇ ಸ್ಥಾನದಲ್ಲಿದೆ.

ಜೂನ್ ತಿಂಗಳಿನಲ್ಲಿ ಏರಿಕೆ ಕಂಡ ಕಾರುಗಳ ರಫ್ತು ಪ್ರಮಾಣ

ಮಾರುತಿ ಎಸ್ ಪ್ರೆಸ್ಸೊ 2,674 ಯುನಿಟ್‌ ರಫ್ತಿನೊಂದಿಗೆ 8ನೇ ಸ್ಥಾನದಲ್ಲಿದೆ. ಹ್ಯುಂಡೈ ವೆರ್ನಾ 2,463 ಯುನಿಟ್‌ಗಳೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಹ್ಯುಂಡೈ ಓರಾ 1,794 ಯುನಿಟ್‌ಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.

Article Published On: Thursday, July 22, 2021, 12:57 [IST]
English summary
Cars export from India increases in June 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+