ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಆಕರ್ಷಕ ನೋಟ ಹಾಗೂ ವಿನ್ಯಾಸ ಹೊಂದಿರುವ ಕಾರುಗಳು ಭಾರತದಲ್ಲಿ ಯಾವಾಗಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತವೆ. ಯಾವುದೇ ದೋಷವಿರುವ ವಾಹನಗಳು ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾಗುತ್ತವೆ. ಇದೇ ರೀತಿಯ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಕಳಪೆ ವಿನ್ಯಾಸದಿಂದಾಗಿ ಹಲವು ಕಾರುಗಳು ಭಾರತದಿಂದ ಕಣ್ಮರೆಯಾಗಿವೆ. ಆ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

Nissan Evalia

ಕಳಪೆ ವಿನ್ಯಾಸದಿಂದಾಗಿ ಭಾರತದಿಂದ ಕಣ್ಮರೆಯಾದ ಕಾರುಗಳ ಪಟ್ಟಿಯಲ್ಲಿರುವ ಮೊದಲ ಕಾರು Nissan Evalia. Nissan Evalia ಕಾರ್ ಅನ್ನು Maruti Suzuki ಕಂಪನಿಯ Ertiga ಕಾರಿಗೆ ಪೈಪೋಟಿ ನೀಡುವ ಸಲುವಾಗಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದರ ಜೊತೆಗೆ ಈ ಕಾರು Toyota Innova ಕಾರಿನೊಂದಿಗೂ ಸ್ಪರ್ಧಿಸಿತು. Maruti Suzuki Ertiga ಹಾಗೂ Toyota Innova ಈ ಸೆಗ್ ಮೆಂಟಿನಲ್ಲಿ ಜನಪ್ರಿಯವಾಗಿವೆ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಅದರಲ್ಲೂ Toyota Innova ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಕಾರುಗಳ ನಡುವೆ ಸ್ಪರ್ಧಿಸಲು Nissan Evalia ವಿಫಲವಾದ ಕಾರಣ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. Evalia ಕಾರ್ ಅನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಲು Nissan ಕಂಪನಿಯು Ashok Leyland ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

Maruti Suzuki Zen Estilo ಮತ್ತು Maruti Suzuki A Star

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ Maruti Suzuki ಸಹ ತನ್ನ ಎರಡು ಕಾರು ಮಾದರಿಗಳನ್ನು ಆಕರ್ಷಕ ವಿನ್ಯಾಸ ಹೊಂದಿಲ್ಲದ ಕಾರಣಕ್ಕೆ ಮಾರಾಟದಿಂದ ಕೈಬಿಟ್ಟಿದೆ. Maruti Suzuki ಕಂಪನಿಯ Zen Estilo ಹಾಗೂ A Star ಕಾರುಗಳ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳಪೆ ವಿನ್ಯಾಸದ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

Zen Estilo ಕಾರ್ ಅನ್ನು ಭಾರತದಲ್ಲಿ 2006 ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರಿನ ವಿನ್ಯಾಸ ಹಾಗೂ ಇಂಟಿರಿಯರ್ ಡಿಸೈನ್ ಆಕರ್ಷಕವಲ್ಲದ ಕಾರಣಕ್ಕೆ ಈ ಕಾರು ಭಾರತೀಯ ಗ್ರಾಹಕರನ್ನು ಸೆಳೆಯಲು ವಿಫಲವಾಯಿತು. ಈ ಕಾರಣಕ್ಕೆ Maruti Suzuki ಕಂಪನಿಯು ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು. ಈ ಕಾರಿನಂತೆಯೇ A Star ಕಾರು ಸಹ ಹೆಚ್ಚು ಗ್ರಾಹಕರನ್ನು ತಲುಪದ ಕಾರಣಕ್ಕೆ ಮಾರುಕಟ್ಟೆಯಿಂದ ಹೊರ ಬಿದ್ದಿತು.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

Mahindra Quanto ಹಾಗೂ Mahindra Verito Vibe

Maruti Suzuki ಕಂಪನಿಯಂತೆಯೇ Mahindra and Mahindra ಕಂಪನಿಯು ಸಹ ತನ್ನ ಎರಡು ಕಾರುಗಳ ಮಾರಾಟವನ್ನು ಕಡಿಮೆ ಆಕರ್ಷಕ ವಿನ್ಯಾಸದ ಕಾರಣಕ್ಕೆ ಸ್ಥಗಿತಗೊಳಿಸಿತು. Quanto ಹಾಗೂ Verito Vibe ಕಳಪೆ ವಿನ್ಯಾಸದ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡ Mahindra ಕಂಪನಿಯ ಕಾರುಗಳಾಗಿವೆ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

Quanto ಕಾರು Mahindra ಕಂಪನಿಯ ಮತ್ತೊಂದು ಜನಪ್ರಿಯ ಕಾರ್ ಆದ Xylo ಕಾರಿನ ಶೈಲಿಯನ್ನು ಹೋಲುತ್ತದೆ. ಆದರೆ Quanto ಕಾರು Xylo ಕಾರಿನಂತೆ ಭಾರತೀಯ ಗ್ರಾಹಕರನ್ನು ಸೆಳೆಯಲು ವಿಫಲವಾಯಿತು. ಉತ್ತಮವಾದ ಎಂಜಿನ್ ಹಾಗೂ ಗಣನೀಯ ಪ್ರಮಾಣದ ಫೀಚರ್ ಗಳನ್ನು ಹೊಂದಿದ್ದರೂ Quanto ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ವಿಫಲವಾಯಿತು.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಇನ್ನು Mahindra ಕಂಪನಿಯ Verito Vibe ಕಾರು ಸಹ ಕಡಿಮೆ ಆಕರ್ಷಕ ನೋಟದಿಂದಾಗಿ ಭಾರತವನ್ನು ತೊರೆಯಿತು. ಈ ಕಾರು 2013 ರಿಂದ 2016 ರವರೆಗೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ವಿಫಲವಾದ ಕಾರಣ Mahindra and Mahindra ಕಂಪನಿಯು ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಭಾರತದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳು, ಸೆಡಾನ್‌ ಕಾರುಗಳು ಹಾಗೂ ಎಸ್‌ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಮೂರು ಪ್ರಕಾರಗಳ ಮಿಶ್ರಣವನ್ನು ಹೊಂದಿರುವ ಬಾಡಿ ರಚನೆಯೊಂದಿಗೆ ಕೆಲವು ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಅಂತಹ ಕಾರುಗಳನ್ನು ಕ್ರಾಸ್‌ಓವರ್‌ ಕಾರುಗಳು (ಸಿಒಸಿ) ಎಂದು ಕರೆಯಲಾಗುತ್ತದೆ. ಈ ಕಾರುಗಳು ಹ್ಯಾಚ್‌ಬ್ಯಾಕ್‌, ಸೆಡಾನ್ ಹಾಗೂ ಎಸ್‌ಯುವಿ ಬಾಡಿ ಸ್ಟೈಲ್ ನಲ್ಲಿ ನಿರ್ಮಾಣವಾಗಿರುತ್ತವೆ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಕ್ರಾಸ್ಒವರ್ ಕಾರುಗಳು ತಮ್ಮ ನೋಟದಿಂದ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತವೆ. ಪ್ರಾಯೋಗಿಕತೆ ಹಾಗೂ ಕ್ರಿಯಾತ್ಮಕತೆಯಲ್ಲಿ ಈ ಶೈಲಿಯ ಕಾರುಗಳ ಬಗ್ಗೆ ಯಾವುದೇ ಅತೃಪ್ತಿ ಇಲ್ಲ. ಆದರೆ ಕೆಲವು ಕ್ರಾಸ್ಒವರ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಭಾರೀ ನಿರೀಕ್ಷೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೆಲವು ಕ್ರಾಸ್‌ಓವರ್‌ ಕಾರುಗಳು ಕಣ್ಮರೆಯಾಗಿವೆ.

ಕಳಪೆ ವಿನ್ಯಾಸದ ಕಾರಣಕ್ಕೆ ಗ್ರಾಹಕರನ್ನು ಆಕರ್ಷಿಸಲು ವಿಫಲವಾದ ಕಾರುಗಳಿವು

ಅವುಗಳಲ್ಲಿ ರೆನಾಲ್ಟ್ ಕ್ಯಾಪ್ಚರ್, ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸ್, ಟಾಟಾ ಅರಿಯಾ, ಟೊಯೊಟಾ ಎಟಿಯೋಸ್ ಕ್ರಾಸ್, ಫಿಯೆಟ್ ಅವೆಂಚುರಾ ಗಳು ಸೇರಿವೆ. ಈ ಕ್ರಾಸ್‌ ಓವರ್‌ ಕಾರುಗಳು ಎಸ್‌ಯುವಿಗಳಂತೆ ಆಕರ್ಷಕವಾಗಿದ್ದರೂ ಬಹುತೇಕ ಜನರಿಗೆ ಇಷ್ಟವಾಗದ ಕಾರಣಕ್ಕೆ ಇವುಗಳ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. ಭಾರತವು ವಿಶ್ವದ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಕಾರಣಕ್ಕೆ ವಿಶ್ವದ ಖ್ಯಾತ ಕಾರು ತಯಾರಕ ಕಂಪನಿಗಳು ಭಾರತದಲ್ಲಿ ತಮ್ಮ ಕಾರುಗಳನ್ನು ಬಿಡುಗಡೆಗೊಳಿಸುತ್ತವೆ. ಕೆಲವು ಕಾರುಗಳು ಗ್ರಾಹಕರನ್ನು ಮೋಡಿ ಮಾಡಲು ಸಫಲವಾದರೆ, ಇನ್ನೂ ಕೆಲವು ಕಾರುಗಳು ಗ್ರಾಹಕರನ್ನು ಮೋಡಿ ಮಾಡಲು ವಿಫಲವಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗುತ್ತವೆ.

Most Read Articles

Kannada
English summary
Cars failed to attract customers due to poor design details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X