ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಮಾರ್ಚ್ ತಿಂಗಳಿನಲ್ಲಿ ರೆನಾಲ್ಟ್, ಜೀಪ್, ಮರ್ಸಿಡಿಸ್ ಬೆಂಝ್, ಟಾಟಾ ಮೋಟಾರ್ಸ್, ಬೆಂಟ್ಲಿ ಕಂಪನಿಗಳು ತಮ್ಮ ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದವು. ಈ ತಿಂಗಳು ಭಾರತದಲ್ಲಿ ಬಿಡುಗಡೆಯಾದ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಹೊಸ ರೆನಾಲ್ಟ್ ಟ್ರೈಬರ್

ರೆನಾಲ್ಟ್ ಕಂಪನಿಯು ತನ್ನ ಹೊಸ ಟ್ರೈಬರ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.30 ಲಕ್ಷಗಳಾಗಿದೆ. ಮಾರ್ಚ್ 9ರಿಂದ ಹೊಸ ಟ್ರೈಬರ್ ಕಾರಿನ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ರೆನಾಲ್ಟ್ ಕಂಪನಿಯು ಟ್ರೈಬರ್ ಕಾರ್ ಅನ್ನು ಹೊಸ ನೋಟ ಹಾಗೂ ಫೀಚರ್'ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಕಾರ್ ಅನ್ನು ಮೊದಲ ಬಾರಿಗೆ 2019ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ರೆನಾಲ್ಟ್ ಕಂಪನಿಯ ಈ ಕಾಂಪ್ಯಾಕ್ಟ್ ಎಂಪಿವಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕಳೆದ ವರ್ಷ ಈ ಕಾರಿನ ಟರ್ಬೊ ಮಾದರಿಯನ್ನುಬಿಡುಗಡೆಗೊಳಿಸಿದ ನಂತರ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಜೀಪ್ ವ್ರಾಂಗ್ಲರ್

ಜೀಪ್ ಕಂಪನಿಯು ತನ್ನ ಮೇಡ್ ಇನ್ ಇಂಡಿಯಾ ವ್ರಾಂಗ್ಲರ್ ಕಾರ್ ಅನ್ನು ಈ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.53.90 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ವ್ರಾಂಗ್ಲರ್ ಎಸ್‌ಯುವಿಯ ವಿತರಣೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಈ ಎಸ್‌ಯುವಿಯನ್ನು ಅನ್ ಲಿಮಿಟೆಡ್ ಹಾಗೂ ರುಬಿಕಾನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್

ಮರ್ಸಿಡಿಸ್ ಬೆಂಝ್ ತನ್ನ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ರೂ.39.90 ಲಕ್ಷಗಳಾಗಿದೆ. ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರ್ ಅನ್ನು ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಗಳು ಹಾಗೂ ಏರೋಡೈನಾಮಿಕ್ ಡಿಸೈನ್, ಐಷಾರಾಮಿ ಫೀಚರ್'ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್‌ ಪೆಟ್ರೋಲ್ ಮಾದರಿಯ ಬೆಲೆ ರೂ.39.90 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆ ರೂ.40,90 ಲಕ್ಷಗಳಾಗಿದೆ. ಇನ್ನು ಎಎಂಜಿ ಎ 35 4 ಮ್ಯಾಟಿಕ್ ಮಾದರಿಯ ಬೆಲೆ ರೂ.56.24 ಲಕ್ಷಗಳಾಗಿದೆ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಹೊಸ ಬೆಂಟ್ಲಿ ಬೆಂಟಾಯ್ಗಾ

ಬೆಂಟ್ಲಿ ಕಂಪನಿಯು ತನ್ನ ಹೊಸ ಬೆಂಟಾಯ್ಗಾ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.10 ಕೋಟಿಗಳಾಗಿದೆ. ಈ ಕಾರಿನ ಬುಕ್ಕಿಂಗ್'ಗಳನ್ನು ದೆಹಲಿ, ಮುಂಬೈ ಹಾಗೂ ಹೈದರಾಬಾದ್‌ ನಗರಗಳಲ್ಲಿ ಆರಂಭಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಈ ಕಾರಿನ ಅದರ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಜೊತೆಗೆ ಹೊಸ ಫೀಚರ್'ಗಳನ್ನು ಸೇರಿಸಲಾಗಿದೆ. ಆದರೆ ಎಂಜಿನ್'ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಟಾಟಾ ಟಿಯಾಗೊ ಎಕ್ಸ್‌ಟಿಎ ಎಎಂಟಿ

ಟಾಟಾ ಮೋಟಾರ್ಸ್ ಭಾರತದಲ್ಲಿ ಟಿಯಾಗೊ ಎಕ್ಸ್‌ಟಿಎ ಎಎಂಟಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷಗಳಾಗಿದೆ. ಟಿಯಾಗೊ ಎಕ್ಸ್‌ಟಿಎ ಎಎಂಟಿ ಈ ಮಾದರಿಯ ನಾಲ್ಕನೇ ಎಎಂಟಿ ಆಯ್ಕೆಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಈ ಕಾರಣಕ್ಕೆ ಈ ಕಾರು ಹೊಸ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಹೊಸ ಮಾದರಿಯು ಟಿಯಾಗೊದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಮಾದರಿಯಾಗಿದೆ. ಇದಕ್ಕೂ ಮುನ್ನ ಟಿಯಾಗೊ ಎಕ್ಸ್‌ ಝಡ್‌ಎ ಅಗ್ಗದ ಆಟೋಮ್ಯಾಟಿಕ್ ಮಾದರಿಯಾಗಿತ್ತು.

ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿವು

ಈ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.6.46 ಲಕ್ಷಗಳಾಗಿದೆ. ಕಂಪನಿಯ ಎಂಟ್ರಿ ಲೆವೆಲ್ ಮಾದರಿಯಾದ ಈ ಕಾರಿನ ಬೆಲೆ ರೂ.4.85 ಲಕ್ಷಗಳಿಂದ ರೂ.6.84 ಲಕ್ಷಗಳಾಗಿದೆ.

Most Read Articles

Kannada
English summary
Cars launched in Indian market in March 2021. Read in Kannada.
Story first published: Wednesday, March 31, 2021, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X