ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ದೇಶದಲ್ಲಿ ವಾಯು ಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ದೆಹಲಿ, ನೋಯ್ಡಾದಂತಹ ನಗರಗಳಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯದಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ನಗರಗಳಲ್ಲಿ ಗಾಳಿಯ ಗುಣಮಟ್ಟವು ವಿಪರೀತವಾಗಿ ಹದಗೆಟ್ಟಿದೆ. ಇದೇ ವೇಳೆ ಮನೆಯೊಳಗಿನ ಗಾಳಿಯೂ ವಿಷಪೂರಿತವಾಗುತ್ತಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಈ ಸನ್ನಿವೇಶದಲ್ಲಿ ಕಾರುಗಳ ಒಳಗಿರುವ ಏರ್ ಪ್ಯೂರಿಫೈಯರ್ ಗಳು ಮಹತ್ವ ಪಡೆದುಕೊಳ್ಳುತ್ತಿವೆ. ಕಾರಿನಲ್ಲಿ ತೆರಳುತ್ತಿರುವವರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರೆ ಇತರ ವಾಹನಗಳಿಂದ ಹೊರಬರುವ ವಿಷಕಾರಿ ಹೊಗೆಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗ ಅನೇಕ ಕಾರು ತಯಾರಕ ಕಂಪನಿಗಳು ಫ್ಯಾಕ್ಟರಿ ಫಿಟೆಡ್ ಏರ್ ಪ್ಯೂರಿಫೈಯರ್ ಗಳನ್ನು ನೀಡುತ್ತಿವೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಕಾರು ಚಾಲನೆ ಮಾಡುವಾಗ ಈ ಏರ್ ಪ್ಯೂರಿಫೈಯರ್ ಗಳು ಕಾರಿನಲ್ಲಿರುವವರನ್ನು ಮಾಲಿನ್ಯದಿಂದ ಮುಕ್ತಗೊಳಿಸುತ್ತವೆ. ಕಾರು ಖರೀದಿಸಲು ಬಯಸುವವರು ಕಡಿಮೆ ಬೆಲೆಯಲ್ಲಿ ಏರ್ ಪ್ಯೂರಿಫೈಯರ್ ಒದಗಿಸುವ ಕಾರುಗಳಿಗೆ ಆದ್ಯತೆ ನೀಡಬಹುದು. ಏರ್ ಪ್ಯೂರಿಫೈಯರ್ ಫೀಚರ್ ಹೊಂದಿರುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

1. Hyundai Venue

ವೆನ್ಯೂ, ಹ್ಯುಂಡೈ ಕಂಪನಿಯ ಜನಪ್ರಿಯ ಸಬ್‌ಕಾಂಪ್ಯಾಕ್ಟ್ ಎಸ್‌ಯು‌ವಿಯಾಗಿದೆ. ವೆನ್ಯೂ ಭಾರತದಲ್ಲಿ ಏರ್ ಪ್ಯೂರಿಫೈಯರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಎಸ್‌ಯು‌ವಿಯಾಗಿದೆ. ಈ ಎಸ್‌ಯು‌ವಿಯಲ್ಲಿರುವ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್ ಅನ್ನು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮೂಲಕ ಅಥವಾ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕಂಟ್ರೋಲ್ ಮಾಡಬಹುದು.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಏರ್ ಪ್ಯೂರಿಫೈಯರ್ ವೈಶಿಷ್ಟ್ಯವು ಹ್ಯುಂಡೈ ವೆನ್ಯೂದ SX(O) ಹಾಗೂ SX + ಮಾದರಿಗಳಲ್ಲಿ ಲಭ್ಯವಿದೆ. ವೆನ್ಯೂ SX(O) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 11.48 ಲಕ್ಷಗಳಿಂದ ರೂ. 11.79 ಲಕ್ಷಗಳಾದರೆ, SX + ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 11.68 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

2. Hyundai Creta

ಕ್ರೆಟಾ, ಹ್ಯುಂಡೈ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‌ಯು‌ವಿಯಾಗಿದೆ. ಕ್ರೆಟಾದ ಹೊಸ ಫೇಸ್‌ಲಿಫ್ಟ್ ಮಾದರಿಗಳಲ್ಲಿ ಏರ್ ಪ್ಯೂರಿಫೈಯರ್ ವೈಶಿಷ್ಟ್ಯವನ್ನು ನೀಡಲಾಗುತ್ತಿದೆ. ಈ ಎಸ್‌ಯು‌ವಿಯ ಕ್ಯಾಬಿನ್‌ನಲ್ಲಿ, ಮುಂಭಾಗದ ಆರ್ಮ್‌ರೆಸ್ಟ್‌ನಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್ ನೀಡಲಾಗುತ್ತದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಈ ಎಸ್‌ಯು‌ವಿಯ ಕ್ಯಾಬಿನ್ ಒಳಗೆ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿಯನ್ನು ನೀಡುವ ಡಿಸ್ಪ್ಲೇಯನ್ನು ಸಹ ನೀಡಲಾಗುತ್ತದೆ. ಹ್ಯುಂಡೈ ಕ್ರೆಟಾ ಎಸ್‌ಯು‌ವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 10.16 ಲಕ್ಷಗಳಿಂದ ರೂ. 17.87 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

3. Kia Seltos

ಕಿಯಾ ಸೆಲ್ಟೋಸ್, ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಆಟೋಮ್ಯಾಟಿಕ್ ಏರ್ ಪ್ಯೂರಿಫೈಯರ್ ಸಿಸ್ಟಂನೊಂದಿಗೆ ನೀಡಲಾದ ಮೊದಲ ಕಾರು. ಏರ್ ಪ್ಯೂರಿಫೈಯರ್ ಅನ್ನು ಕಿಯಾ ಸೆಲ್ಟೋಸ್‌ನ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಈ ಎಸ್‌ಯು‌ವಿಯಲ್ಲಿರುವ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್ ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿದ್ದು, ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ಬಹು ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಏರ್ ಪ್ಯೂರಿಫೈಯರ್ ಕ್ಯಾಬಿನ್ ಅನ್ನು ಯಾವುದೇ ಕೆಟ್ಟ ವಾಸನೆಯಿಂದ ಮುಕ್ತವಾಗಿಡುವ ಆಕರ್ಷಕ ಸುಗಂಧ ವಿತರಕವೂ ಆಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

4. MG ZS EV

MG ZS EV ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. MG ZS EV ದೇಶಿಯ ಮಾರುಕಟ್ಟೆಯಲ್ಲಿ ಏರ್ ಪ್ಯೂರಿಫೈಯರ್ ಹೊಂದಿರುವ ಏಕೈಕ ಎಲೆಕ್ಟ್ರಿಕ್ ಕಾರು. MG ZS EV ಟಚ್‌ಸ್ಕ್ರೀನ್ ಸಿಸ್ಟಂ ಹಾಗೂ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದಾದ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ ಹೊಂದಿದೆ. MG ZS EV ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 21 ಲಕ್ಷಗಳಿಂದ ರೂ. 24.68 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

5. Kia Carnival

ಕಾರ್ನಿವಲ್, ಕಿಯಾ ಮೋಟಾರ್ಸ್‌ ಕಂಪನಿಯು ಏರ್ ಪ್ಯೂರಿಫೈಯರ್‌ ನೀಡಿದ ಎರಡನೇ ಕಾರು. ಈ ಏರ್ ಪ್ಯೂರಿಫೈಯರ್ ಸಿಸ್ಟಂ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕ್ಯಾಬಿನ್ ಒಳಗಿನ ಗಾಳಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕಿಯಾ ಕಾರ್ನಿವಲ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 24.95 ಲಕ್ಷಗಳಿಂದ ರೂ. 33.99 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

6. Kia Sonet

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸಾನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯು‌ವಿಯಲ್ಲೂ ಏರ್ ಪ್ಯೂರಿಫೈಯರ್ ನೀಡುತ್ತದೆ. ಕಿಯಾ ಸಾನೆಟ್ ಎಸ್‌ಯು‌ವಿಯು ವೈರಸ್ ರಕ್ಷಣೆ ಹೊಂದಿರುವ ಏರ್ ಪ್ಯೂರಿಫೈಯರ್ ಸಿಸ್ಟಂ ಹೊಂದಿದೆ. ಕಿಯಾ ಸಾನೆಟ್‌ ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 6.89 ಲಕ್ಷಗಳಿಂದ ರೂ. 13.55 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

7. Hyundai i20

ಹ್ಯುಂಡೈ ಕಂಪನಿಯು ತನ್ನ i20 ಕಾರಿನ ಹೊಸ ಮಾದರಿಯಲ್ಲಿ ಏರ್ ಪ್ಯೂರಿಫೈಯರ್ ನೀಡುತ್ತಿದೆ. ಕಂಪನಿಯು i20 ಕಾರಿನ Asta (O), Asta Turbo ಹಾಗೂ Asta CVT ಮಾದರಿಗಳಲ್ಲಿ ಏರ್ ಪ್ಯೂರಿಫೈಯರ್ ನೀಡುತ್ತದೆ. ಹ್ಯುಂಡೈ i20 ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.91 ಲಕ್ಷಗಳಿಂದ ರೂ. 11.40 ಲಕ್ಷಗಳಾಗಿದೆ.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

8. Honda City

ಹೋಂಡಾ ಸಿಟಿ ಕಾರಿನ ಐದನೇ ತಲೆಮಾರಿನ ಮಾದರಿಯಲ್ಲಿ ಏರ್ ಪ್ಯೂರಿಫೈಯರ್ ನೀಡಲಾಗುತ್ತದೆ. ಈ ಏರ್ ಪ್ಯೂರಿಫೈಯರ್ ನಾಲ್ಕು ಪದರದ ಫಿಲ್ಟರ್‌ ಹೊಂದಿದ್ದು, ಗಾಳಿಯನ್ನು ಸ್ವಚ್ಛಗೊಳಿಸಿ, ವೈರಸ್‌ಗಳಿಂದ ರಕ್ಷಿಸುತ್ತದೆ. ಈ ಏರ್ ಫಿಲ್ಟರ್ PM 2.5 (ಮಾರ್ಟಿಕ್ಯುಲೇಟ್ ಮ್ಯಾಟರ್ 2.5) ಅನ್ನು 80% ವರೆಗೂ ಫಿಲ್ಟರ್ ಮಾಡಬಹುದು.

ಭಾರತದಲ್ಲಿ ಫ್ಯಾಕ್ಟರಿ ಫಿಟ್ಟೆಡ್ ಏರ್ ಪ್ಯೂರಿಫೈಯರ್‌ನೊಂದಿಗೆ ಮಾರಾಟವಾಗುವ ಕಾರುಗಳಿವು

ಗಮನಿಸಬೇಕಾದ ಸಂಗತಿಯೆಂದರೆ, ಹೋಂಡಾ ಸಿಟಿ ಕಾರಿನಲ್ಲಿ ಏರ್ ಪ್ಯೂರಿಫೈಯರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಿಲ್ಲ. ಬದಲಿಗೆ ಒಂದು ಪರಿಕರವಾಗಿ ನೀಡಲಾಗುತ್ತದೆ. ಭಾರತದಲ್ಲಿ ಐದನೇ ತಲೆಮಾರಿನ ಹೋಂಡಾ ಸಿಟಿ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 11.16 ಲಕ್ಷಗಳಿಂದ ಆರಂಭವಾಗುತ್ತದೆ.

Most Read Articles

Kannada
English summary
Cars with factory fitted air purifier in domestic market details
Story first published: Wednesday, November 17, 2021, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X