ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜನರು ಸ್ವಂತ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಭಾರತೀಯರು ಹೊಸ ವಾಹನಗಳ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಕಳೆದ ತಿಂಗಳು ಮಾರಾಟವಾದ ಹೊಸ ವಾಹನಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ. ಇದರಿಂದ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಮಾರಾಟ ಮಾಡಲು ಹೆಣಗಾಡುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಕಾರು ಖರೀದಿಸುವವರು ಮೊದಲು ವಿಚಾರಿಸುವುದು ಆ ಕಾರು ನೀಡುವ ಮೈಲೇಜ್ ಬಗ್ಗೆ. ಹೆಚ್ಚು ಇಂಧನ ಬಳಸದೇ ಹೆಚ್ಚು ಮೈಲೇಜ್ ನೀಡುವ ಕಾರುಗಳಿಗೆ ಜನರು ಆದ್ಯತೆ ನೀಡುತ್ತಾರೆ. ಭಾರತದಲ್ಲಿ ಮಾರಾಟವಾಗುವ ಕೆಲವು ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ. ಭಾರತದಲ್ಲಿ ಮಾರಾಟವಾಗುವ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio)

ಮೈಲೇಜ್: 26.68 ಕಿ.ಮೀ

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ತಲೆಮಾರಿನ ಸೆಲೆರಿಯೊ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿಗೆ ಹೊಸ ನೀಡಿ, ಹಲವು ತಂತ್ರಜ್ಞಾನಗಳನ್ನು ಸೇರಿಸಲಾಗಿದೆ. ಜೊತೆಗೆ ಈ ಕಾರು ಅತಿ ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದು ವಿಶೇಷ. ಮಾರುತಿ ಸುಜುಕಿ ಸೆಲೆರಿಯೊ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ ಗರಿಷ್ಠ 26.68 ಕಿ.ಮೀ ಮೈಲೇಜ್ ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಸೆಲೆರಿಯೊ ಕಾರಿನ ಎಎಂಟಿ ಆಯ್ಕೆಯು ಅಂತಹ ಗರಿಷ್ಠ ಮೈಲೇಜ್ ನೀಡುತ್ತದೆ. ಕಂಪನಿಯ ಡ್ಯುಯಲ್ ಜೆಟ್ ಕೆ 10 ಪೆಟ್ರೋಲ್ ಎಂಜಿನ್ ಈ ಗರಿಷ್ಠ ಮೈಲೇಜ್'ಗೆ ಪ್ರಮುಖ ಕಾರಣವಾಗಿದೆ. ಈ ಎಂಜಿನ್ ಗರಿಷ್ಠ 67 ಬಿಹೆಚ್‌ಪಿ ಪವರ್ ಹಾಗೂ 89 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ತಲೆಮಾರಿನ ಸೆಲೆರಿಯೊ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 4.99 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಡಿಜೈರ್ (Maruti Suzuki Dzire)

ಮೈಲೇಜ್: 24.12 ಕಿ.ಮೀ

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಡಿಸೈರ್ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 24.12 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 1.2 ಲೀಟರ್ ಕೆ 12ಎನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್'ನ ಎಎಂಟಿ ಆಯ್ಕೆಯು ಪ್ರತಿ ಲೀಟರ್ ಪೆಟ್ರೋಲ್‌ಗೆ 24.12 ಕಿಮೀ ಮೈಲೇಜ್ ನೀಡುತ್ತದೆ. ಡಿಜೈರ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.99 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಟೊಯೊಟಾ ಗ್ಲಾಂಝಾ (Toyota Glanza)

ಮೈಲೇಜ್: 23.87 ಕಿ.ಮೀ

ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಯ ಸಹಭಾಗಿತ್ವದ ಮೂಲಕ ಬಲೆನೊ ಕಾರು ಮಾದರಿಯನ್ನು ಗ್ಲಾಂಝಾ ಹೆಸರಿನಲ್ಲಿ ಮಾರಾಟ ಮಾಡಲು ಪಾಲುದಾರಿಕೆ ಹೊಂದಿದೆ. ಕಂಪನಿಯು ಈ ಕಾರ್ ಅನ್ನು ಕೆಲವು ಮಾರ್ಪಾಡುಗಳೊಂದಿಗೆ ಮಾರಾಟ ಮಾಡುತ್ತದೆ. ಮೂಲಗಳ ಪ್ರಕಾರ ಟೊಯೊಟಾ ಗ್ಲಾಂಝಾ ಪ್ರತಿ ಲೀಟರಿಗೆ 23.87 ಕಿ.ಮೀ ಮೈಲೇಜ್ ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಈ ಕಾರಿನಲ್ಲಿ 1.2 ಲೀಟರ್ ಎಂಜಿನ್ ಅಳವಡಿಸಲಾಗಿದೆ. ಜೊತೆಗೆ 12 ವೋಲ್ಟ್ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಈ ಕಾರು ಭಾರತದ ಮೂರನೇ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಎನಿಸಿದೆ. ಮೈಲ್ಡ್ ಹೈಬ್ರಿಡ್ ವೈಶಿಷ್ಟ್ಯವನ್ನು ಹೊಂದಿರುವ Glanza ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 7.65 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift)

ಮೈಲೇಜ್: 23.76 ಕಿ.ಮೀ

ಸ್ವಿಫ್ಟ್ ಭಾರತದ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಈ ಕಾರು ಹೆಚ್ಚು ಮಾರಾಟವಾಗಲು ಮೈಲೇಜ್ ಸಹ ಕಾರಣವಾಗಿದೆ. ಕಡಿಮೆ ಬೆಲೆ, ಕಡಿಮೆ ನಿರ್ವಹಣಾ ವೆಚ್ಚವೇ ಈ ಹ್ಯಾಚ್ ಬ್ಯಾಕ್ ಕಾರು ಹೆಚ್ಚು ಮಾರಾಟವಾಗಲು ಕಾರಣ. ಈ ಕಾರು ಕೆ 12ಎನ್ ಪೆಟ್ರೋಲ್ ಎಂಜಿನ್ ನಿಂದ ಹೊಂದಿದೆ. ಇದರ ಎಎಂಟಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್'ಗೆ 23.76 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.85 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಆಲ್ಟೊ (Maruti Suzuki Alto)

ಮೈಲೇಜ್: 22.05 ಕಿ.ಮೀ

ಆಲ್ಟೊ, ಮಾರುತಿ ಸುಜುಕಿ ಕಂಪನಿಯ ಅತ್ಯಂತ ಚಿಕ್ಕ ಕಾರು ಮಾದರಿಯಾಗಿದೆ. ದೊಡ್ಡ ಪಾರ್ಕಿಂಗ್ ಸ್ಥಳಗಳನ್ನು ಹೊಂದಿರದ ಹಾಗೂ ನಗರದಲ್ಲಿ ಹೆಚ್ಚು ಪ್ರಯಾಣಿಸುವವರಿಗೆ ಈ ಕಾರು ಸೂಕ್ತ ವಾಹನವಾಗಿದೆ. ಈ ಕಾರಿನಲ್ಲಿ 0.8 ಲೀಟರ್ ಎಂಜಿನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 22.05 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ ಸಿ‌ಎನ್‌ಜಿ ಆಯ್ಕೆ ಸಹ ನೀಡಲಾಗಿದೆ. ಸಿ‌ಎನ್‌ಜಿ ಮಾದರಿಯು ಪ್ರತಿ ಕೆ.ಜಿಗೆ ಗರಿಷ್ಠ 31.59 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 3.15 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ರೆನಾಲ್ಟ್ ಕ್ವಿಡ್ (Renault Kwid)

ಮೈಲೇಜ್: 22 ಕಿ.ಮೀ

ರೆನಾಲ್ಟ್ ಕ್ವಿಡ್ ಕಾರು 0.8 ಲೀಟರ್ ಹಾಗೂ 1.0 ಲೀಟರ್ ಎಂಬ ಎರಡು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತದೆ. ಇವುಗಳಲ್ಲಿ, 1.0 ಲೀಟರ್ ಎಎಂಟಿ ಗೇರ್ ಬಾಕ್ಸ್ ಮಾದರಿಯು ಪ್ರತಿ ಲೀಟರಿಗೆ 22 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 4.11 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ದಟ್ಸನ್ ರೆಡಿಗೊ (Datsun Redigo)

ಮೈಲೇಜ್: ಮೈಲೇಜ್ 22 ಕಿ.ಮೀ

ದಟ್ಸನ್ ರೆಡಿಗೊ ಭಾರತದಲ್ಲಿ ಮಾರಾಟವಾಗುವ ಕೈಗೆಟುಕುವ ಕಾರು ಮಾದರಿಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆಯ ಈ ಕಾರು ಹಲವು ವಿಶೇಷತೆಗಳೊಂದಿಗೆ ಮಾರಾಟವಾಗುತ್ತದೆ. 1.0 ಲೀಟರ್‌ ಎಎಂಟಿ ಎಂಜಿನ್ ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 22 ಕಿ.ಮೀ ಮೈಲೇಜ್ ನೀಡುತ್ತದೆ. ದಟ್ಸನ್ ರೆಡಿಗೊ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 3.98 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR)

ಮೈಲೇಜ್: 21.79 ಕಿ.ಮೀ

ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದಲ್ಲಿ ಮಾರಾಟವಾಗುವ ಅತಿ ಎತ್ತರದ ಹ್ಯಾಚ್‌ಬ್ಯಾಕ್ ಕಾರು. ಈ ಕಾರು 1.0 ಲೀಟರ್ ಹಾಗೂ 1.2 ಲೀಟರ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತದೆ. ಜೊತೆಗೆ ಸಿ‌ಎನ್‌ಜಿ ಆಯ್ಕೆಯಲ್ಲಿಯೂ ಮಾರಾಟವಾಗುತ್ತದೆ. ಸಿಎನ್‌ಜಿಯಲ್ಲಿ ಮಾರಾಟವಾಗುವ ವ್ಯಾಗನ್‌ಆರ್ ಮಾದರಿಯು ಪ್ರತಿ ಕೆ.ಜಿ ಸಿ‌ಎನ್‌ಜಿಗೆ ಗರಿಷ್ಠ 32.52 ಕಿ.ಮೀ ಮೈಲೇಜ್ ನೀಡುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso)

ಮೈಲೇಜ್: 21.7 ಕಿ.ಮೀ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾರಾಟವಾಗುತ್ತದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 21.7 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಸಿಎನ್‌ಜಿ ಹಾಗೂ ಪೆಟ್ರೋಲ್ ಮಾದರಿಯಲ್ಲಿ ಮಾರಾಟ ಮಾಡುತ್ತದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 3.78 ಲಕ್ಷಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳಿವು

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis)

ಮೈಲೇಜ್: 20.89

ಮಾರುತಿ ಸುಜುಕಿ ಇಗ್ನಿಸ್ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 20.89 ಕಿ.ಮೀ ಮೈಲೇಜ್ ನೀಡುತ್ತದೆ. ಈ ಕಾರು 1.2 ಲೀಟರ್ ಕೆ 12ಎಂ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ. ಈ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.10 ಲಕ್ಷಗಳಾಗಿದೆ.

Most Read Articles

Kannada
English summary
Cars with more mileage in domestic market details
Story first published: Saturday, December 18, 2021, 10:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X