ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಟಯರ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಲೇಬಲ್ ಮಾಡಿದ ಕಾರು ಟಯರ್‌ಗಳನ್ನು ಪರಿಚಯಿಸಿದೆ. ಗ್ರಾಹಕರಿಗೆ ಸರಿಯಾದ ಟಯರ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಒದಗಿಸುವ ಉದ್ದೇಶದಿಂದ ಸಿಯೆಟ್ ಕಂಪನಿಯು ಈ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಕಂಪನಿಯು ವಿಭಿನ್ನ ಪರ್ಫಾಮೆನ್ಸ್ ಅಡಿಯಲ್ಲಿ ಈ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಇಂಧನ ಉಳಿಸುವ ಫ್ಯೂಯಲ್ ಸ್ಮಾರ್ಟ್ ಹಾಗೂ ಸೆಕ್ಯುರಾಡ್ರೈವ್ ಟಯರ್ ಸೇರಿದಂತೆ ಎರಡು ರೀತಿಯ ಟಯರ್ ಮಾದರಿಗಳನ್ನು ಪರಿಚಯಿಸಲಾಗಿದೆ. ಟಯರ್ ಖರೀದಿದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಟಯರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಈ ಟಯರ್ ಸರಣಿಗಳನ್ನು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಇದರ ಜೊತೆಗೆ ಈ ಟಯರ್‌ಗಳಿಗೆ ಹಲವಾರು ಮಾನದಂಡಗಳ ಅನುಸಾರ ರೇಟಿಂಗ್ ನೀಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ರಸ್ತೆಯ ಮೇಲಿರುವ ಗ್ರಿಪ್, ತೇವದ ರಸ್ತೆಯಲ್ಲಿ ಚಾಲನೆ ಮಾಡುವ ಸಾಮರ್ಥ್ಯ, ಶಬ್ದ, ಡ್ರೈವ್ ಕಂಫರ್ಟ್ ಇತ್ಯಾದಿಗಳ ಆಧಾರದ ಮೇಲೆ ಈ ಟಯರ್‌ಗಳಿಗೆ ರೇಟಿಂಗ್ ನೀಡಲಾಗಿದೆ. ಟಯರ್‌ನ ರೋಲಿಂಗ್ ರೇಟಿಂಗ್ ಹೆಚ್ಚಿದ್ದರೆ, ಅದು ಕಾರಿಗೆ ಹೆಚ್ಚಿನ ಮೈಲೇಜ್ ನೀಡಲು ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಟಯರ್‌ನ ಗ್ರಿಪ್ ರೇಟಿಂಗ್ ಹೆಚ್ಚಾದಾಗ ಅದು ರಸ್ತೆಯಲ್ಲಿ ಹೆಚ್ಚಿನ ಗ್ರಿಪ್ ನೀಡುತ್ತದೆ. ಆದರೆ ಇಂಧನವನ್ನು ಉಳಿಸುವುದಿಲ್ಲ. ಟಯರ್‌ನ ತೂಕದ ಗ್ರಿಪ್ ಹೆಚ್ಚಿದ್ದರೆ ಅದು ಒದ್ದೆಯಾದ ರಸ್ತೆಗಳಲ್ಲಿ ಹೆಚ್ಚು ಗ್ರಿಪ್ ಹಾಗೂ ಬ್ಯಾಲೆನ್ಸ್ ಹೊಂದಿರುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಕಡಿಮೆ ಶಬ್ದದ ಟಯರ್‌ಗಳು ಆರಾಮದಾಯಕ ಸವಾರಿಯನ್ನು ಒದಗಿಸುತ್ತವೆ. ಜೊತೆಗೆ ಕಾರ್ ಕ್ಯಾಬಿನ್ ಒಳಗೆ ಕಡಿಮೆ ಶಬ್ದವನ್ನು ಮಾಡುತ್ತವೆ. ಸಿಯೆಟ್ ಕಂಪನಿಯು ಈಗಾಗಲೇ ಯುರೋಪ್ ಹಾಗೂ ಮಧ್ಯ ಏಷ್ಯಾದ ದೇಶಗಳಲ್ಲಿ ಲೇಬಲ್ ಹಾಗೂ ರೇಟ್ ಮಾಡಲಾದ ಟಯರ್‌ಗಳನ್ನು ಮಾರಾಟ ಮಾಡುತ್ತಿದೆ.

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಈಗ ಭಾರತದಲ್ಲಿಯೂ ಈ ರೀತಿಯ ಟಯರ್‌ಗಳನ್ನು ಪರಿಚಯಿಸುವ ಮೂಲಕ ಕಂಪನಿಯು ಗ್ರಾಹಕರಿಗೆ ಟಯರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿದೆ. ಸಿಯೆಟ್ ಕಂಪನಿಯು ಟ್ರಕ್‌, ಬಸ್‌, ಕಾರು, ಮೋಟಾರ್‌ಸೈಕಲ್‌, ಸ್ಕೂಟರ್‌ ಸೇರಿದಂತೆ ಹಲವು ವಾಹನಗಳಿಗೆ ಪ್ರತಿ ವರ್ಷ 15 ದಶಲಕ್ಷ ಟಯರ್‌ಗಳನ್ನು ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಕಂಪನಿಯು ಭಾರತದಲ್ಲಿ ಜಾವಾ ಕಂಪನಿಯ ಪ್ರತಿಸ್ಪರ್ಧಿಯಾದ ರಾಯಲ್ ಎನ್‌ಫೀಲ್ಡ್ ಕಂಪನಿ ಬೈಕುಗಳಿಗಾಗಿ ಟಯರ್‌ಗಳನ್ನು ಉತ್ಪಾದಿಸುತ್ತದೆ.ಕಂಪನಿಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ಹಾಗೂ ಹಿಮಾಲಯನ್‌ ಬೈಕುಗಳಿಗಾಗಿ ಟಯರ್‌ಗಳನ್ನು ಉತ್ಪಾದಿಸುತ್ತದೆ.

ದೇಶದಲ್ಲಿ ಮೊದಲ ಬಾರಿಗೆ ಲೇಬಲ್ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಸಿಯೆಟ್

ಸಿಯೆಟ್ ಕಂಪನಿಯು ಇತ್ತೀಚೆಗಷ್ಟೇ ಪಂಕ್ಚರ್ ಫ್ರೀ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಟಯರ್‌ಗಳು ಪಂಕ್ಚರ್ ಆದಾಗ ಗಾಳಿಯ ಒತ್ತಡ ಬೀಳದಂತೆ ತಡೆಯುತ್ತವೆ. ಇದರಿಂದ ಬೈಕ್ ಅನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

Most Read Articles

Kannada
English summary
Ceat tyre company introduces label rated tyres for the first time in India. Read in Kannada.
Story first published: Tuesday, February 9, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X