Just In
- 2 hrs ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 4 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
ಉತ್ತರಾಖಂಡ್: ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ ಬಿಜೆಪಿ
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುರಕ್ಷಾ ಮಾನದಂಡಗಳನ್ನು ಪಾಲಿಸದ ಕಾರು ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ಭಾರತದಲ್ಲಿ ಹೊಸ ವಾಹನಗಳ ಮಾರಾಟವು ಹೆಚ್ಚಳವಾಗಿರುವ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷಾ ರೇಟಿಂಗ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬಜೆಟ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಲವು ಕಾರುಗಳು ಸುರಕ್ಷತೆಯ ವಿಚಾರವಾಗಿ ಗ್ರಾಹಕರಿಂದ ಟೀಕೆಗೆ ಒಳಗಾಗುತ್ತಿವೆ.

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿನ ಕಾರು ಮಾರಾಟ ವಿಭಾಗದಲ್ಲಿ ಬಹುತೇಕ ಕಾರು ಮಾದರಿಗಳು ಮಾರಾಟದಲ್ಲಿ ದಾಖಲೆಯ ಮಟ್ಟದ ಮಾರಾಟ ಗುರಿಸಾಧಿಸುತ್ತಿದ್ದರೂ ಪ್ರಯಾಣಿಕರ ಸುರಕ್ಷತೆಯಲ್ಲಿ ಕಳಪೆ ಗುಣಮಟ್ಟ ಹೊಂದಿರುವುದು ಹಲವಾರು ಹೊಸ ಸಮಸ್ಯೆಗಳಿಗೆ ಕಾರಣವಾಗಿದ್ದು, ಕೆಲವೇ ಕೆಲವು ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಕೂಡಾ ಇಲ್ಲದಿರುವುದು ಪ್ರಯಾಣಿಕ ಜೀವಕ್ಕೆ ಕುತ್ತು ತರುತ್ತಿದೆ.

ಬಜೆಟ್ ಬೆಲೆಯ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಟೊಮೊಬೈಲ್ ತಯಾರಕರು ಸುರಕ್ಷತೆಯ ಗುಣಮಟ್ಟಗಳನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸುತ್ತಿರುವುದು ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದ್ದು, ಕನಿಷ್ಠ ಪ್ರಮಾಣದ ಸುರಕ್ಷತೆ ಇಲ್ಲದಿರುವ ಸಾವಿರಾರು ವಾಹನಗಳು ದಿನಂಪ್ರತಿ ಮಾರಾಟವಾಗುತ್ತಿವೆ.

ಇಂತಹ ವಾಹನಗಳು ಅಪಘಾತ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷೆ ಒದಗಿಸುವಲ್ಲಿ ವಿಫಲವಾಗುದರೊಂದಿಗೆ ಜೀವ ಹಾನಿ ಹೆಚ್ಚುತ್ತಿದ್ದು, ವಾಹನಗಳ ಉತ್ಪಾದನೆಯಲ್ಲಿ ನಿಗದಿತ ಸುರಕ್ಷತಾ ಗುಣಮಟ್ಟಗಳನ್ನು ಪಾಲನೆ ಮಾಡದ ಕಂಪನಿಗಳು ವಾಹನಗಳ ಮಾರಾಟವನ್ನು ನಿಲ್ಲಿಸಿ ಎನ್ನುವ ಖಡಕ್ ಸಂದೇಶ ನೀಡಿದೆ.

ವಾಹನಗಳ ಉತ್ಪಾದನೆಯಲ್ಲಿ ನಿಗದಿತ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ಸಾಧ್ಯವಿಲ್ಲದ ಕಾರು ಕಂಪನಿಗಳು ಮಾರಾಟವನ್ನು ಮುಂದುವರಿಸುವ ಅವಶ್ಯವಿಲ್ಲ ಎಂದಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕಡಿಮೆ ಬೆಲೆ ಎನ್ನುವ ಉದ್ದೇಶಕ್ಕೆ ಸುರಕ್ಷಾ ಮಾನದಂಡಗಳನ್ನು ಗಾಳಿಗೆ ತೂರಿ ವಾಹನ ಮಾರಾಟ ಮಾಡುತ್ತಿರುವುದನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದೆ.

ರಸ್ತೆ ಸುರಕ್ಷತೆಯಲ್ಲಿ ಆಟೋ ಉತ್ಪಾದನಾ ಕಂಪನಿಗಳ ಪಾತ್ರ ಪ್ರಮುಖವಾಗಿದ್ದು ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸಾರಿಗೆ ಸಚಿವಾಲಯವು ಒಂದೇ ವಾಹನ ಮಾದರಿಯನ್ನು ಬೇರೆ ಬೇರೆ ಮಾರುಕಟ್ಟೆಗಳಿಗಾಗಿ ವಿವಿಧ ಸುರಕ್ಷಾ ಮಾನದಂಡಗಳನ್ನು ಅಳವಡಿಸುತ್ತಿರುವುದು ಅಕ್ಷಮ್ಯ ಎಂದಿದೆ.

ಕೇಂದ್ರ ಸರ್ಕಾರದ ಹೇಳಿಕೆಯೆಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳ ಹಲವು ಕಾರು ಮಾದರಿಗಳು ಭಾರತದಲ್ಲಿ ಮಾರಾಟವಾಗುವ ಮಾದರಿಗಿಂತಲೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾದರಿಯು ಹೆಚ್ಚಿನ ಮಟ್ಟದ ಸುರಕ್ಷೆ ಹೊಂದಿದೆ.

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಸಂದರ್ಭದಲ್ಲೇ ಇದು ಈಗಾಗಲೇ ಸಾಬೀತಾಗಿದ್ದು, ಭಾರತದಲ್ಲಿ 1 ಅಥವಾ 2 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಕಾರು ಮಾದರಿಯು ವಿದೇಶದಲ್ಲಿ ಮಾತ್ರ 4 ರಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ನೊಂದಿಗೆ ಮಾರಾಟವಾಗುತ್ತಿವೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ವಿದೇಶಿದಲ್ಲಿ ಮಾರಾಟವಾಗುವ ಅತ್ಯುತ್ತಮ ಸೇಫ್ಟಿ ರೇಟಿಂಗ್ಸ್ ಕಾರು ಮಾದರಿಗಳು ಭಾರತದಲ್ಲೇ ಅಭಿವೃದ್ದಿಗೊಂಡು ರಫ್ತುಗೊಳ್ಳುತ್ತಿದ್ದು, ಭಾರತದಲ್ಲಿ ಮಾರಾಟವಾಗುವ ಮಾದರಿ ಮಾತ್ರ ಬಜೆಟ್ ಹೆಸರಿನಲ್ಲಿ ಹಲವಾರು ಕಳಪೆ ಫೀಚರ್ಸ್ ಪಡೆದುಕೊಂಡಿರುತ್ತವೆ.

ಇದೇ ಕಾರಣಕ್ಕಾಗಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಸೇಫ್ಟಿ ಕಾರ್ಸ್ ಫಾರ್ ಇಂಡಿಯಾ ಅಭಿಯಾನದಡಿ ವಿವಿಧ ಕಾರು ಮಾದರಿಗಳ ಕ್ರ್ಯಾಶ್ ಟೆಸ್ಟಿಂಗ್ ಅಂಕಗಳನ್ನು ಪ್ರಕಟಗೊಳಿಸುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಫಲಿತಾಂಶಗಳು ಭಾರತದಲ್ಲಿ ಮಾತ್ರವಲ್ಲ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಭಾರತದಲ್ಲಿ ಕೇವಲ ಲಾಭದ ಉದ್ದೇಶಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ಕಾರುಗಳನ್ನು ಮಾರಾಟ ಮಾಡುತ್ತಿರುವ ಹಲವು ಕಾರು ಕಂಪನಿಗಳು ಗ್ರಾಹಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಇದೇ ವಿಚಾರವಾಗಿ ಗ್ಲೊಬಲ್ ಎನ್‌ಸಿಎಪಿ ಸಂಸ್ಥೆಯು ಸಹ ಕಾರು ಕಂಪನಿಗಳಿಗೆ ಛೀಮಾರಿ ಹಾಕಿದೆ.