ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

ಭಾರತದಲ್ಲಿ ಜನರು ಕಾರು ಖರೀದಿಸುವಾಗ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಕಾರುಗಳನ್ನು ಹಾಗೂ ಹೆಚ್ಕು ಫೀಚರ್'ಗಳನ್ನು ಹೊಂದಿರುವ ಕಾರುಗಳನ್ನು ಖರೀದಿಸಲು ಬಯಸುತ್ತಾರೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

ಆದರೆ ಕೆಲವು ಗ್ರಾಹಕರು ಫೀಚರ್'ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕೈಗೆಟುಕುವ ಬೆಲೆಯ ಕಾರ್ ಅನ್ನು ಖರೀದಿಸುತ್ತಾರೆ. ಪ್ರತಿಯೊಂದು ಸೆಗ್ ಮೆಂಟಿನಲ್ಲಿ ದೊರೆಯುವ ಗುಣಮಟ್ಟದ ಕೈಗೆಟುಕುವ ಬೆಲೆಯ ಕಾರು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

1. ಎಂಟ್ರಿ ಲೆವೆಲ್ ಸೆಗ್ ಮೆಂಟ್

ಮಾರುತಿ ಸುಜುಕಿ ಆಲ್ಟೊ 800

ಮಾರುತಿ ಸುಜುಕಿ ಆಲ್ಟೊ ಮೂಲ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.2.99 ಲಕ್ಷಗಳಾಗಿದೆ. ಈ ಕಾರಿನಲ್ಲಿ ಬಾಡಿ ಕಲರ್ ಹ್ಯಾಂಡಲ್‌, ಡ್ಯುಯಲ್ ಟೋನ್ ಇಂಟಿರಿಯರ್, ರೇರ್ ಪಾರ್ಕಿಂಗ್ ಸೆನ್ಸಾರ್‌, ಡ್ರೈವರ್ ಸೈಡ್ ಏರ್‌ಬ್ಯಾಗ್'ಗಳನ್ನು ನೀಡಲಾಗುತ್ತದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

2. ಮಿಡ್ ಲೆವೆಲ್ ಹ್ಯಾಚ್‌ಬ್ಯಾಕ್ ಸೆಗ್ ಮೆಂಟ್

ಹ್ಯುಂಡೈ ಸ್ಯಾಂಟ್ರೊ ಎರಾ

ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4.73 ಲಕ್ಷಗಳಾಗಿದೆ. ಸ್ಯಾಂಟ್ರೋ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

3. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ ಮೆಂಟ್

ಟಾಟಾ ಆಲ್ಟ್ರೋಜ್ ಎಕ್ಸ್‌ಇ

ಆಲ್ಟ್ರೋಜ್ ಎಕ್ಸ್‌ಇ ಕಾರಿನ ಮೂಲ ಮಾದರಿಯನ್ನು ಖರೀದಿಸುತ್ತಿದ್ದರೂ ಸಹ ಪ್ರೀಮಿಯಂ ಕಾರನ್ನು ಖರೀದಿಸಿದ ಅನುಭವವಾಗುತ್ತದೆ. ಟಾಟಾ ಆಲ್ಟ್ರೋಜ್ ಎಕ್ಸ್‌ಇ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.73 ಲಕ್ಷಗಳಾಗಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

ಈ ಕಾರಿನಲ್ಲಿ ಟಿಲ್ಟ್ ಸ್ಟೀಯರಿಂಗ್, ಫ್ರಂಟ್ ಪವರ್ ವಿಂಡೋಸ್, ಬಾಡಿ ಕಲರ್ ಬಂಪರ್, ಮಲ್ಟಿ ಡ್ರೈವ್ ಮೋಡ್, ಹೈಸ್ಪೀಡ್ ಅಲರ್ಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

4. ಸಬ್ 4 ಮೀಟರ್ ಸೆಡಾನ್ ಸೆಗ್ ಮೆಂಟ್

ಹ್ಯುಂಡೈ ಒರಾ

ಹ್ಯುಂಡೈ ಒರಾ ದೇಶಿಯ ಮಾರುಕಟ್ಟೆಯಲ್ಲಿರುವ ಅಗ್ಗದ ಬೆಲೆ ಸಬ್ 4 ಮೀಟರ್ ಸೆಡಾನ್ ಆಗಿದೆ. ಈ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.5.97 ಲಕ್ಷಗಳಾಗಿದೆ. ಈ ಕಾರು ಇಎಸ್ಎಸ್, ಡ್ರೈವರ್ ಏರ್‌ಬ್ಯಾಗ್, ಹೈಸ್ಪೀಡ್ ಅಲರ್ಟ್, ಬಾಡಿ-ಕಲರ್ ಬಂಪರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

5. ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟ್

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಇ ಎಂಟಿ

ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಇ ಎಂಟಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿರುವ ಅಗ್ಗದ ಕಾರ್ ಆಗಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.5.45 ಲಕ್ಷಗಳಾಗಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

ಈ ಕಾರು ಡಿಆರ್‌ಎಲ್‌, ಬ್ಲಾಕ್ ಒಆರ್‌ವಿಎಂ, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್, ಸ್ಪೋರ್ಟಿ ರೇರ್ ಸ್ಪಾಯ್ಲರ್, ಸ್ಯಾಟಿನ್ ಸಿಲ್ವರ್ ರೂಫ್ ರೇಲ್, ಸೈಡ್ ಡೋರ್ ಡೆಕಲ್ಸ್, ವ್ಹೀಲ್ ಕವರ್‌ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

6. ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟ್

ರೆನಾಲ್ಟ್ ಡಸ್ಟರ್ ಆರ್‌ಎಕ್ಸ್‌ಇ

ಭಾರತದ ಅತ್ಯಂತ ಜನಪ್ರಿಯ ಕಾರು ಸೆಗ್ ಮೆಂಟ್ ಎಂದರೆ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ ಮೆಂಟ್. ರೆನಾಲ್ಟ್ ಡಸ್ಟರ್ ಆರ್‌ಎಕ್ಸ್‌ಇ ಈ ಸೆಗ್ ಮೆಂಟಿನಲ್ಲಿರುವ ಅಗ್ಗದ ಕಾರು. ಈ ಕಾರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.8.59 ಲಕ್ಷಗಳಾಗಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

ಈ ಕಾರು ಡ್ಯುಯಲ್ ಟೋನ್ ಬಂಪರ್‌, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, ಡ್ರೈವರ್ ಹಾಗೂ ಪ್ಯಾಸೆಂಜರ್ ಸೀಟ್‌ಬೆಲ್ಟ್ ರಿಮ್ಯಾಂಡರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

ವಿವಿಧ ಸೆಗ್ ಮೆಂಟ್'ಗಳಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರುಗಳಿವು

7. ಎಲೆಕ್ಟ್ರಿಕ್ ಕಾರು ಸೆಗ್ ಮೆಂಟ್

ಮಹೀಂದ್ರಾ ಇ-ವೆರಿಟೊ ಡಿ

ಮಹೀಂದ್ರಾ ಇ-ವೆರಿಟೊ ಡಿ ಭಾರತದಲ್ಲಿರುವ ಅಗ್ಗದ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರಿನ ಬೇಸ್ ಡಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.42 ಲಕ್ಷಗಳಾಗಿದೆ.

Most Read Articles

Kannada
English summary
Cheapest cars available in every segment in Indian market. Read in Kannada.
Story first published: Monday, June 21, 2021, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X