ಇದೇ ತಿಂಗಳು 16ರಂದು ಅನಾವರಣಗೊಳ್ಳಲಿರುವ Citroen ಹೊಸ ಕಾರಿನ ಟೀಸರ್ ಪ್ರಕಟ

ಸಿಟ್ರನ್(Citroen) ಕಂಪನಿಯು ಶೀಘ್ರದಲ್ಲೇ ತನ್ನ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಇದೇ ತಿಂಗಳು 16ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿರುವ ಹೊಸ ಕಾರಿನ ಟೀಸರ್ ಪ್ರಕಟಿಸಲಾಗಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿರುವ Citroen ಹೊಸ ಕಾರಿನ ಟೀಸರ್ ಪ್ರಕಟ

ದೇಶಿಯ ಆಟೋ ಉದ್ಯಮದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಫ್ರೆಂಚ್ ಆಟೋ ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್(Citroen) ಸಹ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಪೈಪೋಟಿಯಾಗಿ ವಿಶೇಷ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿರುವ Citroen ಹೊಸ ಕಾರಿನ ಟೀಸರ್ ಪ್ರಕಟ

ಸಿಟ್ರನ್ ಹೊಸ ಕಾರಿನ ಅಧಿಕೃತ ಹೆಸರು ಇನ್ನು ಕೂಡಾ ಅಂತಿಮವಾಗಿಲ್ಲವಾದರೂ ಹೊಸ ಕಾರು ಯುರೋಪ್ ಮಾರುಕಟ್ಟೆಗಳಲ್ಲಿರುವ ಸಿ3(C3) ಮಾದರಿಯನ್ನು ಆಧರಿಸಿದ್ದು, ಸಿ21(C21) ಕೋಡ್‌ನೆಮ್ ಮೂಲಕ ಭಾರತದಲ್ಲಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಹೊಸ ಕಾರನ್ನ ಭಾರತೀಯ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಳಿಸಿದ್ದು, ಮಾರುಕಟ್ಟೆಯಲ್ಲಿನ ಗರಿಷ್ಠ ಬೇಡಿಕೆ ಪೂರೈಸುವ ನೀರಿಕ್ಷೆಯಲ್ಲಿದೆ. ಹೊಸ ಕಾರಿನಲ್ಲಿ ಕಂಪನಿಯು ಫ್ಲೆಕ್ಸ್ ಫ್ಯೂಲ್ ಎಂಜಿನ್ ಆಯ್ಕೆ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದ್ದು, ಫ್ಲೆಕ್ಸ್ ಎಂಜಿನ್ ಹೊಂದಿರುವ ಭಾರತದ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ವಿಶ್ವಾದ್ಯಂತ ಇಂಧನಗಳ ಬೆಲೆ ಏರಿಕೆಯಾಗುತ್ತಿರುವ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾದ ಇಂಧನಗಳ ಮೇಲೆ ಕಾರ್ಯನಿರ್ವಹಿಸುವ ಹೊಸ ವಾಹನಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಫ್ಲೆಕ್ಸ್ ಫ್ಯೂಲ್ ವಾಹನಗಳು ಹೊಸ ಭರವಸೆಯನ್ನು ಮೂಡಿಸುತ್ತಿವೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಸಾಂಪ್ರಾದಾಯಿಕ ಇಂಧನ ಬಳಕೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದ್ದರೂ ಪರ್ಯಾಯ ಇಂಧನಗಳ ಚಾಲಿತ ವಾಹನಗಳ ಆವಿಷ್ಕಾರ ಕೂಡಾ ಜೋರಾಗಿದ್ದು, ಸಿಟ್ರನ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ತನ್ನ ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ಸೇರ್ಪಡೆಗೆ ಸಿದ್ದವಾಗಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿರುವ Citroen ಹೊಸ ಕಾರಿನ ಟೀಸರ್ ಪ್ರಕಟ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸುವಷ್ಟು ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಕಾರುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಿಣ ಪ್ರಮಾಣವನ್ನು ನಿಧಾನವಾಗಿ ಹೆಚ್ಚಳ ಮಾಡಲಾಗುತ್ತಿದೆ.

ಇದೇ ತಿಂಗಳು 16ರಂದು ಅನಾವರಣಗೊಳ್ಳಲಿರುವ Citroen ಹೊಸ ಕಾರಿನ ಟೀಸರ್ ಪ್ರಕಟ

ಎಥೆನಾಲ್ ಪ್ರಮಾಣವನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸ ನಿರ್ಧರಿಸಲಾಗಿದ್ದು, ಇದೇ ತಂತ್ರಜ್ಞಾನದ ಮೇಲೆ ಸಿಟ್ರನ್ ಕಂಪನಿಯು ತನ್ನ ಹೊಸ ಕಾರನ್ನು ಪೆಟ್ರೋಲ್ ಮತ್ತು ಎಥೆನಾಲ್ ಎರಡರಿಂದಲೂ ಚಾಲನೆ ಮಾಡುವಂತೆ ಅಭಿವೃದ್ದಿಪಡಿಸುತ್ತಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಫ್ಲೆಕ್ಸ್ ಫ್ಯೂಲ್ ಎಂಜಿನ್ ತಂತ್ರಜ್ಞಾನ ಹೊಂದಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿಯು ಸಂಪೂರ್ಣವಾಗಿ ಎಥೆನಾಲ್ ಇಲ್ಲವೇ ಸಂಪೂರ್ಣವಾಗಿ ಪೆಟ್ರೋಲ್ ಮೂಲಕ ಸಂಚರಿಸುವಂತೆ ಅಭಿವೃದ್ದಿಪಡಿಸಲಾಗುತ್ತಿದ್ದು, ಲಭ್ಯವಿರುವ ಇಂಧನಕ್ಕೆ ಹೊಂದಾಣಿಕೆಗೊಂಡು ಎಂಜಿನ್ ಚಾಲನೆಗೊಳ್ಳುವ ಪ್ರಕ್ರಿಯೆ ಇದಾಗಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

E85 ಗ್ಯಾಸ್ ಮೇಲೆ ಸಂಚರಿಸುವ ಫ್ಲೆಕ್ಸ್ ಫ್ಯೂಲ್ ಕಾರುಗಳು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಕಾರ್ಯಕ್ಷಮತೆ ಜೊತೆಗೆ ಅತಿ ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತವೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಹೀಗಾಗಿ ಹೊಸ ತಂತ್ರಜ್ಞಾನ ಪ್ರೇರಿತ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಸಿಟ್ರನ್ ಕಂಪನಿಯು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಸಿ3(C3) ಮಾದರಿಗಾಗಿ ಫ್ಲೆಕ್ಸ್ ಫ್ಯೂಲ್ ಎಂಜಿನ್ ಜೋಡಣೆ ಮಾಡುತ್ತಿದ್ದು, 16ರಂದು ಅನಾವರಣಗೊಳ್ಳಲಿರುವ ಹೊಸ ಕಾರು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯ ನೀರಿಕ್ಷೆಯಲ್ಲಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗಾಗಿ ಸಿಟ್ರನ್ ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಿದ್ದು, ಹೊಸ ಕಾರು 1.2-ಲೀಟರ್ ಪೆಟ್ರೋಲ್( ಫ್ಲೆಕ್ಸ್ ಫ್ಯೂಲ್) ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಸಿಟ್ರನ್ ಕಂಪನಿಯ ಹೊಸ ಕಾರನ್ನು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

ಇದೇ ತಿಂಗಳು 16ರಂದು ಅನಾವರಣ ಗೊಳ್ಳಲಿರುವ Citroen ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಟೀಸರ್ ಪ್ರಕಟ

ಸಿಟ್ರನ್ ಕಂಪನಿಯು ಹೊಸ ಕಾರು ಮಾದರಿಯ ಮೂಲಕ ಸಿಟ್ರನ್ ಕಂಪನಿಯು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ರೆನಾಲ್ಟ್ ಕಿಗರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ಯೋಜನೆಯಲ್ಲಿದೆ.

Most Read Articles

Kannada
English summary
Citroen india revealed new compact suv teaser ahead of unveil details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X