ನಮ್ಮ ಬೆಂಗಳೂರಿನಲ್ಲಿ ಸಿಟ್ರನ್ ಇಂಡಿಯಾ ಮೊದಲ ಶೋರೂಂಗೆ ಭರ್ಜರಿ ಚಾಲನೆ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಸಿ5 ಏರ್‌ಕ್ರಾಸ್ ಅನಾವರಣಗೊಳಿಸಿ ಶೀಘ್ರದಲ್ಲೇ ಮಾರಾಟ ಪ್ರಕ್ರಿಯೆ ಆರಂಭಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ದೇಶದ ಪ್ರಮುಖ ಮಾಹಾನಗರಗಳಲ್ಲಿ ತನ್ನ ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟ ಆರಂಭಿಸುತ್ತಿರುವ ಸಿಟ್ರನ್ ಕಂಪನಿಯು ಆರಂಭಿಕ ಹಂತದಲ್ಲಿ ದೇಶಾದ್ಯಂತ ಪ್ರಮುಖ 10 ನಗರಗಳಲ್ಲಿ ಮೊದಲ ಹತ್ತಕ್ಕೂ ಹೆಚ್ಚು ಕಾರು ಮಾರಾಟಗಳಿಗೆ ಚಾಲನೆ ನೀಡುವುದರ ಜೊತಗೆ ಕಾರು ಮಾರಾಟ ಆರಂಭಿಸುವ ಯೋಜನೆಯಲ್ಲಿದ್ದು, ಮೊದಲ ಹಂತದಲ್ಲಿ ನಮ್ಮ ಬೆಂಗಳೂರಿನಲ್ಲೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹೊಸ ಕಾರು ಮಾರಾಟ ಮಳಿಗೆಗೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್ ಜೊತೆಗೂಡಿ ಮಿಲ್ಲರ್ಸ್ ರಸ್ತೆಯಲ್ಲಿರುವ ಗ್ರೆಸ್ ಟವರ್ಸ್‌ನಲ್ಲಿ ಹೊಸ ಕಾರು ಮಾರಾಟ ಮಳಿಗೆಯನ್ನು ಆರಂಭಿಸಿರುವ ಸಿಟ್ರನ್ ಕಂಪನಿಯು ಹೊಸ ಕಾರು ಬಿಡುಗಡೆಯ ನಂತರ ಗ್ರಾಹಕರ ಬೇಡಿಕೆಯೆಂತೆ ವಾಹನ ಮಾರಾಟ ಮಳಿಗೆಗಳನ್ನು ನಗರದ ಪ್ರಮುಖ ಕಡೆಗಳಲ್ಲಿ ವಿಸ್ತರಿಸುವ ಯೋಜನೆ ಹೊಂದಿದೆ.

ಸಿಟ್ರನ್ ಕಂಪನಿಯು ಫ್ರೆಂಚ್ ಶೈಲಿಯಲ್ಲಿ ತನ್ನ ಕಾರು ಮಾರಾಟ ಮಳಿಗೆಗಳನ್ನು ಭಾರತದಲ್ಲೂ ಪರಿಚಯಿಸಿದ್ದು, ಹೊಸ ಕಾರು ಮಾರಾಟ ಮಳಿಗೆಗಳನ್ನು ಲಾ ಮೇಸನ್(ಸಿಟ್ರನ್ ಹೋಂ) ಹೆಸರಿಸುವ ಮೂಲಕ ವಿಭಿನ್ನ ಶೈಲಿಯ ಮಾರಾಟ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದೆ.

ಆಧುನಿಕ ಮಾರಾಟ ಸೌಲಭ್ಯಗಳನ್ನು ಒಳಗೊಂಡಿರುವ ಸಿಟ್ರನ್ ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ತನ್ನ ವಿಂಟೆಜ್ ಕಾರು ಮಾದರಿಗಳನ್ನು ಸಹ ಗ್ರಾಹಕರ ಆಕರ್ಷಣೆಗಾಗಿ ಪ್ರದರ್ಶನಗೊಳಿಸಲಾಗುತ್ತಿದ್ದು, ಕಾರು ಖರೀದಿಯನ್ನು ಸರಳಗೊಳಿಸಲು ಕಾನ್ಫಿಗ್ರೆಷನ್ ಸ್ಕೀನ್ ಜೊತೆ ಕಫೆ ಸೆಂಟರ್ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಇನ್ನು ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಮಾರ್ಚ್ 1ರಿಂದ ಆರಂಭಿಸಲಿರುವ ಸಿಟ್ರನ್ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಹೊಸ ಕಾರಿನ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಫೀಲ್ ಮತ್ತು ಶೈನ್ ಎನ್ನುವ ಪ್ರಮುಖ ವೆರಿಯೆಂಟ್‌ಗಳೊಂದಿಗೆ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟ್ಅಪ್, ಫ್ರಂಟ್ ಗ್ರಿಲ್‌ಗೆ ಹೊಂದಿಕೊಂಡಿರುವ ಸ್ಲಿಕ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, 18-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಕಾರಿನ ಖದರ್‌ಗೆ ಪೂರಕವಾದ ಸರೌಂಡ್ ಬ್ಲ್ಯಾಕ್ ಕ್ಲಾಡಿಂಗ್ ಸೌಲಭ್ಯ ಹೊಂದಿದೆ.

ಹಾಗೆಯೇ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ. ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ.

ಜೊತೆಗೆ ಹೊಸ ಕಾರಿನ ಹಿಂಬದಿಯಲ್ಲಿ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿರುವುದೇ ಕ್ಯಾಬಿನ್ ವಿಶಾಲವಾಗಿರಲು ಪ್ರಮುಖ ಕಾರಣವಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸಿ5 ಏರ್‌ಕ್ರಾಸ್ ಕಾರು 4,500 ಎಂಎಂ ಉದ್ದ, 2,099 ಎಂಎಂ ಅಗಲ, 1,710 ಎಂಎಂ ಎತ್ತರ ಮತ್ತು 2,730 ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿದೆ. ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 25 ಲಕ್ಷದಿಂದ ರೂ. 28 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿವೆ.


Click it and Unblock the Notifications








