ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

By Drivespark Bureau

ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಐಷಾರಾಮಿ ಕಾರುಗಳು ಮಾರಾಟವಾಗುತ್ತಿವೆ. ಈ ಐಷಾರಾಮಿ ಕಾರುಗಳು ಅತ್ಯುತ್ತಮ ಫೀಚರ್'ಗಳನ್ನು ಹೊಂದಿರುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ಮಿಡ್ ರೇಂಜ್ ಕಾರುಗಳನ್ನು ಸಹ ಮಾರಾಟ ಮಾಡಲಾಗುತ್ತದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಈ ಮಿಡ್ ರೇಂಜ್ ಕಾರುಗಳು ಸಹ ಇದೀಗ ಐಷಾರಾಮಿ ಕಾರುಗಳಲ್ಲಿರುವಂತಹ ಹಲವು ಫೀಚರ್'ಗಳನ್ನು ಹೊಂದಿವೆ. ಐಷಾರಾಮಿ ಕಾರುಗಳು ಹಾಗೂ ಮಿಡ್ ರೇಂಜ್ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಫೀಚರ್'ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

1. ಪನೋರಾಮಿಕ್ ಸನ್‌ರೂಫ್

ಆಡಿ, ಬಿಎಂಡಬ್ಲ್ಯು, ವೋಲ್ವೋ, ಜಾಗ್ವಾರ್ ಮುಂತಾದ ಕಂಪನಿಗಳು ತಮ್ಮ ಕಾರುಗಳಲ್ಲಿ ಪನೋರಾಮಿಕ್ ಸನ್‌ರೂಫ್‌ಗಳನ್ನು ಸ್ಟ್ಯಾಂಡರ್ ಆಗಿ ನೀಡುತ್ತವೆ. ಆದರೆ ಫೀಚರ್ಸ್ ಇದೀಗ ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಸಾಮಾನ್ಯವಾಗಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಪನೋರಮಿಕ್ ಫೀಚರ್ಸ್ ಇದೀಗ ಹ್ಯುಂಡೈ ಕ್ರೆಟಾ, ಎಂಜಿ ಹೆಕ್ಟರ್, ಜೀಪ್ ಕಂಪಾಸ್‌ನಂತಹ ಹಲವು ಮಿಡ್ ರೇಂಜ್ ಕಾರುಗಳಲ್ಲಿಯೂ ಲಭ್ಯವಿದ್ದು, ಹೊಸ ಈ ಫೀಚರ್ಸ್ ಕ್ಯಾಬಿನ್‌ನ ಗಾಳಿಯನ್ನು ಹೆಚ್ಚಿಸುವುದರ ಜೊತೆಗೆ ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

2. ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್

ಈ ಮೊದಲು ಐಷಾರಾಮಿ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಫೀಚರ್ ಈಗ ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಹ್ಯುಂಡೈ ಅಲ್ಕಾಜರ್ ಹಾಗೂ ಟಾಟಾ ಟಿಯಾಗೊದಂತಹ ಕಾರುಗಳಲ್ಲಿಯೂ ಲಭ್ಯವಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಈ ಫೀಚರ್ ಕಾರಿನೊಳಗಿನ ಸ್ಪೋರ್ಟ್‌ನೆಸ್ ಅನ್ನು ಹೆಚ್ಚಿಸುವುದರ ಜೊತೆಗೆ ಈ ಫೀಚರ್ ಮೂಲಕ ಸಾಕಷ್ಟು ಮಾಹಿತಿಯನ್ನು ಪಡೆಯಬಹುದಾಗಿದ್ದು, ಒಂದೇ ಸೂರಿನಡಿ ಹಲವು ಮಾಹಿತಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

3. ವೆಂಟಿಲೇಟೆಡ್ ಸೀಟುಗಳು

ಕೆಲವು ವರ್ಷಗಳ ಹಿಂದೆ ಬಿಎಂಡಬ್ಲ್ಯು ಹಾಗೂ ಆಡಿಯಂತಹ ಕಂಪನಿಗಳ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದ್ದ ವೆಂಟಿಲೇಟೆಡ್ ಸೀಟುಗಳು ಇದೀಗ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿಯಲ್ಲೂ ಸಾಮಾನ್ಯವಾಗಿವೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಕಿಯಾ ಸೆಲ್ಟೋಸ್ ಕಾರುಗಳಲ್ಲಿ ವೆಂಟಿಲೆಟೆಡ್ ಸೀಟ್‌ಗಳನ್ನು ಕಾಣಬಹುದಾಗಿದ್ದು, ಈ ಫೀಚರ್ ಬೇಸಿಗೆ ಕಾಲದಲ್ಲೂ ದೂರದ ಪ್ರಯಾಣವನ್ನು ಸುಖಕರವಾಗಿಸುತ್ತದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

4. ಪವರ್ಡ್ ಫ್ರಂಟ್ ಸೀಟುಗಳು

ಈ ಫೀಚರ್ ಈ ಹಿಂದೆ ರೂ.25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಎಂಜಿ ಮೋಟಾರ್ ಈ ಫೀಚರ್ ಅನ್ನು ತನ್ನ ಹೆಕ್ಟರ್ ಕಾರಿನಲ್ಲಿ ನೀಡುವ ಮೂಲಕ ಮಿಡ್ ರೇಂಜ್ ಕಾರುಗಳಲ್ಲಿಯೂ ಈ ಫೀಚರ್ ಆರಂಭಿಸಿತು.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಈಗ ಈ ಫೀಚರ್ ಅನ್ನು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‌, ಟಾಟಾ ಹ್ಯಾರಿಯರ್ ಕಾರುಗಳಲ್ಲಿ ಕಾಣಬಹುದಾಗಿದ್ದು, ಚಾಲಕನು ತನ್ನ ಅನುಕೂಲಕ್ಕೆ ತಕ್ಕಂತೆ ಸೀಟ್ ಹೊಂದಾಣಿಕೆ ಮಾಡಿಕೊಳ್ಳಲು ಅದು ಸಹಕಾರಿಯಾಗಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

5. ಡ್ರೈವಿಂಗ್ ಮೋಡ್'ಗಳು

ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿದ್ದ ವಿಭಿನ್ನ ಡ್ರೈವಿಂಗ್ ಮೋಡ್'ಗಳು ಈಗ ಟಾಟಾ ಆಲ್ಟ್ರೊಜ್‌, ಟಾಟಾ ಹ್ಯಾರಿಯರ್, ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್‌ನಂತಹ ಮಿಡ್ ರೇಂಜ್ ಕಾರುಗಳಲ್ಲಿಯೂ ಲಭ್ಯವಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಇವುಗಳಲ್ಲಿ ಡೈನಾಮಿಕ್, ಸ್ಪೋರ್ಟ್, ಎಕಾನಮಿ ಹಾಗೂ ನಾರ್ಮಲ್ ಡ್ರೈವಿಂಗ್ ಮೋಡ್'ಗಳು ಸೇರಿದ್ದು, ಎಲ್ಲಾ ಪ್ರದೇಶಗಳಲ್ಲೂ ಸುಲಭವಾಗಿ ಕಾರು ಚಾಲನೆಗಾಗಿ ಹೊಸ ಡ್ರೈವ್ ಮೋಡ್‌ಗಳು ಸಹಕಾರಿಯಾಗಿವೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

6. ಕೂಲ್ಡ್ ಗ್ಲೋವ್ ಬಾಕ್ಸ್

ಕೂಲ್ಡ್ ಗ್ಲೋವ್ ಬಾಕ್ಸ್ ಫೀಚರ್ ಮೂಲಕ ಪಾನೀಯಗಳನ್ನು ತಂಪಾಗಿಡಬಹುದು. ಈ ಫೀಚರ್ ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲದೇ ಟಾಟಾ ಟಿಯಾಗೊ, ರೆನಾಲ್ಟ್ ಟ್ರೈಬರ್‌, ಸ್ಕೋಡಾ ರಾಪಿಡ್, ಹ್ಯುಂಡೈ ಓರಾ ಹಲವು ಕಾರುಗಳಲ್ಲಿಯೂ ಲಭ್ಯವಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

7. ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್

ಈ ಹಿಂದೆ ಹೈ ಎಂಡ್ ಕಾರುಗಳಲ್ಲಿ ಮಾತ್ರ ಲಭ್ಯವಿದ್ದ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಫೀಚರ್ ಇದೀಗ ಮಧ್ಯಮ ಕ್ರಮಾಂಕದ ಎಸ್‌ಯುವಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಹೈ ಎಂಡ್ ಮಾದರಿಗಳಲ್ಲಿ ಕಂಡುಬರುತ್ತವೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಮಹೀಂದ್ರಾ ಎಕ್ಸ್‌ಯುವಿ 300 ಸೇರಿದಂತೆ ಹಲವು ಮಿಡ್ ರೇಂಜ್ ಕಾರುಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಈ ಫೀಚರ್ ಚಾಲಕ ಹಾಗೂ ಸಹ ಚಾಲಕನ ಟೆಂಪರೇಚರ್ ಅನ್ನು ಪ್ರತ್ಯೇಕವಾಗಿ ಅಡ್ಜಸ್ಟ್ ಮಾಡುತ್ತದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

8. ಪ್ರೀಮಿಯಂ ಸೌಂಡ್ ಸಿಸ್ಟಂ

ಈ ಹಿಂದೆ ಪ್ರೀಮಿಯಂ ಸೌಂಡ್ ಸಿಸ್ಟಂ ಪಡೆಯಲು ಹೆಚ್ಚು ಬೆಲೆ ಪಾವತಿಸಬೇಕಾಗಿತ್ತು. ಆದರೆ ಈಗ ಈ ಫೀಚರ್ ಅಗ್ಗವಾಗಿದ್ದು, ಹಲವು ಮಿಡ್ ರೇಂಜ್ ಕಾರುಗಳಲ್ಲಿ ಲಭ್ಯವಿದೆ.

ಸಾಮಾನ್ಯ ಕಾರುಗಳಲ್ಲೂ ಬಳಕೆಯಾಗುತ್ತಿರುವ ಐಷಾರಾಮಿ ಕಾರುಗಳ ಫೀಚರ್ಸ್‌ಗಳು!

ಇವುಗಳಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಹ್ಯುಂಡೈ ಐ 20 ಹಾಗೂ ಟಾಟಾ ಹ್ಯಾರಿಯರ್'ನಂತಹ ಹಲವು ಕಾರುಗಳು ಸೇರಿದ್ದು, ಚಾಲಕ ಮತ್ತು ಸಹ ಪ್ರಯಾಣಿಕರಿಗೆ ಉತ್ತಮ ಮನರಂಜನೆ ನೀಡಲು ಸಹಕಾರಿಯಾಗಿವೆ.

Most Read Articles

Kannada
English summary
Common features found in luxury cars and mid range cars in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X