ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಭಾರತದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳು, ಸೆಡಾನ್‌ ಕಾರುಗಳು ಹಾಗೂ ಎಸ್‌ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಮೂರು ಪ್ರಕಾರಗಳ ಮಿಶ್ರಣವನ್ನು ಹೊಂದಿರುವ ಬಾಡಿ ರಚನೆಯೊಂದಿಗೆ ಕೆಲವು ಕಾರುಗಳನ್ನು ಮಾರಾಟ ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಅಂತಹ ಕಾರುಗಳನ್ನು ಕ್ರಾಸ್‌ಓವರ್‌ ಕಾರುಗಳು (ಸಿಒಸಿ) ಎಂದು ಕರೆಯಲಾಗುತ್ತದೆ. ಈ ಕಾರುಗಳು ಹ್ಯಾಚ್‌ಬ್ಯಾಕ್‌, ಸೆಡಾನ್ ಹಾಗೂ ಎಸ್‌ಯುವಿ ಬಾಡಿ ಸ್ಟೈಲ್ ನಲ್ಲಿ ನಿರ್ಮಾಣವಾಗಿರುತ್ತವೆ. ಕ್ರಾಸ್ಒವರ್ ಕಾರುಗಳು ತಮ್ಮ ನೋಟದಿಂದ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುತ್ತವೆ. ಪ್ರಾಯೋಗಿಕತೆ ಹಾಗೂ ಕ್ರಿಯಾತ್ಮಕತೆಯಲ್ಲಿ ಈ ಶೈಲಿಯ ಕಾರುಗಳ ಬಗ್ಗೆ ಯಾವುದೇ ಅತೃಪ್ತಿ ಇಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಆದರೆ ಕೆಲವು ಕ್ರಾಸ್ಒವರ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಈ ಲೇಖನದಲ್ಲಿ ಭಾರೀ ನಿರೀಕ್ಷೆಯೊಂದಿಗೆ ದೇಶಿಯಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಕಣ್ಮರೆಯಾದ ಐದು ಕ್ರಾಸ್‌ಓವರ್‌ ಕಾರುಗಳು ಯಾವುವು ಎಂಬುದನ್ನು ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ರೆನಾಲ್ಟ್ ಕ್ಯಾಪ್ಚರ್

2017 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಕ್ಯಾಪ್ಚರ್ ರೆನಾಲ್ಟ್ ಕಂಪನಿಯ ಪ್ರೀಮಿಯಂ ಕ್ರಾಸ್ಒವರ್ ಕಾರ್ ಆಗಿತ್ತು. ಪ್ರೀಮಿಯಂ ಎಸ್‌ಯುವಿಯಂತೆ ಈ ಕಾರು ಆಕರ್ಷಕವಾಗಿದ್ದರೂ ಸಹ ಬಹುತೇಕ ಜನರಿಗೆ ಕ್ಯಾಪ್ಚರ್‌ನ ಒರಟು ನೋಟ ಇಷ್ಟವಾಗಲಿಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಈ ಕ್ರಾಸ್ಒವರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿತ್ತು. ಆದರೂ ರೆನಾಲ್ಟ್ ಕಂಪನಿಯ ಈ ಕ್ರಾಸ್ಒವರ್ ಕಾರು ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿತ್ತು. ಇದರ ಪರಿಣಾಮವಾಗಿ ರೆನಾಲ್ಟ್ ಕಂಪನಿಯು 2020 ರಲ್ಲಿ ಭಾರತದಲ್ಲಿ ಕ್ಯಾಪ್ಚರ್ ಕಾರಿನ ಸ್ಥಗಿತಗೊಳಿಸಿತು.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸ್

ಫೋಕ್ಸ್‌ವ್ಯಾಗನ್ ಕಂಪನಿಯು ಪೋಲೊ ಕ್ರಾಸ್ ಕಾರನ್ನು 2013 ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆಗ ಭಾರತದಲ್ಲಿ ಕ್ರಾಸ್‌ಒವರ್‌ಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈ ಕಾರು ಸಾಮಾನ್ಯ ಪೋಲೊ ಹ್ಯಾಚ್‌ಬ್ಯಾಕ್ ಕಾರಿನ ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಈ ಕಾರು ಸ್ಟಾಂಡರ್ಡ್ ಮಾದರಿಗಿಂತ ಸ್ವಲ್ಪ ಒರಟಾಗಿ ಕಾಣುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಸಾಮಾನ್ಯವಾಗಿ ಸ್ಪೋರ್ಟ್ಸ್ ಕಾರುಗಳ ಸುತ್ತಲೂ ಪ್ಲಾಸ್ಟಿಕ್ ಪ್ಯಾನಲ್‌ಗಳನ್ನು ಒದಗಿಸಲಾಗುತ್ತದೆ. ಪೋಲೊ ಕ್ರಾಸ್ ಕಾರು ಸಹ ಇದರಿಂದ ಹೊರತಾಗಿರಲಿಲ್ಲ.ಈ ಬದಲಾವಣೆಗಳಿಂದ ಕ್ರಾಸ್ಒವರ್ ಕಾರಿನಂತೆ ಕಾಣುವ ಫೋಕ್ಸ್‌ವ್ಯಾಗನ್ ಕಾರುಗಳು ಗ್ರಾಹಕರಿಗೆ ಇಷ್ಟವಾಗಲಿಲ್ಲ. ಪೋಲೋ ಕ್ರಾಸ್‌ ಕಾರಿನ ಮಾರಾಟವು ಬಿಡುಗಡೆಯಾದ ಎರಡು ವರ್ಷಗಳ ನಂತರ ಅಂದರೆ 2015 ರಲ್ಲಿ ಸ್ಥಗಿತಗೊಂಡಿತು.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಟಾಟಾ ಅರಿಯಾ

ಮೇಲೆ ತಿಳಿಸಿದ ಕ್ರಾಸ್‌ಓವರ್‌ ಕಾರುಗಳು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ವಿಫಲವಾದವು. ಆದರೆ ಟಾಟಾ ಅರಿಯಾ ಮಾರಾಟದಲ್ಲಿ ಗಮನಾರ್ಹ ಸಂಖ್ಯೆಯ ಗ್ರಾಹಕರನ್ನು ಪಡೆಯಿತು. ಮಹೀಂದ್ರಾ ಎಕ್ಸ್‌ಯು‌ವಿ 500 ನಂತಹ ಕಾರುಗಳ ಪೈಪೋಟಿಯಿಂದಾಗಿ ಟಾಟಾ ಮೋಟಾರ್ಸ್ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿತು.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಟಾಟಾ ಅರಿಯಾ ಕಾರು ಎಂಪಿವಿ, ಎಸ್‌ಯುವಿ ಹಾಗೂ ಸೆಡಾನ್‌ ಸೇರಿದಂತೆ ಮೂರು ರೀತಿಯ ಬಾಡಿ ರಚನೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ಕಂಪನಿಯಿಂದ ಹೊರ ಬಂದ ನಯವಾದ ವಿನ್ಯಾಸದ ಕಾರುಗಳಲ್ಲಿ ಅರಿಯಾ ಹೆಸರು ಸಹ ಸೇರಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಟೊಯೊಟಾ ಎಟಿಯೋಸ್ ಕ್ರಾಸ್

ದೇಶಿಯ ಮಾರುಕಟ್ಟೆಯಲ್ಲಿ ಇಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್‌ ಕಾರಿಗೆ ದೊರೆತ ಉತ್ತಮ ಸ್ವಾಗತದ ನಂತರ, ಟೊಯೊಟಾ ಕಂಪನಿಯು ಲಿವಾ ಮಾದರಿಯನ್ನು ಆಧರಿಸಿ ಎಟಿಯೋಸ್ ಕ್ರಾಸ್‌ಒವರ್ ಕಾರ್ ಅನ್ನು ಪರಿಚಯಿಸಿತು. ಸುತ್ತಲೂ ಪ್ರಬಲವಾದ ಪ್ಲಾಸ್ಟಿಕ್ ಪ್ಯಾನಲ್‌ಗಳಿಂದ ವಿನ್ಯಾಸಗೊಳಿಸಲಾಗಿರುವ ಈ ಕಾರು ಮುಂಭಾಗದಲ್ಲಿ ಎಟಿಯೋಸ್ ಲಿವಾ ಕಾರಿಗಿಂತ ದೊಡ್ಡ ಬಂಪರ್ ಅನ್ನು ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಎಟಿಯೋಸ್ ಕ್ರಾಸ್‌ನ ಎಲ್ಲಾ ನಾಲ್ಕು ಬದಿಗಳಲ್ಲಿ ಕಪ್ಪು ಪ್ಲಾಸ್ಟಿಕ್ ಪ್ಯಾನಲ್‌, ಸ್ಪೋರ್ಟಿ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. ಲಿವಾ ಮಾದರಿಗೆ ಹೋಲಿಸಿದರೆ ಈ ಕ್ರಾಸ್‌ಒವರ್ ಕಾರು ಹೆಚ್ಚುವರಿ ಉದ್ದ, ಅಗಲ ಹಾಗೂ ಎತ್ತರವನ್ನು ಹೊಂದಿದೆ. ಟೊಯೊಟಾ ಕಂಪನಿಯ ಈ ಕಾರನ್ನು ಅತ್ಯಂತ ಸುಂದರವಾದ ಕ್ರಾಸ್‌ಒವರ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದರೂ, 2020 ರಲ್ಲಿ ನವೀಕರಿಸಿದ ನಂತರ ಇಂಟಿರಿಯರ್ ಫೀಚರ್'ಗಳ ಕೊರತೆಯಿಂದಾಗಿ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಫಿಯೆಟ್ ಅವೆಂಚುರಾ

ಅವೆಂಚುರಾ ಹ್ಯಾಚ್‌ಬ್ಯಾಕ್ ಮಿಶ್ರಣ ಹೊಂದಿರುವ ಫಿಯೆಟ್ ಕಂಪನಿಯ ಆಕರ್ಷಕ ಕ್ರಾಸ್‌ಒವರ್ ಕಾರು ಮಾದರಿಯಾಗಿದೆ. ಫಿಯೆಟ್ ಪುಂಟೋ ಕಾರಿನ ಮೇಲೆ ಆಧಾರಿತವಾಗಿರುವ ಈ ಕಾರು ಹೆಚ್ಚು ಉದ್ದ, ಅಗಲ ಹಾಗೂ ಎತ್ತರವನ್ನು ಮಾತ್ರವಲ್ಲದೆ 205 ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾದ ಕ್ರಾಸ್‌ಓವರ್‌ ಕಾರುಗಳಿವು

ಅವೆಂಚುರಾ ಫಿಯೆಟ್‌ ಕಾರಿನ ಹಿಂಭಾಗದಲ್ಲಿ ಹೆಚ್ಚುವರಿ ವ್ಹೀಲ್ ನೀಡಲಾಗಿತ್ತು. ಕಂಪನಿಯು ಈ ಕಾರಿನ ಮಾರಾಟದ ನಂತರದ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲಿಲ್ಲ. ಫಿಯೆಟ್ ಕಂಪನಿಯು ಅವೆಂಚುರಾ ಕ್ರಾಸ್ಒವರ್ ಕಾರಿನ ಮಾರಾಟವನ್ನು 2019 ರಲ್ಲಿ ಸ್ಥಗಿತಗೊಳಿಸಿತು.

ಹಲವು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ಬಾಡಿ ರಚನೆಯ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಇವುಗಳಲ್ಲಿ ಕೆಲವು ಕಾರುಗಳು ಮಾತ್ರ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸಫಲವಾದರೆ ಇನ್ನೂ ಕೆಲವು ಕಾರುಗಳು ಗ್ರಾಹಕರನ್ನು ಸೆಳೆಯಲು ವಿಫಲವಾಗಿ ಸ್ಥಗಿತಗೊಳ್ಳುತ್ತಿವೆ.

Most Read Articles

Kannada
English summary
Crossover cars which were discontinued in domestic market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X