ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Daimler India Commercial Vehicles (ಡಿಐಸಿವಿ) 20 Bharat Benz ಬಸ್ಸುಗಳನ್ನು ಬಿಹಾರ ಸರ್ಕಾರಕ್ಕೆ ತಲುಪಿಸಿದೆ. ಕಂಪನಿಯು ತನ್ನ ಜನಪ್ರಿಯ ಬಸ್ ಮಾದರಿಯಾದ 1017 ಬಸ್ಸಿನ 16 ಯುನಿಟ್ ಗಳನ್ನು ಹಾಗೂ 1624 ಬಸ್ಸಿನ 4 ಯುನಿಟ್ ಗಳನ್ನು ಬಿಹಾರ ಸರ್ಕಾರಕ್ಕೆ ವಿತರಿಸಿದೆ. ಈ ಬಸ್‌ಗಳನ್ನು ಬಿಹಾರ ಸರ್ಕಾರದ ಇಂಟರ್‌ಸಿಟಿ ಬಸ್ ಸೇವೆಯಾದ ನ್ಯಾಯ ರಥದ ಅಡಿಯಲ್ಲಿ ಬಳಸಲಾಗುವುದು.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Bharat Benz ಕಂಪನಿಯ ಈ ಬಸ್ಸುಗಳು ಹಲವು ಸೌಲಭ್ಯಗಳನ್ನು ಹೊಂದಿವೆ. ಈ ಬಸ್‌ಗಳಲ್ಲಿ ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹ್ಯಾಂಡ್ಸ್ ಫ್ರೀ ಡೋರ್, ಸ್ಯಾನಿಟೈಸರ್ ಹಾಗೂ ಟೆಂಪರೇಚರ್ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ. ಕಂಪನಿಯ ಪ್ರಕಾರ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಸ್‌ಗಳಲ್ಲಿ ಸ್ಟ್ರಾಂಗ್ ಫ್ರೇಮ್ ರಚನೆ, ಪ್ಯಾರಾಬೋಲಿಕ್ ಲೀಫ್ ಸ್ಪ್ರಿಂಗ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Bharat‌ Benz‌ ಕಂಪನಿಯ 1017 ಬಸ್ 167 ಬಿಹೆಚ್‌ಪಿ ಪವರ್ ಹಾಗೂ 520 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1624 ಬಸ್ 236 ಬಿಹೆಚ್‌ಪಿ ಪವರ್ ಹಾಗೂ 859 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಹಾರ ಸರ್ಕಾರಕ್ಕೆ Daimler ಬಸ್ ಗಳನ್ನು ವಿತರಿಸಿರುವ ಬಗ್ಗೆ Daimler ಬಸ್ ಇಂಡಿಯಾದ ಮುಖ್ಯಸ್ಥರಾದ ಕಾರ್ಲ್-ಅಲೆಕ್ಸಾಂಡರ್ ಸೀಡೆಲ್ ಮಾಹಿತಿ ನೀಡಿದ್ದಾರೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ಈ ಬಗ್ಗೆ ಮಾತನಾಡಿರುವ ಅವರು, ಕಂಪನಿಯು ಮೊದಲ ಬಾರಿಗೆ ಬಿಹಾರ ಸರ್ಕಾರಕ್ಕೆ ಬಸ್ಸುಗಳನ್ನು ವಿತರಿಸಿದೆ. ಇದು ದೇಶದ ಪೂರ್ವ ಪ್ರದೇಶದಲ್ಲಿ Bharat‌ Benz ಬಸ್‌ಗಳಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. Bharat ‌Benz ಕಂಪನಿಯ ಬಸ್ಸುಗಳು ಸುಲಭವಾದ ಕಾರ್ಯಾಚರಣೆಯನ್ನು ಒದಗಿಸುತ್ತವೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Bharat ‌Benz‌ ನಿಂದ ಬರುವ ಈ ಬಸ್ಸುಗಳು ದೃಢವಾದ ಚಾಸಿಸ್‌ಗೆ ಹೆಸರುವಾಸಿಯಾಗಿದ್ದು, ವರ್ಗ ಸೌಕರ್ಯ ಹಾಗೂ ಸುರಕ್ಷತಾ ಫೀಚರ್'ಗಳಿಗೆ ಹೆಸರುವಾಸಿಯಾಗಿವೆ. Bharat Benz ನ ಈ ಬಸ್ ಗಳಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕ ಸೀಟುಗಳನ್ನು ನೀಡಲಾಗಿದೆ. ಈ ಬಸ್ ಶಾಲಾ, ಕಾಲೇಜು, ಸರ್ಕಾರಿ ನೌಕರರು ಹಾಗೂ ಖಾಸಗಿ ಉದ್ಯೋಗಿಗಳನ್ನು ಸಾಗಿಸಲು ಸೂಕ್ತವಾಗಿದೆ. ಈ ಬಸ್ಸುಗಳು ಈ ಸೆಗ್ ಮೆಂಟಿನಲ್ಲಿಯೇ ಹೆಚ್ಚು ಉದ್ದವಾದ ವ್ಹೀಲ್ ಬೇಸ್‌ ಅನ್ನು ಹೊಂದಿವೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ಬಿಹಾರ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿ:

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ತೈಲ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟು ಕೊಂಡು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು ಹೊಸ ವಾಹನಗಳನ್ನು ಖರೀದಿಸುವಾಗ ಕೇವಲ ಎಲೆಕ್ಟ್ರಿಕ್ ವಾಹನ ಖರೀದಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ಎಲೆಕ್ಟ್ರಿಕ್ ವಾಹನಗಳು ಆರ್ಥಿಕವಾಗಿರುವುದು ಮಾತ್ರವಲ್ಲದೆ ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ. ನಿತೀಶ್ ಕುಮಾರ್ರವರು ಸಹ 2019 ರಿಂದ ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿದ್ದಾರೆ ಎಂಬುದು ಗಮನಾರ್ಹ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ಅವರು ಬಿಹಾರ ವಿಧಾನಸಭೆಗೆ ಪ್ರಯಾಣಿಸುವುದರಿಂದ ಹಿಡಿದು ತಮ್ಮ ಯಾವುದೇ ಅಧಿಕೃತ ಕೆಲಸಗಳಿಗೆ ಎಲೆಕ್ಟ್ರಿಕ್ ಕಾರನ್ನು ಬಳಸುತ್ತಾರೆ. ನಿತೀಶ್ ಕುಮಾರ್ ರವರು ಸರ್ಕಾರಿ ಅಧಿಕಾರಿಗಳಿಗೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ. ಅವರು ಬಿಹಾರದ ಐವರು ಉನ್ನತ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ಬಿಹಾರವನ್ನು ಮಾಲಿನ್ಯ ರಹಿತವನ್ನಾಗಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಅವಶ್ಯಕವಾಗಿರುವುದರಿಂದ, ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮೂಲಕ ಅಧಿಕಾರಿಗಳು ಹಾಗೂ ನಾಯಕರು ಜನರಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಬಗ್ಗೆ ಸಂದೇಶ ಕಳುಹಿಸಬೇಕೆಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

ನಿತೀಶ್ ಕುಮಾರ್ ರವರು ತಮ್ಮ ವೈಯಕ್ತಿಕ ಬಳಕೆಗಾಗಿ Tata Tigor ಎಲೆಕ್ಟ್ರಿಕ್ ಸೆಡಾನ್ ಕಾರ್ ಅನ್ನು ಬಳಸುತ್ತಾರೆ. ಬಿಹಾರ ವಿಧಾನ ಸಭೆಗೆ ತೆರಳುವಾಗ ಹಾಗೂ ಅಲ್ಲಿಂದ ಮರಳುವಾಗ ಅವರು ಹಲವು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Tata Motors ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. Tata Motors ಕಂಪನಿಯ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಜೊತೆಗೆ ಈ ಕಾರು ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ.

ಇಂಟರ್‌ಸಿಟಿ ಬಸ್ ಸೇವೆಗಾಗಿ ಬಳಕೆಯಾಗಲಿವೆ Bharat Benz ಬಸ್‌ಗಳು

Tata Motors ಕಂಪನಿಯು Tigor ಎಲೆಕ್ಟ್ರಿಕ್ ಕಾರ್ ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಿಲ್ಲ. ಸದ್ಯಕ್ಕೆ ಈ ಕಾರ್ ಅನ್ನು ಫ್ಲೀಟ್ ಕಂಪನಿಗಳು ಹಾಗೂ ವಿಶೇಷ ಅಧಿಕೃತ ಆದೇಶಗಳ ಮೇರೆಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. Tata Tigor ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಸೆಡಾನ್ ಕಾರ್ ಆಗಿದ್ದು, ಇದರ ವಿನ್ಯಾಸವು ಅದರ ಪೆಟ್ರೋಲ್ ಮಾದರಿಯನ್ನು ಹೋಲುತ್ತದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿTata Motors ಜೊತೆಗೆ ಇತರ ಖ್ಯಾತ ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗಾಗಲೇ ಹ್ಯುಂಡೈ, ಎಂಜಿ ಮೋಟಾರ್ ನಂತಹ ಕಂಪನಿಗಳು ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿವೆ.

Most Read Articles

Kannada
English summary
Daimler india delivers 20 buses to bihar government for inter city bus service details
Story first published: Wednesday, August 25, 2021, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X