ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಕಂಪನಿಯು ತನ್ನ ವಿವಿಧ ಕಾರು ಮಾದರಿಗಳ ಖರೀದಿ ಮೇಲೆ ಮಾರ್ಚ್ ಅವಧಿಗಾಗಿ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ಆಫರ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಗ್ರಾಹಕರು ಗರಿಷ್ಠ ರೂ.37 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಕೋವಿಡ್-19 ಪರಿಣಾಮ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಪ್ರಮುಖ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಕಾರು ಖರೀದಿ ಯೋಜನೆಯಿಂದ ಹಿಂದೆ ಸರಿದಿದ್ದ ಹಲವು ಗ್ರಾಹಕರು ಇದೀಗ ಕಾರು ಖರೀದಿಗೆ ಮುಂದಾಗುತ್ತಿರುವುದು ಕಾರು ಕಂಪನಿಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಹೊಸ ಕಾರು ಮಾದರಿಗಳಿಗೆ ಬೇಡಿಕೆ ಹೆಚ್ಚಿದ ಹಿನ್ನಲೆಯಲ್ಲಿ ವಾಹನಗಳ ಖರೀದಿಯ ಮೇಲೆ ಗರಿಷ್ಠ ಆಫರ್‌ಗಳ ಜೊತೆಗೆ ಸರಳ ಸಾಲ-ಸೌಲಭ್ಯ ನೀಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ದಟ್ಸನ್ ಸಹ ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಆಫರ್ ಘೋಷಿಸಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಹೊಸ ಆಫರ್‌ಗಳು ಈ ತಿಂಗಳ ಕೊನೆಯ ತನಕ ಲಭ್ಯವಿದ್ದು, ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಮಾದರಿಗಳ ಮೇಲೆ ಆಫರ್ ನೀಡಲಾಗುತ್ತಿದೆ. ಹೊಸ ಆಫರ್‌ಗಳಲ್ಲಿ ರೆಡಿ-ಗೊ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ರೂ.37 ಸಾವಿರ ಡಿಸ್ಕೌಂಟ್ ಪಡೆದುಕೊಂಡಿದ್ದು, ಇದರಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್, ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆಯಬಹುದಾಗಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಜೊತೆಗೆ ದಟ್ಸನ್ ನಿರ್ಮಾಣದ ಯಾವುದೇ ಕಾರು ಖರೀದಿಸುವ ಗ್ರಾಹಕರಿಗೆ ವಿವಿಧ ಆಫರ್ ಜೊತೆಗೆ ಹೆಚ್ಚುವರಿಯಾಗಿ ರೂ. 7 ಸಾವಿರದಷ್ಟುಕ್ರೆಡಿಟ್ ಕಾರ್ಡ್ ಸಿವಿಲ್ ಸ್ಕೋರ್ ಆಧರಿಸಿ ಕ್ಯಾಶ್‌ಬ್ಯಾಕ್ ಲಭ್ಯವಿರಲಿದ್ದು, ರೆಡಿ-ಗೊ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.86 ಲಕ್ಷದಿಂದ ರೂ. 4.82 ಲಕ್ಷ ಬೆಲೆ ಹೊಂದಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಗೊ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.02 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.51 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಇನ್ನು ಗೊ ಪ್ಲಸ್ ಕಾರು ಮಾದರಿಯು ದಟ್ಸನ್ ನಿರ್ಮಾಣದ ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಂಪಿವಿ ಕಾರು ಮಾದರಿಯಾಗಿದ್ದು, ಗೊ ಪ್ಲಸ್ ಕಾರು ಮಾದರಿಯ ಮೇಲೂ ರೂ. 37 ಸಾವಿರ ಡಿಸ್ಕೌಂಟ್ ಲಭ್ಯವಿದೆ. ರೂ. 37 ಸಾವಿರ ಮೌಲ್ಯದ ವಿವಿಧ ಆಫರ್‌ಗಳಲ್ಲಿ ರೂ.15 ಸಾವಿರ ಕ್ಯಾಶ್‌ ಡಿಸ್ಕೌಂಟ್, ರೂ. 15 ಸಾವಿರ ಎಕ್ಸ್‌ಚೆಂಜ್ ಬೋನಸ್‌ನೊಂದಿಗೆ ರೂ. 7 ಸಾವಿರ ಹೆಚ್ಚುವರಿಯಾಗಿ ಕ್ರೆಡಿಟ್ ಕಾರ್ಡ್ ಸಿವಿಲ್ ಸ್ಕೋರ್ ಆಧರಿಸಿ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ಗೊ ಪ್ಲಸ್ ಕಾರು ಮಾದರಿಯು ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಏಪ್ರಿಲ್ ಅವಧಿಗಾಗಿ ವಿವಿಧ ಆಫರ್‌‌ಗಳನ್ನು ಘೋಷಣೆ ಮಾಡಿದ ದಟ್ಸನ್

ದಟ್ಸನ್ ಗೊ ಪ್ಲಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.99 ಲಕ್ಷ ಬೆಲೆ ಹೊಂದಿದ್ದು, ಈ ಹಣಕಾಸು ವರ್ಷದ ಕೊನೆಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ದಟ್ಸನ್ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್‌ಗಳನ್ನು ಪಡೆಯಬಹುದಾಗಿದೆ.

More from DriveSpark

Article Published On: Friday, April 16, 2021, 16:46 [IST]
English summary
Datsun Announced Discounts And Offers For redi-Go, GO, and the GO+ Models In April 2021.
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+