ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ನಿಸ್ಸಾನ್ ಕಾರುಗಳ ಮರಾಟ ಆರಂಭವಾದ ಬೆನ್ನೆಲ್ಲೇ ಇದೀಗ ದಟ್ಸನ್ ಕಾರುಗಳ ಮಾರಾಟವು ಸಹ ಆರಂಭವಾಗಿದ್ದು, ಸಿಎಸ್‌ಡಿ ಕ್ಯಾಂಟಿನ್ ಕಾರುಗಳಲ್ಲಿ ದಟ್ಸನ್ ಕಾರುಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಲಾಗಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಯ ಸಹಭಾಗಿತ್ವ ಸಂಸ್ಥೆಯಾದ ದಟ್ಸನ್ ಕಂಪನಿಯು ಭಾರತದಲ್ಲಿ ರೆಡಿ ಗೊ, ಗೊ ಮತು ಗೊ ಪ್ಲಸ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಡಿಫೆನ್ಸ್ ಕ್ಯಾಂಟಿನ್‌ಗಳಲ್ಲಿ ಮೂರು ಕಾರುಗಳಿಂದ ಒಟ್ಟು ಏಳು ವೆರಿಯೆಂಟ್‌ಗಳ ಮಾರಾಟ ಆರಂಭಿಸಲಾಗಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ವಿಶೇಷ ರಿಯಾಯ್ತಿ ದರಗಳಲ್ಲಿ ಹಲವಾರು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಸೌಲಭ್ಯ ಹೊಂದಿದ್ದು, ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ತಮ್ಮ ವಿವಿಧ ಕಾರು ಮಾದರಿಗಳನ್ನು ಮಾರಾಟ ಆರಂಭಿಸಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ವಿಶೇಷವಾಗಿ ಸೇನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಸೇನಾ ಕ್ಯಾಂಟಿನ್‌ಗಳಲ್ಲಿ ಲಭ್ಯವಿರುವ ಕಾರುಗಳ ದರವು ಸಾಮಾನ್ಯ ಶೋರೂಂಗಳಲ್ಲಿನ ಕಾರುಗಳಿಂತಲೂ ಸಾಕಷ್ಟು ರಿಯಾಯ್ತ ದರದಲ್ಲಿ ಮಾರಾಟವಾಗಲಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ರೆಡಿ ಗೊ, ಗೊ ಮತ್ತು ಗೊ ಪ್ಲಸ್ ಕಾರುಗಳು ಆರಂಭಿಕವಾಗಿ ರೂ. 3.28 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.76 ಲಕ್ಷ ಬೆಲೆ ಹೊಂದಿವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಸಾಮಾನ್ಯ ಶೋರೂಂಗಳಲ್ಲಿನ ದಟ್ಸನ್ ಕಾರುಗಳಿಗೂ ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿನ ಕಾರುಗಳ ಬೆಲೆಗೂ ರೂ.69 ಸಾವಿರದಿಂದ ಗರಿಷ್ಠ ರೂ. 1.03 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದ್ದು, ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿನ ಕೆಲವೇ ಕೆಲವು ವೆರಿಯೆಂಟ್ ಮಾತ್ರ ಖರೀದಿಗೆ ಲಭ್ಯವಿರುತ್ತವೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಇನ್ನು ಸಾಮಾನ್ಯ ಶೋರೂಂಗಳಲ್ಲಿ ರೆಡಿ-ಗೊ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.82 ಲಕ್ಷದಿಂದ ರೂ. 4.96 ಲಕ್ಷ ಬೆಲೆ ಹೊಂದಿದ್ದು, 800 ಸಿಸಿ ಮತ್ತು 1.0-ಲೀಟರ್(1000ಸಿಸಿ) ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಮಧ್ಯಮ ಕ್ರಮಾಂಕದಲ್ಲಿನ ಗೊ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.02 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.51 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ.

ಸಿಎಸ್‌ಡಿ ಕ್ಯಾಂಟಿನ್‌ಗಳಲ್ಲಿ ನಿಸ್ಸಾನ್ ನಂತರ ದಟ್ಸನ್ ಕಾರುಗಳ ಮಾರಾಟಕ್ಕೂ ಚಾಲನೆ

ಗೊ ಪ್ಲಸ್ ಕಾರು ಮಾದರಿಯು ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.99 ಲಕ್ಷ ಬೆಲೆ ಹೊಂದಿದೆ.

Most Read Articles

Kannada
Read more on ದಟ್ಸನ್ datsun
English summary
Datsun cars are now available in Canteen Store Departments (CSD). Read in Kannada.
Story first published: Tuesday, June 15, 2021, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X