Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

MG Motor ಕಂಪನಿಯು ಶೀಘ್ರದಲ್ಲೇ ತನ್ನ Astor ಕಾಂಪ್ಯಾಕ್ಟ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಕಂಪನಿಯು ಈ ಎಸ್‌ಯುವಿಯಲ್ಲಿ ಇದುವರೆಗೂ ಯಾವುದೇ ಕಂಪನಿಯು ಪರಿಚಯಿಸದ ವಿವಿಧ ಅತ್ಯಾಧುನಿಕ ತಾಂತ್ರಿಕ ಫೀಚರ್ ಗಳನ್ನು ನೀಡಲಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಈ ಎಸ್‌ಯುವಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆನ್ಸ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗುತ್ತದೆ. Astor ಎಸ್‌ಯುವಿಯಲ್ಲಿರುವ ಫೀಚರ್ ಗಳು ಈ ಎಸ್‌ಯುವಿಯ ಬಳಕೆದಾರರಿಗೆ ಕೆಲವು ಎಚ್ಚರಿಕೆಗಳನ್ನು ಹಾಗೂ ಸಲಹೆಯ ಧ್ವನಿಯನ್ನು ನೀಡುತ್ತವೆ. MG Motors ಕಂಪನಿಯು ಅಂತಹ ಧ್ವನಿಗಳನ್ನು ಸೆಲೆಬ್ರಿಟಿಗಳ ಧ್ವನಿ ಮೂಲಕ ನೀಡುತ್ತಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಪ್ಯಾರಾಲಿಂಪಿಕ್ ಅಥ್ಲೀಟ್ ಹಾಗೂ ಖೇಲ್ ರತ್ನ ಪ್ರಶಸ್ತಿ ವಿಜೇತರಾದ ದೀಪಾ ಮಲಿಕ್ ರವರು MG Astor ಎಸ್‌ಯುವಿಗಾಗಿ ಧ್ವನಿ ನೀಡಿದ್ದಾರೆ. ಈ ಎಸ್‌ಯುವಿಯಲ್ಲಿ ಅವರ ಧ್ವನಿ ಮಾತ್ರವಲ್ಲದೆ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಧ್ವನಿಯೂ ಕೇಳ ಬಹುದು. ಮಹಿಳಾ ಕ್ರೀಡಾಪಟು ದೀಪಾ ಮಲಿಕ್‌ರವರನ್ನು ಮತ್ತಷ್ಟು ಜನಪ್ರಿಯವಾಗಿಸಲು MG Motor ಕಂಪನಿಯು ತನ್ನ Astor ಎಸ್‌ಯುವಿಯಲ್ಲಿ ಅವರ ಧ್ವನಿಯನ್ನು ಬಳಸಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

MG Motor ಕಂಪನಿಯು Astor ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಮುನ್ನ ಭಾರತದ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ. ಈ ಎಸ್‌ಯುವಿಯನ್ನು ಇತ್ತೀಚೆಗೆ ಪರ್ವತಶ್ರೇಣಿಯಲ್ಲಿ ಪರೀಕ್ಷಿಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ Astor ಎಸ್‌ಯುವಿಗೆ ಸಂಬಂಧಿಸಿದ ಹಲವು ಮಾಹಿತಿ ಹೊರ ಬಂದಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

Astor ಎಸ್‌ಯುವಿಯನ್ನು ಈ ಹಿಂದೆ ಅನಾವರಣಗೊಂಡಿದ್ದ ಕಾನ್ಸೆಪ್ಟ್ ಮಾದರಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿರುವ Astor ಎಸ್‌ಯುವಿಯ ಗ್ರಿಲ್ ರಚನೆ ಹಾಗೂ ಸೈಡ್ ಪ್ರೊಫೈಲ್ ಇತರ ಹಲವು ಕಾನ್ಸೆಪ್ಟ್ ಮಾದರಿಗಳಂತೆಯೇ ಇದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಐದು ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಈ ಎಸ್‌ಯುವಿಯು ರೂಫ್ ಮೇಲೆ ಗ್ರಾಬ್ ರೇಲಿಂಗ್, ಮಿರರ್ ಗಳಲ್ಲಿ ಇಂಡಿಕೇಟರ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಇವುಗಳಿಗಿಂತ ಹೆಚ್ಚಾಗಿ ಈ ಎಸ್‌ಯುವಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಹಲವರ ಗಮನ ಸೆಳೆಯುತ್ತದೆ. ಈ ಟೆಕ್ನಾಲಜಿಯು ಮೆಸೇಜ್ ಗಳನ್ನು ಓದುತ್ತದೆ, ಜೋಕ್ ಗಳನ್ನು ಹಾಗೂ ಸಂಭಾಷಣೆಗಳನ್ನು ಹೇಳುತ್ತದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಜೊತೆಗೆ ಮನುಷ್ಯರಂತೆಯೇ ನಡವಳಿಕೆಗಳನ್ನು ವ್ಯಕ್ತಪಡಿಸುತ್ತದೆ. ವಿಕಿಪೀಡಿಯಾ, ನ್ಯಾವಿಗೇಷನ್, ಮ್ಯೂಸಿಕ್ ಹಾಗೂ ಕಾರ್ ಅಲರ್ಟ್ ಗಳನ್ನು ಒದಗಿಸುತ್ತದೆ. ಇವುಗಳಿಗೆ ಅಮಿತಾಬ್ ಬಚ್ಚನ್ ಹಾಗೂ ದೀಪಾ ಮಲಿಕ್ ಇದಕ್ಕೆ ಧ್ವನಿ ನೀಡಿದ್ದಾರೆ. ಅವರ ಧ್ವನಿಗಳು Astor ಎಸ್‌ಯುವಿಯಲ್ಲಿರುವ ರೋಬೋಟ್‌ನ ಧ್ವನಿಯಂತೆ ಕೇಳಿಸುತ್ತವೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಈ ಎಲ್ಲಾ ಕಾರ್ಯಗಳು ಈಗ ಮುಕ್ತಾಯದ ಹಂತದಲ್ಲಿವೆ ಎಂದು ವರದಿಯಾಗಿದೆ. ಇದರಿಂದ MG Astor ಎಸ್‌ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ. MG Astor ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇವುಗಳಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳು ಸೇರಿವೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

ಈ ಎಸ್‌ಯುವಿಯು 5 ಸ್ಪೀಡ್ ಮ್ಯಾನುಯಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದುವ ನಿರೀಕ್ಷೆಗಳಿವೆ. MG Astor ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ Hyundai Creta ಸೇರಿದಂತೆ ಹಲವು ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

Astor ಎಸ್‌ಯುವಿಯು ಚಿಕ್ಕ ರೋಬೋಟ್ ನಂತಹ ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುವುದರಿಂದ ಭಾರತೀಯ ಗ್ರಾಹಕರಲ್ಲಿ ವಿಶಿಷ್ಟವಾದ ಸ್ವಾಗತವನ್ನು ಪಡೆಯುವ ನಿರೀಕ್ಷೆಗಳಿವೆ. ಹೊಸ Astor ಎಸ್‌ಯುವಿಯಲ್ಲಿ MG Motor ಕಂಪನಿಯು ಇತರ ಕಂಪನಿಗಳ ಕಾರುಗಳಿಂತಲೂ ಹೆಚ್ಚಿನ ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

Astor ಎಸ್‌ಯುವಿಯ ಫೀಚರ್'ಗಳಿಗೆ ಧ್ವನಿ ನೀಡಿದ ಖೇಲ್ ರತ್ನ ಪ್ರಶಸ್ತಿ ವಿಜೇತ ಅಥ್ಲೀಟ್

MG Motor ಕಂಪನಿಯು ಈ ಎಸ್‌ಯುವಿಯ ಮೂಲ ಮಾದರಿಯಲ್ಲೂ ಆ್ಯಪಲ್ ಕಾರ್ ಪ್ಲೇ ಹಾಗೂ ಅಂಡ್ರಾಯ್ಡ್ ಆಟೋ ಫೀಚರ್ ಗಳನ್ನು ಸ್ಟಾಂಡರ್ಡ್ ಆಗಿ ನೀಡಲಿದೆ ಎಂದು ವರದಿಯಾಗಿದೆ. Astor ಎಸ್‌ಯುವಿಯು ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. Astor ಎಸ್‌ಯುವಿಯು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಂದಿರುವ ಭಾರತದ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈಗ ಪ್ಯಾರಾಲಂಪಿಕ್ ಅಥ್ಲೀಟ್ ರವರಿಂದ ಧ್ವನಿ ನೀಡಿಸಿರುವ MG Motor ಕಂಪನಿಯು ಕೆಲವು ದಿನಗಳ ಹಿಂದಷ್ಟೇಜಪಾನ್ ನ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಭವಿನಾ ಪಟೇಲ್ ರವರಿಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸುವುದಾಗಿ ತಿಳಿಸಿತ್ತು. ಈ ಬಗ್ಗೆ MG Motor ಇಂಡಿಯಾ ಕಂಪನಿಯ ಅಧ್ಯಕ್ಷರಾದ ರಾಜೀವ್ ಚಾಬಾರವರೇ ಮಾಹಿತಿ ನೀಡಿದ್ದರು.

Article Published On: Tuesday, September 7, 2021, 18:00 [IST]
English summary
Deepa malik lends voice to mg astor ai tech details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+