ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

2022ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ದೆಹಲಿ ಆಟೋ ಎಕ್ಸ್‌ಪೋ ಕೋವಿಡ್ ಪರಿಣಾಮ ಮುಂದೂಡಿಕೆ ಮಾಡಲಾಗಿದ್ದು, ಜಗತ್ತಿನ ಪ್ರಮುಖ ಆಟೋ ಶೋಗಳಲ್ಲಿ ಒಂದಾಗಿರುವ ದೆಹಲಿ ಆಟೋ ಪ್ರದರ್ಶನವು ಕೋವಿಡ್ ಭೀತಿಯಿಂದಾಗಿ ಮುಂದೂಡಿಕೆಯಾಗಿದೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಕೋವಿಡ್ ಪರಿಣಾಮ ಆರ್ಥಿಕ ಸಂಕಷ್ಟ ತತ್ತರಿಸಿರುವ ಜಗತ್ತಿನ ಪ್ರಮುಖ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹರಸಾಹಸಪಡುತ್ತಿದ್ದು, ಭಾರತೀಯ ಆಟೋ ಉದ್ಯಮ ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಒಂದನೇ ಅಲೆಯ ನಂತರ ಎರಡನೇ ಅಲೆ ಇದೀಗ ಮೂರನೇ ಕೋವಿಡ್ ಭೀತಿಯೂ ಆರ್ಥಿಕ ಬೆಳವಣಿಗೆಯ ಮೇಲೆ ನಿರಂತವಾಗಿ ಹೊಡೆತ ನೀಡುತ್ತಿದ್ದು, ಸಂಕಷ್ಟದಲ್ಲಿರುವ ಆಟೋ ಉದ್ಯಮದಲ್ಲಿ ಈ ಬಾರಿ ಯಾವುದೇ ಗಮನಸೆಳೆಯಬಹುದಾದ ವಿದ್ಯಮಾನಗಳು ನಡೆಯಲು ಸಾಧ್ಯವಾಗಿಲ್ಲ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲೂ ಕೋವಿಡ್ ಭೀತಿಯಿದ್ದರೂ ಫೆಬ್ರವರಿಯಲ್ಲಿ ನಡೆದಿದ್ದರಿಂದ ಯಾವುದೇ ಅಡೆತಡೆಯಿಲ್ಲದೆ ಆಟೋ ಪ್ರದರ್ಶನವು ಯಶಸ್ವಿಯಾಗಿತ್ತು. ಆದರೆ ಇದೀಗ ಪರಿಸ್ಥಿತಿ ಸಾಕಷ್ಟು ವಿಷಮವಾಗಿದ್ದು, ಕೋವಿಡ್ ಭೀತಿಯಿಂದಾಗಿ 2022ರ ಆಟೋ ಎಕ್ಸ್‌ಪೋ ಅನ್ನು ಸದ್ಯಕ್ಕೆ ನಡೆಸದಿರಲು ನಿರ್ಧರಿಸಲಾಗಿದೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

1985ರಲ್ಲಿ ಮೊದಲ ಬಾರಿಗೆ ಆರಂಭವಾದ ದೆಹಲಿ ಆಟೋ ಎಕ್ಸ್‌ಪೋ 2020ರ ತನಕ 15 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ನಡೆಯುವ ದೆಹಲಿ ಆಟೋ ಎಕ್ಸ್‌ಪೋ ಜಗತ್ತಿನ ಪ್ರಮುಖ ಆಟೋ ಪ್ರದರ್ಶನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಹೊಸ ವಾಹನಗಳು, ಕಾನ್ಸೆಪ್ಟ್ ವಾನಹಗಳು, ತಂತ್ರಜ್ಞಾನ ಪ್ರದರ್ಶನಕ್ಕೆ ಮುಖ್ಯ ವೇದಿಕೆಯಾಗಿರುವ ಆಟೋ ಎಕ್ಸ್‌ಪೋದಲ್ಲಿ ವಿಶ್ವದ ಪ್ರಮುಖ ವಾಹನ ತಯಾರಕ ಕಂಪನಿಗಳು ಒಂದಡೆ ಸೇರಿ ತಮ್ಮ ಭವಿಷ್ಯ ವಾಹನಗಳನ್ನು, ತಂತ್ರಜ್ಞಾನದ ಆವಿಷ್ಕಾರವನ್ನು ಹೊರಜಗತ್ತಿಗೆ ಪ್ರದರ್ಶನಗೊಳಿಸುತ್ತವೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಬಹುದಾದ ವಾಹನಗಳ ಆಧಾರದ ಮೇಲೆ ಆಟೋ ಎಕ್ಸ್‌ಪೋ ಅನ್ನು 7 ರಿಂದ 10 ಕಾಲ ನಡೆಸಲಿದ್ದು, 2020ರಲ್ಲಿ 7 ದಿನಗಳ ಕಾಲ ನಡೆದಿದ್ದ ಆಟೋ ಎಕ್ಸ್‌ಪೋ ಅನ್ನು ಸಮಾರು 6.50 ಲಕ್ಷ ಜನ ಪ್ರವೇಶ ಶುಲ್ಕ ಪಾವತಿಸಿ ಹೊಸ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಸುಮಾರು 100ಕ್ಕೂ ಹೆಚ್ಚು ದೇಶಗಳ ಸಾವಿರಾರು ಆಟೋ ಉದ್ಯಮದ ಪ್ರತಿನಿಧಿಗಳು ಸಹ ಇಲ್ಲಿ ಭಾಗಿಯಾಗಲಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಆಟೋ ಎಕ್ಸ್‌ಪೋ ಆಯೋಜಕರು ಸದ್ಯದ ಪರಿಸ್ಥಿತಿಯಲ್ಲಿ ಆಟೋ ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದಾರೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಜೊತೆಗೆ ಒಂದು ವಾರದ ಆಟೋ ಪ್ರದರ್ಶನಕ್ಕೆ ಸುಮಾರು ಐದು ತಿಂಗಳ ಪೂರ್ವ ಸಿದ್ದತೆ ಅವಶ್ಯವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಧ್ಯಮಗಳ ಮೂಲಕ ಪ್ರದರ್ಶನ ನಡೆಸಿದರೂ ಅದು ಸಾರ್ವಜನಿಕರಿಲ್ಲದೆ ಅಪೂರ್ಣಗೊಂಡಂತಾಗುತ್ತದೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಆಟೋ ಪ್ರದರ್ಶನದ ಉದ್ದೇಶವೇ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಭವಿಷ್ಯದ ವಾಹನಗಳನ್ನು, ಕಾನ್ಸೆಪ್ಟ್‌ಗಳನ್ನು ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಉದ್ದೇಶ ಹೊಂದಿರುತ್ತವೆ.

ಕೋವಿಡ್ ಎಫೆಕ್ಟ್: 2022ರ ದೆಹಲಿ ಆಟೋ ಎಕ್ಸ್‌ಪೋ ಮುಂದೂಡಿಕೆ

ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ದೆಹಲಿ ಆಟೋ ಎಕ್ಸ್‌‌ಪೋ ಆಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದ್ದು, ದೆಹಲಿ ಆಟೋ ಎಕ್ಸ್‌ಪೋ ಮಾತ್ರವಲ್ಲದೇ ಜಗತ್ತಿನಾದ್ಯಂತ ಹಲವಾರು ಆಟೋ ಪ್ರದರ್ಶನಗಳು ಸ್ಥಗಿತಗೊಂಡಿವೆ.

Most Read Articles

Kannada
English summary
Delhi Auto Expo 2022 Postponed. Read in Kannada.
Story first published: Tuesday, August 3, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X