ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಜನವರಿ 1ರಿಂದ 10 ವರ್ಷ ಹಳೆಯ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದುಪಡಿಸುವುದಾಗಿ ದೆಹಲಿ ಸರ್ಕಾರವು ತಿಳಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರ್ದೇಶನದಂತೆ ದೆಹಲಿ ಸರ್ಕಾರವು ಈ ಕ್ರಮ ಕೈಗೊಳ್ಳುತ್ತಿದೆ. ನೋಂದಣಿ ರದ್ದುಪಡಿಸಿದ ಡೀಸೆಲ್ ವಾಹನಗಳಿಗೆ ಯಾವುದೇ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (ಎನ್‌ಒಸಿ) ನೀಡಲಾಗುವುದಿಲ್ಲ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಇದರಿಂದ ಅವುಗಳನ್ನು ಬೇರೆಡೆ ಮರು ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ದೆಹಲಿ ಸಾರಿಗೆ ಇಲಾಖೆಯು 15 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಯಾವುದೇ ಎನ್‌ಒಸಿ ನೀಡುವುದಿಲ್ಲವೆಂದು ಹೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಈಗಾಗಲೇ ದೆಹಲಿ - ಎನ್‌ಸಿಆರ್‌ನಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿ ಹಾಗೂ ಸಂಚಾರ ಓಡಾಟದ ನಿಷೇಧಕ್ಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿತ್ತು.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಈ ಹಿನ್ನೆಲೆಯಲ್ಲಿ ದೆಹಲಿ ಎನ್‌ಸಿ‌ಆರ್ ಪ್ರದೇಶದಲ್ಲಿ ಈ ವಾಹನಗಳನ್ನು ಚಾಲನೆ ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2016ರ ಜುಲೈನಲ್ಲಿ ನೀಡಿದ್ದ ನಿರ್ದೇಶನವನ್ನು ರಾಷ್ಟ್ರ ರಾಜಧಾನಿಯಲ್ಲಿ ವಾಹನ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಜಾರಿಗೊಳಿಸಲಾಗುತ್ತಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಎನ್‌ಜಿಟಿ ಆದೇಶದ ಹಿನ್ನೆಲೆಯಲ್ಲಿ ಇಲಾಖೆಯು ಮುಂದಿನ ವರ್ಷ ಜನವರಿ 1ರಿಂದ ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಿದೆ. ಈ ನಿಯಮವು ಜನವರಿ 1ರಂದು 10 ವರ್ಷಗಳನ್ನು ಪೂರೈಸಿದ ಅಥವಾ ಪೂರ್ಣಗೊಳಿಸುವ ವಾಹನಗಳಿಗೆ ಅನ್ವಯಿಸಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ಹಾಗೂ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ ದೇಶದ ಇತರ ಯಾವುದೇ ಸ್ಥಳಗಳಿಗೆ ಎನ್‌ಒಸಿ ನೀಡಬಹುದು ಎಂದು ಇಲಾಖೆ ಹೇಳಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಆದರೆ ಇತರ ರಾಜ್ಯಗಳ ನಿರ್ಬಂಧಿತ ಪ್ರದೇಶಗಳಲ್ಲಿ ಮರು ನೋಂದಣಿ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ. ಅಂತಹ ಡೀಸೆಲ್ ವಾಹನಗಳ ಮಾಲೀಕರು ತಮ್ಮ 10 ವರ್ಷದ ಡೀಸೆಲ್ ಅಥವಾ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ಬಳಸುವುದನ್ನು ಮುಂದುವರಿಸಲು ಬಯಸಿದರೆ ಅವುಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ದೆಹಲಿ ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಕೆಲವು ವಾರಗಳ ಹಿಂದಷ್ಟೇ ದೆಹಲಿ ಸರ್ಕಾರವು ಇ-ವಾಹನ ಕಿಟ್‌ಗಳೊಂದಿಗೆ ಹಳೆಯ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳನ್ನು ಮರುಹೊಂದಿಸಲು ಅವಕಾಶ ನೀಡುವುದಾಗಿ ತಿಳಿಸಿತ್ತು. ಹಳೆ ವಾಹನಗಳ ಮಾಲೀಕರು ತಮ್ಮ ಹಳೆ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಲ್ಲಿ ಅಳವಡಿಸಲು ಎಲೆಕ್ಟ್ರಿಕ್ ಕಿಟ್‌ಗಳನ್ನು ದೆಹಲಿ ಸಾರಿಗೆ ಇಲಾಖೆಯಿಂದ ಅನುಮೋದಿಸಲಾದ ಏಜೆನ್ಸಿಗಳ ಮೂಲಕ ಪಡೆಯಬಹುದು.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಬಯಸದೇ ಇರುವ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ದೆಹಲಿ ಸಾರಿಗೆ ಇಲಾಖೆ ಹಾಗೂ ದೆಹಲಿ ಸಂಚಾರಿ ಪೊಲೀಸರ ತಂಡಗಳು ಈಗಾಗಲೇ ಹಳೆಯ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಅವುಗಳನ್ನು ಅಧಿಕೃತ ಮಾರಾಟಗಾರರ ಮೂಲಕ ಸ್ಕ್ರ್ಯಾಪ್‌ಗೆ ಕಳುಹಿಸುತ್ತಿವೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

2015ರ ಏಪ್ರಿಲ್ 7ರಂದು, ದೆಹಲಿ - ಎನ್‌ಸಿಆರ್‌ನ ಪ್ರದೇಶದಲ್ಲಿ 10 ವರ್ಷ ಹಳೆಯದಾದ ಎಲ್ಲಾ ಡೀಸೆಲ್ ವಾಹನಗಳನ್ನು ನಿಷೇಧಿಸುವಂತೆ ಎನ್‌ಜಿಟಿ ನಿರ್ದೇಶನ ನೀಡಿತ್ತು. ನಂತರ ಎನ್‌ಜಿ‌ಟಿಯು 2016ರ ಜುಲೈ 18 ಹಾಗೂ 20ರಂದು ರಾಷ್ಟ್ರ ರಾಜಧಾನಿಯಲ್ಲಿ 10 ರಿಂದ 15 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು ಹಂತ ಹಂತವಾಗಿ ರದ್ದುಪಡಿಸಿತು.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಕಳೆದ ಅಕ್ಟೋಬರ್‌ನಿಂದ ದೆಹಲಿ ಸಾರಿಗೆ ಇಲಾಖೆಯು ಮಾನ್ಯವಾದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಹೊಂದಿರದ ವಾಹನಗಳ ವಿರುದ್ಧ ಬೃಹತ್ ಅಭಿಯಾನವನ್ನು ಆರಂಭಿಸಿದೆ. ಇಂಧನ ಕೇಂದ್ರಗಳಲ್ಲಿ ನಿಯೋಜಿಸಲಾದ ತಂಡಗಳಿಗೆ ವಾಹನಗಳ ಪಿಯುಸಿ ದಾಖಲೆಗಳನ್ನು ತೋರಿಸುವಂತೆ ರಾಷ್ಟ್ರ ರಾಜಧಾನಿಯ ವಾಹನ ಸವಾರರಿಗೆ ಸೂಚಿಸಲಾಗಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಮಾನ್ಯವಾದ ಪಿಯುಸಿ ಇಲ್ಲದೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ರೂ. 10,000 ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ವಾಹನಗಳಿಗೆ ಪಿಯುಸಿ ಪ್ರಮಾಣ ಪತ್ರ ಮಾಡಿಸದಿದ್ದರೆ 3 ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಸಹ ರದ್ದುಗೊಳಿಸಲಾಗುತ್ತದೆ. ದೆಹಲಿ ಸಂಚಾರಿ ಪೊಲೀಸರ ಹಲವು ತಂಡಗಳು ಈ ವರ್ಷ ಜನವರಿ 1 ರಿಂದ ಅಕ್ಟೋಬರ್ 31 ರವರೆಗೆ ಪಿಯುಸಿ ಪ್ರಮಾಣಪತ್ರ ಉಲ್ಲಂಘನೆಗಾಗಿ 59,644 ಚಲನ್‌ಗಳನ್ನು ನೀಡಿವೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಇನ್ನು 10 ವರ್ಷ ಹಾಗೂ 15 ವರ್ಷ ಹಳೆಯ ವಾಹನಗಳನ್ನು ಚಾಲನೆ ಮಾಡುವವರ ವಿರುದ್ಧ 1,201 ಚಲನ್‌ಗಳನ್ನು ನೀಡಿವೆ. ಇದೇ ಅವಧಿಯಲ್ಲಿ 10 ವರ್ಷ ಅಥವಾ 15 ವರ್ಷಕ್ಕಿಂತ ಹಳೆಯದಾದ 855 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದಷ್ಟೇ ವಾಹನದಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಸಿಗ್ನಲ್ ನಲ್ಲಿ ನಿಂತಿರುವಾಗ ವಾಹನದ ಎಂಜಿನ್ ಆಫ್ ಮಾಡುವಂತೆ ದೆಹಲಿ ಸರ್ಕಾರವು ಮನವಿ ಮಾಡಿಕೊಂಡಿತ್ತು.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಈ ಮೂಲಕ ವಾಹನ ಸವಾರರು ತಮ್ಮ ಭಾಗಗಳ ಮಾಲಿನ್ಯವನ್ನು ಕಡಿಮೆ ಮಾಡುವತ್ತ ಗಮನ ಹರಿಸುವಂತೆ ಕೇಳಿಕೊಂಡಿತ್ತು. ಇಷ್ಟೆಲ್ಲ ಕ್ರಮಗಳ ನಂತರವೂ ಮಾಲಿನ್ಯ ಹೆಚ್ಚುತ್ತಲೇ ಇದ್ದರೆ ದೆಹಲಿಯಲ್ಲಿ ಮತ್ತೊಮ್ಮೆ ಬೆಸ - ಸಮ ನಿಯಮ ಜಾರಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ಇದರ ಜೊತೆಗೆ ದೆಹಲಿ ಸರ್ಕಾರವು ವಾಯು ಮಾಲಿನ್ಯದ ವಿರುದ್ಧ ಸಮರ ಸಾರಿದ್ದು, ದೆಹಲಿ ನಗರದೊಳಗೆ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಳಸಬೇಕು ಎಂದು ಸೂಚಿಸಿದೆ. ನಗರದ 250 ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ವಾಣಿಜ್ಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಜನವರಿ 1ರಿಂದ ರದ್ದಾಗಲಿದೆ 10 ವರ್ಷ ಹಳೆಯ ಡೀಸೆಲ್ ವಾಹನಗಳ ನೋಂದಣಿ

ವಾಯು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಮೇಲ್ಕಂಡ ನಿಷೇಧವು ಕೆಲವು ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ವಾಯು ಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi government to ban 10 years old diesel vehicles from january 2022 details
Story first published: Friday, December 17, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X