ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿ ಸಂಚಾರ ವಿಭಾಗದ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಇ-ರಿಕ್ಷಾ ಚಾಲಕರಿಗೆ ಈ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 19,591 ಚಲನ್‌ಗಳನ್ನು ಜಾರಿಗೊಳಿಸಿದ್ದಾರೆ. ನೋ ಪಾರ್ಕಿಂಗ್, ನೋ ಎಂಟ್ರಿ, ಲೈಸೆನ್ಸ್, ಓವರ್‌ಲೋಡ್, ನೋಂದಣಿ ಹಾಗೂ ಇನ್ನಿತರ ಉಲ್ಲಂಘನೆಗಳಿಗಾಗಿ ಇಷ್ಟೊಂದು ಭಾರೀ ಪ್ರಮಾಣದ ಚಲನ್‌ಗಳನ್ನು ಜಾರಿಗೊಳಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ದೆಹಲಿ ಪೊಲೀಸರ ಪ್ರಕಾರ, ಈ ಅವಧಿಯಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳಿಗೆ ನೀಡಲಾದ ಒಟ್ಟು ಚಲನ್‌ಗಳಲ್ಲಿ, ಪಶ್ಚಿಮ ವ್ಯಾಪ್ತಿಯಲ್ಲಿ ಗರಿಷ್ಠ ಸಂಖ್ಯೆಯ ಚಲನ್‌ಗಳನ್ನು ನೀಡಲಾಗಿದೆ. ಈ ವ್ಯಾಪ್ತಿಯಲ್ಲಿ ಇ-ರಿಕ್ಷಾಗಳಿಗೆ 14,580 ಚಲನ್‌ಗಳನ್ನು ನೀಡಲಾಗಿದೆ. ಇದರ ನಂತರ ನವದೆಹಲಿ ವ್ಯಾಪ್ತಿಯಲ್ಲಿ 2,802 ಚಲನ್‌ ಹಾಗೂ ರಾಜ್ಯದ ದಕ್ಷಿಣ ವ್ಯಾಪ್ತಿಯಲ್ಲಿ 2,209 ಚಲನ್‌ಗಳನ್ನು ನೀಡಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಈ ಅವಧಿಯಲ್ಲಿ ನೋ ಪಾರ್ಕಿಂಗ್‌ಗಾಗಿ 11,983 ಚಲನ್‌ಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಅದೇ ಸಮಯದಲ್ಲಿ ನೋ ಎಂಟ್ರಿ ಝೋನ್'ಗಳಲ್ಲಿ ವಾಹನ ಚಲಾಯಿಸಿದ ಕಾರಣಕ್ಕೆ 5,546 ಚಲನ್‌ಗಳನ್ನು ನೀಡಲಾಗಿದ್ದರೆ, ನೋಂದಣಿ ಪ್ರಮಾಣಪತ್ರ (ಆರ್‌ಸಿ) ಉಲ್ಲಂಘನೆ, ರಾಂಗ್ ಸೈಡ್‌ನಲ್ಲಿ ಚಾಲನೆ, ಪ್ರಯಾಣಿಕರ ಮಿತಿ ಅಥವಾ ಅಪಾಯಕಾರಿ ಚಾಲನೆ ಹಾಗೂ ಇನ್ನಿತರ ಪರವಾನಗಿ ಸಂಬಂಧಿತ ಉಲ್ಲಂಘನೆಗಳಿಗಾಗಿ 2,062 ಚಲನ್‌ಗಳನ್ನು ನೀಡಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಇದೇ ವೇಳೆ ದೆಹಲಿ ಸಂಚಾರ ಪೊಲೀಸರು ಈ ಎಲ್ಲಾ ಮೂರು ವ್ಯಾಪ್ತಿಗಳಲ್ಲಿ 31,723 ಇ-ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪಶ್ಚಿಮ ವ್ಯಾಪ್ತಿಯಲ್ಲಿ 554, ದಕ್ಷಿಣ ವ್ಯಾಪ್ತಿಯಲ್ಲಿ 124, ನವದೆಹಲಿ ವ್ಯಾಪ್ತಿಯಲ್ಲಿ 45 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವರ್ಚುವಲ್ ಆನ್‌ಲೈನ್ ಚಲನ್ ಅಪ್ಲಿಕೇಶನ್ (VoCA) ಹಾಗೂ ಇ-ಚಲನ್ ಯಂತ್ರ ಎರಡರ ಮೂಲಕ ದೆಹಲಿ ಸಂಚಾರಿ ಪೊಲೀಸರು ತೆಗೆದುಕೊಂಡ ಕ್ರಮಗಳಲ್ಲಿ ಇವುಗಳು ಸೇರಿವೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ದೆಹಲಿಯ ಸಂಚಾರ ವಿಭಾಗದ ಉಪ ಆಯುಕ್ತ (ಪಶ್ಚಿಮ) ಘನಶ್ಯಾಮ್ ಬನ್ಸಾಲ್ ಪ್ರಕಾರ, ಕಳೆದ ಆರು ತಿಂಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಇ-ರಿಕ್ಷಾ ಚಾಲಕರ ವಿರುದ್ಧ ಕ್ರಮ ಕೈಗೊಂಡ ನಂತರ ಅವರಲ್ಲಿ ಶಿಸ್ತಿನ ಮನೋಭಾವ ಎದ್ದು ಕಾಣುತ್ತಿದೆ. ಈ ಹಿಂದೆ ಇ-ರಿಕ್ಷಾದಿಂದ ಟ್ರಾಫಿಕ್ ಜಾಮ್‌ಗೆ ಒಳಗಾಗುತ್ತಿದ್ದ ರಸ್ತೆಗಳು ಈಗ ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಸುಧಾರಣೆಗಳ ಬಗ್ಗೆ ವಿವರಿಸಿದ ಅವರು ಈ ವಿಶೇಷ ಕಾರ್ಯಾಚರಣೆಯು ದಟ್ಟಣೆ, ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳನ್ನು ಕಡಿಮೆ ಮಾಡಿದೆ ಎಂದು ಹೇಳಿದರು. ಈಗ ಇ-ರಿಕ್ಷಾಗಳು ಪಾದಚಾರಿಗಳ ನಡುವೆ ಬೇಕಾಬಿಟ್ಟಿಯಾಗಿ ಸಂಚರಿಸುವ ಆತಂಕವೂ ಕೊನೆಗೊಂಡಿದೆ ಎಂದು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಇತ್ತೀಚೆಗಷ್ಟೇ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿದೆ. ದೆಹಲಿ ಸರ್ಕಾರದ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ನೀತಿ ಜಾರಿಗೆ ಬಂದ ನಂತರ, ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಸುಮಾರು ಒಂದು ವರ್ಷದಿಂದ ಎಲೆಕ್ಟ್ರಿಕ್ ಕಾರುಗಳು ಅಗತ್ಯವಾದ ಸಬ್ಸಿಡಿಗಳನ್ನು ಪಡೆದಿವೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ದೆಹಲಿ ಸರ್ಕಾರದ ಪ್ರಕಾರ, ಎಲೆಕ್ಟ್ರಿಕ್ ಕಾರಿಗೆ ಸುಮಾರು ರೂ. 15 ಲಕ್ಷ ರೂಪಾಯಿಗಳನ್ನು ಪಾವತಿಸುವ ಸಾಮರ್ಥ್ಯ ಹೊಂದಿರುವ ಜನರು ಸಬ್ಸಿಡಿ ಇಲ್ಲದಿದ್ದರೆ ಇನ್ನು ರೂ. 1 - ರೂ. 2 ಲಕ್ಷ ಪಾವತಿಸಲು ಸಮರ್ಥರಾಗಿರುವುದರಿಂದ ಇನ್ನು ಮುಂದೆ ಎಲೆಕ್ಟ್ರಿಕ್ ಕಾರುಗಳಿಗೆ ಸಬ್ಸಿಡಿ ನೀಡುವ ಅಗತ್ಯವಿಲ್ಲ. ದೆಹಲಿ ಸರ್ಕಾರವು ಆಟೋ ಚಾಲಕರು, ದ್ವಿಚಕ್ರ ವಾಹನ ಮಾಲೀಕರು, ವಿತರಣಾ ಪಾಲುದಾರರು ಸೇರಿದಂತೆ ಹೆಚ್ಚು ಅಗತ್ಯವಿರುವವರಿಗೆ ಸಬ್ಸಿಡಿ ನೀಡುವ ಗುರಿಯನ್ನು ಹೊಂದಿದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಈ ವರ್ಷ ಜುಲೈ - ಸೆಪ್ಟೆಂಬರ್‌ ಅವಧಿಯಲ್ಲಿ ದೆಹಲಿಯಲ್ಲಿ ನೋಂದಾಯಿಸಲಾದ 1.5 ಲಕ್ಷ ವಾಹನಗಳಲ್ಲಿ 7,869 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ, ಇದು ಒಟ್ಟು ನೋಂದಾಯಿತ ವಾಹನಗಳ 7% ನಷ್ಟಾಗಿದೆ. ಆಗಸ್ಟ್ - ಅಕ್ಟೋಬರ್ ನಡುವೆ ದೆಹಲಿಯಲ್ಲಿ 22,805 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಕಳೆದ ನಾಲ್ಕು ತಿಂಗಳಲ್ಲಿ ದೆಹಲಿಯಲ್ಲಿ ಸುಮಾರು 31,000 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ದೆಹಲಿ ಸಂಚಾರ ಪೊಲೀಸರು ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವ 100 ಕೆಟ್ಟ ಚಾಲಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ದೆಹಲಿಯ ವಿಶೇಷ ಸಂಚಾರ ಆಯುಕ್ತ ಮುಕ್ತೇಶ್ ಚಂದ್ರರವರ ಪ್ರಕಾರ ಸಾರ್ವಜನಿಕ ರಸ್ತೆಯಲ್ಲಿ ತಪ್ಪು ಚಾಲನೆ ಮಾಡುವ 100 ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಪೊಲೀಸರು ಈ ರೀತಿಯ ಪಟ್ಟಿ ಸಿದ್ಧಪಡಿಸುತ್ತಿರುವುದು ಇದೇ ಮೊದಲು.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡುವುದು, ಅಪಾಯಕಾರಿ ಚಾಲನೆ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು. ವಾಹನ ಸವಾರರಿಗೆ ಅವರ ಚಾಲನಾ ಕೌಶಲ್ಯವು ತುಂಬಾ ಕಳಪೆಯಾಗಿದ್ದು, ಸುಧಾರಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸುವುದು ಈ ಪಟ್ಟಿಯನ್ನು ತಯಾರಿಸುವುದರ ಹಿಂದಿನ ಉದ್ದೇಶವಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಈ ಬಗ್ಗೆ ಮಾತನಾಡಿರುವ ಮುಕ್ತೇಶ್ ಚಂದ್ರರವರು, ಕೆಟ್ಟ ಚಾಲನೆಯನ್ನು ವಾಹನ ಸವಾರರಿಗೆ ತೋರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಾಹನ ಸವಾರರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ತಮ್ಮನ್ನು, ತಮ್ಮ ಕುಟುಂಬದವರನ್ನು ಅಪಾಯಕ್ಕೆ ಸಂಕಷ್ಟಕ್ಕೆ ದೂಡುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಅಪಾಯಕಾರಿಯಾಗುತ್ತಾರೆ ಎಂದು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ದೆಹಲಿ ಪೊಲೀಸರು ಈ ಪಟ್ಟಿಯನ್ನು ತಯಾರಿಸಿದ ನಂತರ, ಪಟ್ಟಿಯಲ್ಲಿರುವ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ತರಬೇತಿ ನೀಡುತ್ತಾರೆ ಎಂದು ಮುಕ್ತೇಶ್ ಚಂದ್ರ ಹೇಳಿದರು. ಇದಕ್ಕಾಗಿ ಪೊಲೀಸರು ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸುತ್ತಾರೆ. ಪದೇ ಪದೇ ಕರೆ ಮಾಡಿದರೂ ತರಗತಿಗಳಿಗೆ ಹಾಜರಾಗದಿದ್ದರೆ, ಅಂತಹವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಮೋಟಾರು ವಾಹನ ಕಾಯ್ದೆ ಸೆಕ್ಷನ್ 19 ರ ಅಡಿಯಲ್ಲಿ ಅಂತಹ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಅವರು ಭವಿಷ್ಯದಲ್ಲಿ ಮತ್ತೆ ಎಂದಿಗೂ ಪರವಾನಗಿ ಪಡೆಯಲು ಸಾಧ್ಯವಿಲ್ಲವೆಂದು ಮುಕ್ತೇಶ್ ಚಂದ್ರ ತಿಳಿಸಿದರು. ದೆಹಲಿಯಲ್ಲಿ 100 ಕೆಟ್ಟ ಚಾಲಕರನ್ನು ಗುರುತಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈಗ ಡೇಟಾಬೇಸ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಪಟ್ಟಿ ಸಿದ್ಧವಾಗಲಿದೆ. ಪಟ್ಟಿ ಸಿದ್ಧವಾದ ನಂತರ ನಿಯಮಗಳನ್ನು ಉಲ್ಲಂಘಿಸಿರುವವರ ಮನೆ ಬಾಗಿಲಿಗೇ ನೋಟಿಸ್ ಕಳುಹಿಸಲಾಗುತ್ತದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಈ ನೋಟಿನ್ ನಲ್ಲಿ ರಸ್ತೆ ಸುರಕ್ಷತೆ ಹಾಗೂ ಸಮಾಲೋಚನೆ ತರಗತಿಗಳಿಗೆ ಹಾಜರಾಗುವಂತೆ ಹೇಳಲಾಗುತ್ತದೆ. ನಂತರ ಈ ಪಟ್ಟಿಯಲ್ಲಿರುವ ವಾಹನ ಸವಾರರ ಚಾಲನಾ ನಡವಳಿಕೆಯನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಮುಕ್ತೇಶ್ ಚಂದ್ರ ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನ ವಾಯು ಮಾಲಿನ್ಯವನ್ನು ಎದುರಿಸಲು, ದೆಹಲಿ ಸರ್ಕಾರವು, ವಾಹನಗಳು ಮಾಲಿನ್ಯ ಪ್ರಮಾಣ ಪತ್ರ (ಪಿಯುಸಿ) ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಇದರ ಅನ್ವಯ ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿ ಬೀಳುವವರಿಗೆ ರೂ. 10,000 ದಂಡ ವಿಧಿಸಲಾಗುತ್ತದೆ.

ಸಂಚಾರ ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ಇ-ರಿಕ್ಷಾ ಚಾಲಕರು

ಇದರ ಜೊತೆಗೆ ಮಾತ್ರವಲ್ಲ ವಾಹನವು ಮಾನ್ಯವಾದ ಪಿಯುಸಿ ಪ್ರಮಾಣ ಪಡೆಯದಿದ್ದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಅಥವಾ 3 ತಿಂಗಳ ಕಾಲ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ದೆಹಲಿ ಸಾರಿಗೆ ಇಲಾಖೆಯು (ಡಿಟಿಸಿ) ಭಾನುವಾರ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಚಾಲಕರು ತಮ್ಮ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ಬೇಗನೆ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Article Published On: Monday, November 8, 2021, 17:23 [IST]
English summary
Delhi traffic cops issued around 20000 challans on e rickshaws details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+