ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು ತೀವ್ರವಾಗಿ ಕುಸಿದಿದೆ. ಡೀಸೆಲ್ ಕಾರುಗಳ ಮಾರಾಟ ಕಡಿಮೆಯಾಗಲು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ ಜನರು ಡೀಸೆಲ್ ಕಾರುಗಳನ್ನು ಡೀಸೆಲ್ ಬೆಲೆ ಕಡಿಮೆ ಎಂಬ ಕಾರಣಕ್ಕೆ ಖರೀದಿಸುತ್ತಿದ್ದರು.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಆದರೆ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಬಹುತೇಕ ಸರಿ ಸಮನಾಗಿದೆ. ಆದರೆ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳು ಐಷಾರಾಮಿ ಕಾರು ಸೆಗ್ ಮೆಂಟಿನಲ್ಲಿ ಇನ್ನೂ ಪ್ರಾಬಲ್ಯವನ್ನು ಹೊಂದಿವೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳ ಪಾಲು ಕುಸಿತ

ಅಸೋಸಿಯೇಷನ್ ​​ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ಪ್ರಕಾರ, 2012 - 2013ರ ಅವಧಿಯಲ್ಲಿ ಪ್ಯಾಸೆಂಜರ್ ಕಾರ್ ಸೆಗ್ ಮೆಂಟಿನಲ್ಲಿ ಡೀಸೆಲ್ ಕಾರುಗಳ ಪಾಲು 58% ನಷ್ಟು ಇತ್ತು. ಆದರೆ ಈಗ ಈ ಪ್ರಮಾಣವು 17% ಗೆ ಕುಸಿದಿದೆ. ಆ ಸಮಯದಲ್ಲಿ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ರೂ. 25 ರಿಂದ 30 ರಷ್ಟು ಕಡಿಮೆ ಇತ್ತು.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಇದರಿಂದ ಜನರು ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳನ್ನು ಹೆಚ್ಚು ಖರೀದಿಸುತ್ತಿದ್ದರು. ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿದ್ದಂತೆ ಗ್ರಾಹಕರು ಡೀಸೆಲ್ ಕಾರುಗಳಿಂದ ದೂರ ಸರಿದರು. ಸಿಯಾಮ್ ಮಾಹಿತಿಯ ಪ್ರಕಾರ, ಡೀಸೆಲ್ ಬೆಲೆ ಈಗ ಪೆಟ್ರೋಲ್ ಬೆಲೆಗಿಂತ ಕೇವಲ ರೂ. 7 ರಿಂದ ರೂ. 9 ಗಳಷ್ಟು ಮಾತ್ರ ಕಡಿಮೆಯಾಗಿದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಈ ಹಿನ್ನೆಲೆಯಲ್ಲಿ ಪ್ರಯಾಣಿಕ ಕಾರುಗಳ ಸೆಗ್ ಮೆಂಟಿನಲ್ಲಿ ಡೀಸೆಲ್ ಕಾರುಗಳ ಪಾಲು 17% ಗಳಿಗೆ ಇಳಿದಿದೆ. ಸಾಮಾನ್ಯವಾಗಿ ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗಿಂತ ಹೆಚ್ಚು. ಆದರೂ ಗ್ರಾಹಕರು ಇಂಧನ ವೆಚ್ಚವನ್ನು ಉಳಿಸುವ ಉದ್ದೇಶದಿಂದ ಡೀಸೆಲ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಪೆಟ್ರೋಲ್, ಡೀಸೆಲ್ ಬೆಲೆಗಳ ಅಂತರವು ಕಡಿಮೆಯಾಗುತ್ತಿರುವುದರಿಂದ, ಡೀಸೆಲ್ ಕಾರುಗಳ ಮೇಲಿನ ಆಕರ್ಷಣೆ ಕ್ಷೀಣಿಸುತ್ತಿದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಪರ್ಯಾಯ ಆಯ್ಕೆಗಳು

ದೆಹಲಿಯಂತಹ ರಾಜ್ಯಗಳಲ್ಲಿ ಡೀಸೆಲ್ ವಾಹನಗಳ ಮೇಲೆ ಕಟ್ಟುನಿಟ್ಟಾದ ನಿಷೇಧ ವಿಧಿಸಲಾಗಿರುವುದು ಸಹ ಡೀಸೆಲ್ ಕಾರುಗಳ ಮಾರಾಟ ಕಡಿಮೆಯಾಗಲು ಕಾರಣವಾಗಿದೆ. ದೇಶಾದ್ಯಂತ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು, ಶುದ್ಧ ಇಂಧನದಲ್ಲಿ ಚಾಲನೆಯಾಗುವ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶದ ಹಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ನೀತಿಗಳನ್ನು ಜಾರಿಗೆ ತರಲಾಗಿದೆ. ಇದರಿಂದ ವಾಹನ ಸವಾರರು ಸರ್ಕಾರದಿಂದ ಸಬ್ಸಿಡಿ ಪಡೆಯುವ ಮೂಲಕ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ ಕಡಿಮೆ ಬೆಲೆಗೆ ಮಾರಾಟವಾಗುವ ಸಿಎನ್‌ಜಿ ಕಾರುಗಳು ಸಹ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

Maruti Suzuki ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ (2020 - 21) 1.57 ಲಕ್ಷ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದೆ. 2019 - 20ರ ಅವಧಿಯಲ್ಲಿ ಮಾರಾಟವಾದ ಸಿಎನ್‌ಜಿ ಕಾರುಗಳಿಗಿಂತ ಈ ಅಂಕಿ ಅಂಶವು 45% ನಷ್ಟು ಹೆಚ್ಚು. ಡೀಸೆಲ್ ಕಾರುಗಳು ಹೆಚ್ಚು ಮಾಲಿನ್ಯವನ್ನು ಉಂಟುಮಾಡುತ್ತವೆ ಎಂಬ ಕಾರಣಕ್ಕೆ ಅವುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಸರ್ಕಾರದ ತೆರಿಗೆ ನೀತಿಯ ಅನ್ವಯ 4 ಮೀಟರ್ ಗಿಂತ ಕಡಿಮೆ ಇರುವ ಪೆಟ್ರೋಲ್ ಕಾರುಗಳ ಮೇಲೆ 29% ನಷ್ಟು ಜಿ‌ಎಸ್‌ಟಿ ವಿಧಿಸಲಾಗುತ್ತದೆ. ಇನ್ನು 4 ಮೀಟರ್ ಗಿಂತ ಕಡಿಮೆ ಇರುವ ಡೀಸೆಲ್ ಕಾರುಗಳ ಮೇಲೆ 31% ನಷ್ಟು ಜಿ‌ಎಸ್‌ಟಿ ವಿಧಿಸಲಾಗುತ್ತದೆ. 4 ಮೀಟರ್‌ಗಿಂತ ಹೆಚ್ಚು ಇರುವ ಪೆಟ್ರೋಲ್ ಕಾರುಗಳ ಮೇಲೆ 43% ನಷ್ಟು ಜಿಎಸ್‌ಟಿ ವಿಧಿಸಲಾದರೆ ಡೀಸೆಲ್ ಕಾರುಗಳ ಮೇಲೆ 48% ನಷ್ಟು ತೆರಿಗೆ ವಿಧಿಸಲಾಗುತ್ತದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಸರ್ಕಾರದ ಹೊಸ ನೀತಿಯ ಅನ್ವಯ, ಇನ್ನು ಮುಂದೆ ದೇಶದಲ್ಲಿ ಪೆಟ್ರೋಲ್ ಕಾರುಗಳ ನೋಂದಣಿ 15 ವರ್ಷಗಳವರೆಗೆ ಇರಲಿದೆ. ಡೀಸೆಲ್ ಕಾರುಗಳ ನೋಂದಣಿ ಕೇವಲ 10 ವರ್ಷಗಳವರೆಗೆ ಇರಲಿದೆ. ಅಂದರೆ, ಗ್ರಾಹಕರು ತಮ್ಮ ಡೀಸೆಲ್ ಕಾರನ್ನು 10 ವರ್ಷಗಳ ನಂತರ ಬಳಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಹೊಸ ವಾಹನ ಸ್ಕ್ರ್ಯಾಪ್ಪಿಂಗ್ ನೀತಿಯ ಪ್ರಕಾರ, ಈ ಕಾರುಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಸಾಮಾನ್ಯವಾಗಿ, ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ನಿರ್ವಹಣಾ ವೆಚ್ಚ ಹೆಚ್ಕು. ಈ ನಿರ್ವಹಣಾ ವೆಚ್ಚವು ಪೆಟ್ರೋಲ್ ಕಾರಿನ ನಿರ್ವಹಣಾ ವೆಚ್ಚಕ್ಕಿಂತ 10% ಗಿಂತ 15% ನಷ್ಟು ಹೆಚ್ಚು. ಹಲವು ಕಂಪನಿಗಳು ಈಗಾಗಲೇ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆ. ಕಳೆದ ವರ್ಷದಿಂದ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ.

ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ತೀವ್ರವಾಗಿ ಕುಸಿದ ಡೀಸೆಲ್ ಕಾರುಗಳ ಮಾರಾಟ

ಮಾರುತಿ ಸುಜುಕಿ ಕಂಪನಿಯು ಮಾತ್ರವಲ್ಲದೇ ಹುಂಡೈ, ಸ್ಕೋಡಾ, ಫೋಕ್ಸ್‌ವ್ಯಾಗನ್ ಕಂಪನಿಗಳು ಸಹ ಭಾರತದಲ್ಲಿ ಬಜೆಟ್ ಬೆಲೆಯ ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆ. ಆದರೆ ಈ ಕಂಪನಿಗಳು ಪ್ರೀಮಿಯಂ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಮುಂದುವರೆಸಿವೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವು ಕಂಪನಿಗಳು ಇದೇ ಹಾದಿಯನ್ನು ಹಿಡಿಯುವ ಸಾಧ್ಯತೆಗಳಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Diesel car sales falls drastically in india details
Story first published: Monday, October 18, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X