ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಯಾವುದೇ ವಾಹನ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಪಡೆಯ ಬಯಸುವವರಿಗೆ ಸರ್ಕಾರವು ಶಾಕ್ ನೀಡಿದೆ.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಮೊದಲಿಗಿಂತ ಹೆಚ್ಚು ಕಷ್ಟಕರವಾಗಲಿದೆ ಎಂದು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯಲ್ಲಿ 69% ಅಂಕಗಳನ್ನು ಪಡೆಯುವುದು ಕಡ್ಡಾಯವೆಂದು ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ವಾಹನವನ್ನು ಸರಿಯಾಗಿ ತಿರುಗಿಸುವುದು ಸೇರಿದಂತೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಎಲ್ಲಾ ಆರ್‌ಟಿ‌ಒಗಳಿಗೆ ಅರ್ಹತಾ ಶೇಕಡಾವಾರು ಬಗ್ಗೆ ಮಾಹಿತಿ ನೀಡಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಇನ್ನು ಮುಂದೆ ಈ ಹೊಸ ನಿಯಮಗಳನ್ನು ಅನುಸರಿಸಲಾಗುತ್ತದೆ. ವಾಹನವು ರಿವರ್ಸ್ ಗೇರ್ ಹೊಂದಿದ್ದರೆ, ಬಲಕ್ಕೆ ಆಗಲಿ ಅಥವಾ ಎಡಕ್ಕೆ ಆಗಲಿ ಇಕ್ಕಟ್ಟಾದ ಜಾಗದಲ್ಲಿ ಸರಿಯಾದ ರೀತಿಯಲ್ಲಿ ನಿಲ್ಲಿಸಬೇಕಾಗುತ್ತದೆ.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಚಾಲನಾ ಕೌಶಲ್ಯವೊಂದೇ ಮಾನದಂಡವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಈ ಬಗ್ಗೆ ಕೇಂದ್ರ ಮೋಟಾರು ವಾಹನ ನಿಯಮ 1989ರ ನಿಬಂಧನೆಗಳ ಅಡಿಯಲ್ಲಿ ಹೇಳಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಎಲ್ಲಾ ಆರ್‌ಟಿಒಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯಲ್ಲಿ 69%ನಷ್ಟು ಅಂಕ ಪಡೆಯುವುದು ಕಡ್ಡಾಯವಾಗಿದೆ. ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ನಡೆಸುವ ಉದ್ದೇಶವು ಅರ್ಹ ಚಾಲಕರನ್ನು ತಯಾರು ಮಾಡುವುದು ಎಂದು ನಿತಿನ್ ಗಡ್ಕರಿ ಹೇಳಿದರು.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಇದಕ್ಕಾಗಿ ದೆಹಲಿಯಲ್ಲಿ 50 ಮೋಟಾರ್ ಡ್ರೈವಿಂಗ್ ತರಬೇತಿ ಶಾಲೆಗಳನ್ನು ಸಹ ಆರಂಭಿಸಲಾಗಿದೆ. ಡ್ರೈವಿಂಗ್ ಟ್ರ್ಯಾಕ್‌ನಲ್ಲಿ ಲೈವ್ ಡೆಮೊ ಜೊತೆಗೆ ಡ್ರೈವಿಂಗ್ ಟೆಸ್ಟ್ ಆರಂಭಿಸುವ ಮುನ್ನ ಎಲ್ಲಾ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳಲ್ಲಿ ಎಲ್ಇಡಿ ಪರದೆಯಲ್ಲಿ ಡೆಮೊ ತೋರಿಸಲಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ಕಾಯ್ದಿರಿಸುವ ಸಮಯದಲ್ಲಿ, ಅರ್ಜಿದಾರರಿಗೆ ಚಾಲನಾ ಕೌಶಲ್ಯ ಪರೀಕ್ಷೆಗೆ ಸಂಬಂಧಿಸಿದ ಡೆಮೊದ ವೀಡಿಯೊ ಲಿಂಕ್ ಅನ್ನು ಸಹ ನೀಡಲಾಗುತ್ತದೆ.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಇದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಡ್ರೈವಿಂಗ್ ಲೈಸೆನ್ಸ್ ಹಾಗೂ ನೋಂದಣಿಗೆ ಸಂಬಂಧಿಸಿದ ಕೆಲಸವನ್ನು ಆಧಾರ್ ದೃಢೀಕರಣದ ಸಹಾಯದಿಂದ ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಡ್ರೈವಿಂಗ್ ಲೈಸೆನ್ಸ್ ನವೀಕರಣದ ಬಗ್ಗೆ ಹೇಳುವುದಾದರೆ, ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿಯುವ ಒಂದು ವರ್ಷದ ಮೊದಲು ಅಥವಾ ಒಂದು ವರ್ಷದ ನಂತರ ಅದನ್ನು ನವೀಕರಿಸಬಹುದು.

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಇದಕ್ಕೆ ಸಂಬಂಧಿಸಿದ ಎಲ್ಲಾ ಫಾರಂ, ಶುಲ್ಕಗಳು ಹಾಗೂ ದಾಖಲೆಗಳನ್ನು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಬಹುದು. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರು ಕಚೇರಿಗೆ ಭೇಟಿ ನೀಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮತ್ತಷ್ಟು ಕಠಿಣವಾಗಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

ಕೇಂದ್ರ ಸಾರಿಗೆ ಇಲಾಖೆಯು ಇತ್ತೀಚಿಗಷ್ಟೇ ತನ್ನ 18 ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದೆಂದು ತಿಳಿಸಿದೆ. ಇದರಿಂದ ಆರ್‌ಟಿಒ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು.

Most Read Articles

Kannada
English summary
Driving license test to be more tougher says union transport minister. Read in Kannada.
Story first published: Friday, March 26, 2021, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X