ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್ ಇಲ್ಲದೇ ಸಿಗುತ್ತೆ ಡ್ರೈವಿಂಗ್ ಲೈಸೆನ್ಸ್

ನಿರ್ದಿಷ್ಟ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಚಾಲನಾ ತರಬೇತಿ ಪಡೆಯುತ್ತಿರುವವರಿಗೆ ಆರ್‌ಟಿಒ ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್ ಇಲ್ಲದೇ ಡ್ರೈವಿಂಗ್ ಲೈಸೆನ್ಸ್ ನೀಡಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹಾಗೂ ಆರ್‌ಟಿಒ ಕಚೇರಿಗಳಲ್ಲಿ ನಡೆಸುವ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸರಿಯಾದ ತರಬೇತಿ ಅಗತ್ಯವಿದೆ. ಚಾಲನಾ ತರಬೇತಿ ನೀಡಲು ಹಲವಾರು ಡ್ರೈವಿಂಗ್ ಸ್ಕೂಲ್'ಗಳಿವೆ. ಆದರೆ ಚಾಲನಾ ಪರವಾನಗಿ ನೀಡಲು ಹಲವಾರು ಸಮಸ್ಯೆಗಳಿದ್ದು, ಭ್ರಷ್ಟಾಚಾರವು ತಾಂಡವವಾಡುತ್ತಿದೆ. ಇವುಗಳನ್ನು ತೊಡೆದುಹಾಕಲು ಕೇಂದ್ರ ಸರ್ಕಾರವು ಮುಂದಾಗಿದೆ.

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಇದರ ಜೊತೆಗೆ ಉತ್ತಮ ಚಾಲಕರನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಆರ್‌ಟಿಒ ಅಧಿಕಾರಿ ವಾಹನವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುರುತಿಸಿದ ನಂತರವೇ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಈ ನಿಯಮದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಮುಂದಾಗಿದೆ.

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ವಾಹನ ಸವಾರರ ತರಬೇತಿಯನ್ನು ಸುಧಾರಿಸಲು ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಡ್ರೈವಿಂಗ್ ಸ್ಕೂಲ್'ಗಳ ಗುಣಮಟ್ಟವನ್ನು ಸುಧಾರಿಸುವ ಕುರಿತು ಹೊಸ ಕರಡು ನೀತಿಯನ್ನು ಬಿಡುಗಡೆಗೊಳಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಈ ನಿರ್ದಿಷ್ಟ ಡ್ರೈವಿಂಗ್ ಸ್ಕೂಲ್'ಗಳು ಗುಣಮಟ್ಟದ ಚಾಲಕರನ್ನು ತಯಾರಿಸುವ ಸಲುವಾಗಿ ಉತ್ತಮ ಗುಣಮಟ್ಟದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತವೆ. ಸರ್ಕಾರಿ ಮಾನ್ಯತೆ ಪಡೆದ ವಿಶೇಷ ಡ್ರೈವಿಂಗ್ ಸ್ಕೂಲ್'ಗಳಿಗೆ ಹಾಜರಾಗುವ ಮೂಲಕ ಚಾಲನಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಕ್ರಿಯಾ ಯೋಜನೆಯನ್ನು ಪರಿಚಯಿಸಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಚಿಂತನೆ ನಡೆಸಿದೆ.

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಚಾಲಕರಿಗೆ ಆರ್‌ಟಿಒ ಕಚೇರಿಗಳಲ್ಲಿ ನಡೆಸುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ನೀಡಲು ಚಿಂತನೆ ನಡೆಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಅಂದರೆ ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ತರಬೇತಿ ಪಡೆಯುವವರು ವಾಹನ ಚಾಲನೆ ಮಾಡುವ ಪರೀಕ್ಷೆಯಿಂದ ವಿನಾಯಿತಿ ಪಡೆಯಬಹುದು. ಅವರು ನೇರವಾಗಿ ಆರ್‌ಟಿಒ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು.

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ಕಲಿತರೆ ಡ್ರೈವಿಂಗ್ ಟೆಸ್ಟ್'ನ ಅಗತ್ಯವಿಲ್ಲ

ಈ ಡ್ರೈವಿಂಗ್ ಸ್ಕೂಲ್'ಗಳಲ್ಲಿ ತರಬೇತಿ ಪಡೆಯುವ ಚಾಲಕರು ಉತ್ತಮ ತರಬೇತಿ ಹೊಂದಿರುವ ಕಾರಣ ರಸ್ತೆ ನಿಯಮ ಉಲ್ಲಂಘನೆ ಮತ್ತು ಅಪಘಾತಗಳನ್ನು ಕಡಿಮೆಮಾಡಲು ಅವಕಾಶಗಳನ್ನು ಹೊಂದಿರುತ್ತಾರೆ ಎಂದು ಫೆಡರಲ್ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Driving test will be exempted if you learn driving in these driving schools. Read in Kannada.
Story first published: Saturday, February 6, 2021, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X