ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹಲವು ಸ್ಟಾರ್ಟ್ಅಪ್‌ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಸ್ಟಾರ್ಟ್ಅಪ್‌ ಕಂಪನಿಗಳ ಜೊತೆಗೆ ಕೆಲವು ವಿದ್ಯಾರ್ಥಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈಗ ಡಚ್ ವಿದ್ಯಾರ್ಥಿಗಳು ಎಲೆಕ್ಟ್ರಿಕ್ ವ್ಯಾನ್ ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಕೆಲವು ಡಚ್ ವಿದ್ಯಾರ್ಥಿಗಳು ರೂಫ್ ಮೇಲೆ ಅಳವಡಿಸಿರುವ ಸೋಲಾರ್ ಪ್ಯಾನೆಲ್‌ಗಳ ಸಹಾಯದಿಂದ ಪವರ್ ಪಡೆಯುವ ಮೊದಲ ಎಲೆಕ್ಟ್ರಿಕ್ ಕ್ಯಾಂಪರ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ವಾಹನವನ್ನು ಸ್ಟೆಲ್ಲಾ ವೀಟಾ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಿದ್ಯಾರ್ಥಿಗಳು ಈಗ ಈ ಎಲೆಕ್ಟ್ರಿಕ್ ವಾಹನದ ಮೂಲ ಮಾದರಿಯನ್ನು ಪರಿಚಯಿಸಿದ್ದಾರೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಮೂಲ ಮಾದರಿಯ ರೂಫ್ ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಚಾಲನೆಗೆ ಮಾತ್ರವಲ್ಲದೆ ವಾಹನದ ವಿವಿಧ ಆನ್‌ಬೋರ್ಡ್ ಸೌಲಭ್ಯಗಳಿಗೆ ಬಳಸಲಾಗುತ್ತದೆ. ಮಾಹಿತಿಯ ಪ್ರಕಾರ, ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ವಾಹನವನ್ನು ಐಂಡ್‌ಹೋವನ್ ಸೋಲಾರ್ ಟೀಂ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಪೂರ್ಣ ಸ್ವಾವಲಂಬಿ ವಾಹನವನ್ನು ವಿನ್ಯಾಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಎಲೆಕ್ಟ್ರಿಕ್ ವಾಹನವು ಉತ್ತಮವಾಗಿರುವ ವಾತಾವರಣದಲ್ಲಿ ದಿನಕ್ಕೆ 730 ಕಿ.ಮೀಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್ ಗೆ ಹೋಗುವ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ವಾಹನದ ಮೇಲಿರುವ ಸೋಲಾರ್ ಪ್ಯಾನೆಲ್ ಸ್ನಾನ ಮಾಡಲು, ಟಿವಿ ನೋಡಲು, ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಅಥವಾ ಕಾಫಿ ಮಾಡಲು ಅಗತ್ಯವಿರುವಷ್ಟು ಶಕ್ತಿಯನ್ನು ಒದಗಿಸುತ್ತದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನವು ಚಾಲನೆಯಾಗದೇ ನಿಂತಿರುವಾಗ ರೂಫ್ ಮೇಲಕ್ಕೆತ್ತಿ ವಾಹನದೊಳಗೆ ವಿಶ್ರಾಂತಿ ಪಡೆಯಬಹುದು. ಜೊತೆಗೆ ಈ ವಾಹನದೊಳಗೆ ಕೆಲಸ ಮಾಡಲು, ಅಡುಗೆ ಮಾಡಲು ಅಥವಾ ಮಲಗಲು ಆರಾಮದಾಯಕವಾದ ವಾಸ ಸ್ಥಳವನ್ನು ಸೃಷ್ಟಿಸುತ್ತದೆ. ಈ ಎಲೆಕ್ಟ್ರಿಕ್ ವಾಹನವನ್ನು ವಿಶ್ವದ ಮೊದಲ ಸಂಪೂರ್ಣ ಸೋಲಾರ್ ಚಾರ್ಜ್ಡ್ ಕ್ಯಾಂಪರ್ ವ್ಯಾನ್ ಎಂದು ಅಭಿವೃದ್ಧಿಪಡಿಸಲಾಗಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಮೂಲ ಮಾದರಿಯನ್ನು ತಯಾರಿಸಿರುವುದರ ಉದ್ದೇಶವು ವಾಹನ ತಯಾರಕ ಕಂಪನಿಗಳನ್ನು ತಮ್ಮ ಶಕ್ತಿಯ ಪರಿವರ್ತನೆಯನ್ನು ವೇಗಗೊಳಿಸಲು ಪ್ರೇರೇಪಿಸುವುದು. ಈ ಉದ್ದೇಶಕ್ಕಾಗಿ ಸ್ಟೆಲ್ಲಾ ವೀಟಾ ಎಲೆಕ್ಟ್ರಿಕ್ ವಾಹನದಲ್ಲಿ ಯುರೋಪ್ ಪ್ರವಾಸವನ್ನು ಕೈಕೊಳ್ಳಲಾಗಿದೆ. ಐಂಡ್‌ಹೋವನ್ ಸೋಲಾರ್ ಟೀಂ, ನೆದರ್‌ಲ್ಯಾಂಡ್ಸ್‌ನ ಐಂಡ್‌ಹೋವನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ 22 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಎಲ್ಲಾ ವಿದ್ಯಾರ್ಥಿಗಳು ಈ ವಾಹನದ ಶ್ರೇಣಿಯನ್ನು ಉತ್ತಮಗೊಳಿಸುವ ಸಲುವಾಗಿ ವರ್ಷ ಪೂರ್ತಿ ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ವಾಹನಗಳ ವಿನ್ಯಾಸದಲ್ಲಿ ತೊಡಗಿದ್ದಾರೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈಗ ಕಂಪನಿಯೊಂದು ಇನ್ನು ಮುಂದೆ ಇವಿ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಹೇಳಿದೆ. ಕಂಪನಿಯು ನೀಡಿರುವ ಹೇಳಿಕೆಯ ಪ್ರಕಾರ, ಹೊಸದಾಗಿ ಬಂದಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾಗೆ ಚಾರ್ಜಿಂಗ್ ಕೇಂದ್ರದ ಅಗತ್ಯವಿಲ್ಲ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು. ಕಂಪನಿಯು ಸೋಲಾರ್ ಪ್ಯಾನೆಲ್ ಸೌಲಭ್ಯದೊಂದಿಗೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಅಭಿವೃದ್ಧಿಪಡಿಸುತ್ತಿದೆ. ಚಾರ್ಜ್ ಮಾಡುವ ಅಗತ್ಯವಿದೆ ಎನಿಸಿದಾಗ ಸೂರ್ಯನ ಬಿಸಿಲಿನಲ್ಲಿ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ನಿಲ್ಲಿಸಿದರೆ, ಇನ್ನೂ ಸಾಕಷ್ಟು ಚಾರ್ಜ್ ಆಗುತ್ತದೆ. ಅಂದ ಹಾಗೆ ಸೋಲಾರ್ ರೂಫ್ ನಿಂದ ಚಾರ್ಜ್ ಆಗುವ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ತಯಾರಿಸಿರುವುದು ಶ್ರೀಲಂಕಾ ಮೂಲದ Vega ಎಂಬ ಕಂಪನಿ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

Vega ಕಂಪನಿಯು ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೋಲಾರ್ ಪ್ಯಾನೆಲ್ ಸೌಲಭ್ಯದೊಂದಿಗೆ ಇಟಿಎಕ್ಸ್ ಹೆಸರಿನಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಈಗಷ್ಟೇ ಈ ಆಟೋ ರಿಕ್ಷಾ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದಾದ ಈ ಎಲೆಕ್ಟ್ರಿಕ್ ಆಟೋ ರಿಕ್ಷಾದ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಆಟೋ ರಿಕ್ಷಾವನ್ನು Vega ಕಂಪನಿಯು ಸಂಪೂರ್ಣವಾಗಿ ವಿಭಿನ್ನ ವಿನ್ಯಾಸ ಹಾಗೂ ಶೈಲಿಯಲ್ಲಿ ತಯಾರಿಸಿದೆ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಕಾರುಗಳಲ್ಲಿರುವಂತಹ ಬೂಟ್ ಡೋರ್, ಆಕರ್ಷಕವಾದ ವಿಂಡ್‌ಶೀಲ್ಡ್, ಸಿಂಗಲ್ ಗೇಜ್ ಡ್ಯಾಶ್ ಲೈನ್‌ನಂತಹ ಹೋಮ್ ಆಟೋ ಲೈಟಿಂಗ್ ಗಳನ್ನು ಅಳವಡಿಸಲಾಗಿದೆ. ಈ ಫೀಚರ್ ಗಳನ್ನು ಆಟೋ ರಿಕ್ಷಾದ ನೋಟವನ್ನು ವಿಭಿನ್ನವಾಗಿಸಲು ನೀಡಲಾಗಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಈ ಫೀಚರ್ ಗಳು ಭವಿಷ್ಯದ ಆಟೋ ರಿಕ್ಷಾಗಳ ಶೈಲಿಯಪ್ರತಿಬಿಂಬವಾಗಿವೆ. ಇದರ ಜೊತೆಗೆ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಲು ಹಾಗೂ ಕಡಿಮೆ ನಿರ್ವಹಣಾ ವೆಚ್ಚಗಳನ್ನು ಒದಗಿಸಲು ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಎಲ್‌ಇಪಿ ಬ್ಯಾಟರಿಯನ್ನು ಬಳಸಲಾಗುತ್ತದೆ. ಈ ಆಟೋ ರಿಕ್ಷಾದ ರೂಫ್ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗುತ್ತದೆ. ಈ ಪ್ಯಾನೆಲ್ ಗಳು ಸೂರ್ಯನ ಬೆಳಕಿನಿಂದ ದೊರೆಯುವ ಶಕ್ತಿಯನ್ನು ಆಟೋ ರಿಕ್ಷಾದಲ್ಲಿ ಸಂಗ್ರಹಿಸಲು ನೆರವಾಗುತ್ತವೆ.

ಇದರಿಂದ ವಾಹನವನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ಹುಡುಕುವುದು ತಪ್ಪುತ್ತದೆ. ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಮಾಡಿದರೆ ಪ್ರತಿ ದಿನ 64 ಕಿ.ಮೀಗಳವರೆಗೆ ಚಲಿಸಬಹುದು. ಇಟಿಎಕ್ಸ್ ಆಟೋ ರಿಕ್ಷಾದಲ್ಲಿರುವ ಸೋಲಾರ್ ಪ್ಯಾನಲ್ ಅತ್ಯಂತ ಸಣ್ಣ ಫಲಕವಾಗಿದ್ದರೂ, ಇದನ್ನು ಗರಿಷ್ಠ ಉಪಯುಕ್ತತೆ ಪಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಚಾರ್ಜಿಂಗ್ ಸಾಮರ್ಥ್ಯದ ಬಗ್ಗೆ ದೊರೆತಿರುವ ಮಾಹಿತಿಯಿಂದ ಇದು ಸ್ಪಷ್ಟವಾಗಿದೆ. Vega ಕಂಪನಿಯು ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಮೊದಲು ಶ್ರೀಲಂಕಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ನಂತರ ಈ ಆಟೋ ರಿಕ್ಷಾವನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಆಟೋ ರಿಕ್ಷಾಗಳಿಗೆ ಹೆಚ್ಚು ಬೇಡಿಕೆ ಇರುವ ದೇಶಗಳಲ್ಲಿ ಇದನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುತ್ತೆ ಈ ಎಲೆಕ್ಟ್ರಿಕ್ ವ್ಯಾನ್

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜ್ ಆಗುವ ಕಾರಣಕ್ಕೆ ಈ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಚಾಲನೆ ಮಾಡಲು ಹೆಚ್ಚುವರಿ ಹಣವನ್ನು ಖರ್ಚು ಮಾಡುವಂತಿಲ್ಲವೆಂದು Vega ಕಂಪನಿ ತಿಳಿಸಿದೆ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಸೋಲಾರ್ ಪ್ಯಾನಲ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸೋಲಾರ್ ಪ್ಯಾನೆಲ್ ಮೂಲಕವೇ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

Most Read Articles

Kannada
English summary
Dutch students develops electric van which charges with solar panel on roof details
Story first published: Wednesday, September 29, 2021, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X