ವಿತರಣಾ ಸೇವೆ ನೀಡಲು ಮಹೀಂದ್ರಾ ಲಾಜಿಸ್ಟಿಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡ ಫ್ಲಿಪ್‌ಕಾರ್ಟ್
ಆನ್‌ಲೈನ್ ರಿಟೇಲ್ ಕಂಪನಿಯಾದ ಫ್ಲಿಪ್‌ಕಾರ್ಟ್ ಡೆಲಿವರಿ ಸೇವೆ ನೀಡಲು ಮಹೀಂದ್ರಾ ಲಾಜಿಸ್ಟಿಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಮಹೀಂದ್ರಾ ಲಾಜಿಸ್ಟಿಕ್ಸ್ ತನ್ನ ಎಲೆಕ್ಟ್ರಿಕ್ ವಿತರಣಾ ಸೇವೆಯಾದ ಇಡೆಲ್ ಅನ್ನು ಕಳೆದ ವರ್ಷ ದೇಶದ 6 ನಗರಗಳಲ್ಲಿ ಆರಂಭಿಸಿತು.

ಮಹೀಂದ್ರಾ ಲಾಜಿಸ್ಟಿಕ್ಸ್ ವಿತರಣೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತದೆ. ಮಹೀಂದ್ರಾ ಇಡೆಲ್ ದೇಶದ ಅನೇಕ ಇ-ಕಾಮರ್ಸ್ ಕಂಪನಿಗಳಿಗೆ ವಿತರಣಾ ಸೇವೆಯನ್ನು ಒದಗಿಸುತ್ತದೆ. ಇದೇ ವೇಳೆ ಫ್ಲಿಪ್‌ಕಾರ್ಟ್ 2030ರ ವೇಳೆಗೆ ತನ್ನ ಎಲ್ಲಾ ವಿತರಣಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುವುದಾಗಿ ತಿಳಿಸಿದೆ.

ಇದಕ್ಕಾಗಿ ಕಂಪನಿಯು ಸುಮಾರು 25 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಿದೆ. ಮಹೀಂದ್ರಾ ಇಡೆಲ್ ನೆರವಿನಿಂದ ಫ್ಲಿಪ್‌ಕಾರ್ಟ್ ತನ್ನ ವಿತರಣಾ ಪಾಲುದಾರರಿಗೆ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಒದಗಿಸುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡೆಲಿವರಿಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಯಬಹುದು ಎಂದು ಫ್ಲಿಪ್‌ಕಾರ್ಟ್ ಕಂಪನಿ ಹೇಳಿದೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗಲಿವೆ.

ಈ ಕಾರಣಕ್ಕೆ ನಾವು ಮುಂಚಿತವಾಗಿ ಸಿದ್ಧರಾಗಿರಬೇಕು ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಮಹೀಂದ್ರಾ ಲಾಜಿಸ್ಟಿಕ್ಸ್ ಇಡೆಲ್ ವಿತರಣಾ ಸೇವೆಗಾಗಿ ಚಾರ್ಜಿಂಗ್ ಸ್ಟೇಷನ್, ಟ್ರ್ಯಾಕಿಂಗ್, ರಿಪೇರಿ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸದ್ಯಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಕೋಲ್ಕತಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ಆರು ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಕಂಪನಿಯು ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 20 ನಗರಗಳಲ್ಲಿ ಇಡೆಲ್ ಸೇವೆಯನ್ನು ಆರಂಭಿಸಲಿದೆ.

ಮಹೀಂದ್ರಾ ಲಾಜಿಸ್ಟಿಕ್ಸ್ ಕಂಪನಿಯು ಥರ್ಡ್ ಪಾರ್ಟಿ ಲಾಜಿಸ್ಟಿಕ್ಸ್ ಸೇವೆಯನ್ನು ಒದಗಿಸುತ್ತದೆ. ಇ-ಕಾಮರ್ಸ್, ವಿತರಣೆ ಹಾಗೂ ಬಳಕೆಯಾಗುವ ಸರಕುಗಳ ಸರಬರಾಜಿನಲ್ಲಿ ಇಡೆಲ್ ಸೇವೆಯನ್ನು ಒದಗಿಸಲಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇಡೆಲ್ ವಿತರಣಾ ಸೇವೆಯು ವಿತರಣಾ ಸೇವೆಗಳಿಗಾಗಿಯೇ ವಿನ್ಯಾಸಗೊಳಿಸಲಾದ 3 ವ್ಯಾಟ್ ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಿದೆ. ಈ ವಾಹನಗಳನ್ನು ಚಾರ್ಜ್ಮಾಡಲು ಚಾರ್ಜಿಂಗ್ ಸ್ಟೇಷನ್'ಗಳನ್ನು ಸಹ ನಿರ್ಮಿಸಲಾಗುತ್ತದೆ.

ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಕಮರ್ಷಿಯಲ್ ವೆಹಿಕಲ್ ಸೆಗ್'ಮೆಂಟಿನಲ್ಲಿ ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ. ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿಯ ಸಣ್ಣ ಎಲೆಕ್ಟ್ರಿಕ್ ಕಾರ್ ಅನ್ನು ಪರೀಕ್ಷಿಸಲಾಗಿದೆ. ಕಂಪನಿಯು ಶೀಘ್ರದಲ್ಲೇ ಎಲೆಕ್ಟ್ರಿಕ್ ಕ್ವಾಡ್ರೈಸಿಕಲ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.


Click it and Unblock the Notifications