ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಕರೋನಾ ವೈರಸ್ ಹರಡುವುದನ್ನು ತಡೆಯಲು 2020ರಲ್ಲಿ ವಿಶ್ವದ್ಯಾಂತ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಈಗ ಆಟೋಮೊಬೈಲ್ ಉದ್ಯಮವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ವಾಹನಗಳ ಉತ್ಪಾದನೆಗೆ ಮೈಕ್ರೋಚಿಪ್‌ಗಳ ಕೊರತೆ ಎದುರಾಗಿದೆ. ಇದು ವಾಹನಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಮೈಕ್ರೋಚಿಪ್‌ಗಳ ಕೊರತೆಯು ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯಂತಹ ಕಾರುಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಮೈಕ್ರೋಚಿಪ್‌ಗಳ ಕೊರತೆಯಿಂದಾಗಿ ವಿಶ್ವದ ಹಲವು ಪ್ರಮುಖ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲು ಅಥವಾ ತಮ್ಮ ಘಟಕಗಳನ್ನುತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ವಾಹನಗಳ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಿರುವ ಮೈಕ್ರೋಚಿಪ್‌ಗಳ ಕೊರತೆಗೆ ಕಾರಣವೇನು? ಈ ಸಮಸ್ಯೆ ವಾಹನ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಕಾರಣಗಳು:

1. ಲಾಕ್‌ಡೌನ್

2020ರಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ನಂತರ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿರುವುದರಿಂದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಇದರಿಂದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳ ಉತ್ಪಾದನೆಯು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಕ್ರೋಚಿಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯನ್ನು ಪೂರೈಸಲು ಮೈಕ್ರೋಚಿಪ್ ತಯಾರಕ ಕಂಪನಿಗಳು ಉತ್ಪಾದನೆಯನ್ನು ಹೆಚ್ಚಿಸಿದವು. ಇದೇ ವೇಳೆ ಆಟೋಮೊಬೈಲ್ ಕಂಪನಿಗಳು ಸಹ ವಾಹನ ಉತ್ಪಾದನೆಯನ್ನು ಆರಂಭಿಸಿದವು.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಆಟೋಮೊಬೈಲ್ ಉದ್ಯಮಕ್ಕೆ ಅಗತ್ಯವಿರುವಷ್ಟು ಮೈಕ್ರೋಚಿಪ್‌ಗಳನ್ನು ಉತ್ಪಾದಿಸಲು ಮೈಕ್ರೋಚಿಪ್ ತಯಾರಕ ಕಂಪನಿಗಳಿಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ವಿಶ್ವದಾದ್ಯಂತ ಮೈಕ್ರೋಚಿಪ್‌ಗಳಿಗೆ ಕೊರತೆ ಎದುರಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

2. ಚೀನಾ ಕಂಪನಿಗಳ ಮೇಲೆ ನಿಷೇಧ

ಕೃತಿಚೌರ್ಯದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಮೆರಿಕಾವು 2020ರಲ್ಲಿ ಚೀನಾದ ತಂತ್ರಜ್ಞಾನ ಕಂಪನಿಗಳ ಮೇಲೆ ನಿಷೇಧ ಹೇರಿತು. ಈ ನಿಷೇಧವು ಸಹಮೈಕ್ರೋಚಿಪ್‌ಗಳ ಕೊರತೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

3. ಚಂಡಮಾರುತ

ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಉಂಟಾದ ತೀವ್ರ ಚಂಡಮಾರುತದಿಂದಾಗಿ ಪ್ರಮುಖ ಮೈಕ್ರೋಚಿಪ್ ತಯಾರಕ ಕಂಪನಿಗಳಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ ಹಾಗೂ ಇನ್ಫಿನಿಯನ್'ಗಳು ತಮ್ಮ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದವು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಎನ್‌ಎಕ್ಸ್‌ಪಿ ಹಾಗೂ ಇನ್ಫಿನಿಯನ್ ಕಂಪನಿಗಳು ಆಟೋಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ಚಿಪ್‌ಗಳನ್ನು ಪೂರೈಸುವ ಪ್ರಮುಖ ಕಂಪನಿಗಳಾಗಿವೆ. ಆಟೋಮೊಬೈಲ್ ಉದ್ಯಮದ ಪೂರೈಕೆ ಮೇಲೆ ತೀವ್ರ ಪರಿಣಾಮ ಬೀರಲು ಚಂಡಮಾರುತವು ಸಹ ಪ್ರಮುಖ ಕಾರಣವಾಗಿದೆ.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಪರಿಣಾಮ

1. ಉತ್ಪಾದನಾ ಹಾಗೂ ವಿತರಣೆಯಲ್ಲಿ ವಿಳಂಬ

ಎಲ್ಲಾ ಹೊಸ ವಾಹನಗಳು ಚಿಪ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಎಂಜಿನ್‌ಗಳ ಕಂಪ್ಯೂಟರ್ ನಿರ್ವಹಣೆಯಿಂದ ಹಿಡಿದು ಡ್ರೈವರ್‌ಗಳಿಗೆ ಅಗತ್ಯವಿರುವ ತುರ್ತು ಬ್ರೇಕಿಂಗ್'ವರೆಗೆ ಎಲ್ಲವನ್ನೂ ಚಿಪ್'ಗಳು ನಿಯಂತ್ರಿಸುತ್ತದೆ. ಅವುಗಳನ್ನು ಆಧುನಿಕ ಕಾರುಗಳ ಮಿದುಳುಗಳೆಂದು ಹೇಳಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಮೈಕ್ರೋಚಿಪ್‌ಗಳ ಕೊರತೆಯಿಂದಾಗಿ ವಿಶ್ವದ ಹಲವು ಪ್ರಮುಖ ಕಂಪನಿಗಳಿಗೆ ಸರಿಯಾದ ಸಮಯಕ್ಕೆ ಕಾರುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಜನರಲ್ ಮೋಟಾರ್ಸ್, ಫೋರ್ಡ್, ಟೊಯೊಟಾ ಹಾಗೂ ನಿಸ್ಸಾನ್'ನಂತಹ ಕಂಪನಿಗಳು ಮೈಕ್ರೋಚಿಪ್‌ಗಳ ಕೊರತೆಯಿಂದ ತತ್ತರಿಸಿವೆ.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಈ ಸಮಸ್ಯೆಯನ್ನು ಪರಿಹರಿಸಲು, ಆಟೋಮೊಬೈಲ್ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಉತ್ಪಾದನೆಯಲ್ಲಿ ವಿಳಂಬವಾಗುತ್ತಿರುವುದರಿಂದ ಗ್ರಾಹಕರಿಗೆ ಕಾರುಗಳನ್ನು ವಿತರಿಸುವುದು ಸಹ ವಿಳಂಬವಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

2. ಚಿಪ್ ಇಲ್ಲದೆ ಕಾರುಗಳನ್ನು ಮಾರಾಟ ಮಾಡುವುದು

ಮೈಕ್ರೋಚಿಪ್‌ಗಳ ಕೊರತೆಯಿಂದಾಗಿ ಚಿಪ್'ಗಳಿಲ್ಲದೇ ಕಾರುಗಳನ್ನು ಉತ್ಪಾದಿಸಲಾಗುವುದು ಎಂದು ಕೆಲವು ಕಂಪನಿಗಳು ಘೋಷಿಸಿವೆ. ಚಿಪ್'ಗಳು ಲಭ್ಯವಾದ ನಂತರ ಅವುಗಳನ್ನು ಕಾರುಗಳಲ್ಲಿ ಅಳವಡಿಸಿ ಮಾರಾಟಗಾರರಿಗೆ ಕಳುಹಿಸಲಾಗುವುದು.

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

ಕಾರು ಮಾಲೀಕರು ಮಾರಾಟಗಾರರ ಬಳಿ ಚಿಪ್'ಗಳನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಸಿವೆ. ಆದರೆ ಈ ರೀತಿ ಮಾಡುವುದರಿಂದ ಗ್ರಾಹಕರಿಗೆ ವಿವಿಧ ಅನಾನುಕೂಲತೆಗಳು ಉಂಟಾಗುತ್ತಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಮೈಕ್ರೋಚಿಪ್‌ಗಳ ಕೊರತೆ

3. ಬೆಲೆ ಏರಿಕೆ

ಚಿಪ್‌ಗಳ ಕೊರತೆಯಿಂದಾಗಿ, ಆಟೋಮೊಬೈಲ್ ಕಂಪನಿಗಳು ಅವುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಿವೆ. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿ, ವಾಹನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಪರಿಣಾಮವು ಗ್ರಾಹಕರ ಮೇಲಾಗುತ್ತಿದೆ.

Most Read Articles

Kannada
English summary
Effects of shortage of microchips on global automobile industry. Read in Kannada.
Story first published: Saturday, April 3, 2021, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X