ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಕರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಹಿಂದಿನ ವರ್ಷ ಪೆಟ್ರೋಲ್ ನಲ್ಲಿ 5%ನಷ್ಟಿದ್ದ ಎಥೆನಾಲ್ ಮಿಶ್ರಣ ಪ್ರಮಾಣವು 2020-21ರಲ್ಲಿ 8% ಅನ್ನು ದಾಟಲಿದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ಹೇಳಿದ್ದಾರೆ.

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಈ ಬಗ್ಗೆ ಇಟಿ ಆಟೋ ವರದಿ ಮಾಡಿದೆ. 2019ರ ಡಿಸೆಂಬರ್ - 2020ರ ನವೆಂಬರ್ ನಡುವೆ ತೈಲ ಕಂಪನಿಗಳು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲು 173 ಕೋಟಿ ಲೀಟರ್ ಎಥೆನಾಲ್ ಬಳಸಿದ್ದವು. ಆದರೆ ಈ ಪ್ರಮಾಣವು 2018-19ರಲ್ಲಿ ಬಳಸಲಾಗಿದ್ದ 189 ಕೋಟಿ ಲೀಟರ್‌ಗಿಂತ ಕಡಿಮೆಯಾಗಿದೆ.

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಗ್ಯಾಸೋಲಿನ್‌ನಲ್ಲಿ 5%ನಷ್ಟು ಎಥೆನಾಲ್ ಬಳಸಲಾಗುತ್ತಿದೆ. ಕೋವಿಡ್ -19 ಕಾರಣದಿಂದಾಗಿ ಜಾರಿಗೊಳಿಸಲಾದ ಲಾಕ್ ಡೌನ್ ನಿಂದಾಗಿ ಇಂಧನ ಮಾರಾಟ ಪ್ರಮಾಣವು ಕಡಿಮೆಯಾಗಿತ್ತು. ಮುಂಬರುವ ದಿನಗಳಲ್ಲಿ ಗ್ಯಾಸೋಲಿನ್‌ನಲ್ಲಿ ಎಥೆನಾಲ್ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಕೇಂದ್ರ ಸರ್ಕಾರವು 2022ರ ವೇಳೆಗೆ ಗ್ಯಾಸೋಲಿನ್‌ನಲ್ಲಿ ಎಥೆನಾಲ್ ಪ್ರಮಾಣವನ್ನು 10%ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ವೇಳೆ 2030ರ ವೇಳೆಗೆ ಗ್ಯಾಸೋಲಿನ್‌ನಲ್ಲಿ ಬೆರೆಸಿದ ಎಥೆನಾಲ್ ಪ್ರಮಾಣವನ್ನು 20%ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಗಮನಿಸಬೇಕಾದ ಸಂಗತಿಯೆಂದರೆ, 20% ಎಥೆನಾಲ್ ಮಿಶ್ರಣ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರವು 2030ರ ಬದಲು 2023 ಅಥವಾ 2025ರ ವೇಳೆಗೆ ಜಾರಿಗೆ ತರುವ ಯೋಜನೆಯನ್ನು ಹೊಂದಿದೆ. ಇದರಿಂದಾಗಿ ಕೇಂದ್ರ ಸರ್ಕಾರವು ಗ್ಯಾಸೋಲಿನ್‌ನಲ್ಲಿ ಬೆರೆಸಬಹುದಾದ ಎಥೆನಾಲ್ ಪ್ರಮಾಣವನ್ನು ಹೆಚ್ಚಿಸಲು ಆಸಕ್ತಿಯನ್ನು ಹೊಂದಿರುವುದು ಸ್ಪಷ್ಟವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಗ್ಯಾಸೋಲಿನ್‌ನಲ್ಲಿನ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಈ ಎರಡೂ ಸಮಸ್ಯೆಗಳು ಭಾರತಕ್ಕೆ ತಲೆನೋವಾಗಿ ಪರಿಣಮಿಸಿವೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಮೂಲಕ ಚಲಿಸುವ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗಳನ್ನು ಕೊನೆಗಾಣಿಸಲು ಮುಂದಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹ. ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್‌ಜಿ ಹಾಗೂ ಎಲ್‌ಎನ್‌ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

ಪೆಟ್ರೋಲ್'ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ ಪ್ರಮಾಣ

ಇವುಗಳ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಕಚ್ಚಾ ತೈಲ ಆಮದು ಹಾಗೂ ವಾಯುಮಾಲಿನ್ಯ ಕಡಿತಗೊಳಿಸಲು ಎಲೆಕ್ಟ್ರಿಕ್ ವಾಹನಗಳು ನೆರವಾಗಲಿವೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ethanol blending quantity in petrol to increase in 2020-21. Read in Kannada.
Story first published: Wednesday, January 6, 2021, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X