ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಇಡೀ ದೇಶವು ಕರೋನಾ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದೆ. ಈ ನಡುವೆ ಆಟೋ ಮೊಬೈಲ್ ಉದ್ಯಮಕ್ಕೆ ಆಘಾತ ನೀಡುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ (ಎಂಡಿ) ಜಗದೀಶ್ ಖಟ್ಟರ್ ನಿಧನರಾಗಿದ್ದಾರೆ.

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಹೃದಯ ಸ್ತಂಭನದಿಂದಾಗಿ ಜಗದೀಶ್ ಖಟ್ಟರ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಜಗದೀಶ್ ಖಟ್ಟರ್ 2007ರಲ್ಲಿ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ನಿವೃತ್ತಿಯಾಗುವ ವೇಳೆ ಅವರು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಅವರು ಮಾರುತಿ ಸುಜುಕಿ ಇಂಡಿಯಾ ಕಂಪನಿಯಲ್ಲಿ 1993ರಿಂದ 2007ರವರೆಗೆ ಕಾರ್ಯ ನಿರ್ವಹಿಸಿದ್ದರು. ಜಗದೀಶ್ ಖಟ್ಟರ್ 1993ರಲ್ಲಿ ಮಾರುತಿ ಸುಜುಕಿ ಇಂಡಿಯಾದಲ್ಲಿ ಮಾರ್ಕೆಟಿಂಗ್ ನಿರ್ದೇಶಕರಾಗಿ ತಮ್ಮ ಕೆಲಸವನ್ನು ಆರಂಭಿಸಿದರು.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

1999ರಲ್ಲಿ ಬಡ್ತಿ ಪಡೆದ ಅವರು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದರು. ಜಗದೀಶ್ ಖಟ್ಟರ್ ಅವರನ್ನು ಮೊದಲು ಕೇಂದ್ರ ಸರ್ಕಾರ, ನಂತರ 2002ರಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್‌ಎಂಸಿ) ನಾಮಕರಣ ಮಾಡಿದ್ದವು.

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಮಾರುತಿ ಸುಜುಕಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಮೊದಲು ಅವರು ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಐಎಎಸ್ ಹುದ್ದೆಯಲ್ಲಿದ್ದಾಗ ಅವರು ಕೇಂದ್ರ ಉಕ್ಕು ಇಲಾಖೆ, ಉತ್ತರ ಪ್ರದೇಶ ಸರ್ಕಾರದ ಜಂಟಿ ಕಾರ್ಯದರ್ಶಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

2007ರಲ್ಲಿ ಮಾರುತಿ ಸುಜುಕಿ ಕಂಪನಿಯಿಂದ ನಿವೃತ್ತಿರಾದ ನಂತರ ಅವರು ಕಾರ್ನೇಷನ್ ಆಟೋ ಕಂಪನಿಯನ್ನು ಸ್ಥಾಪಿಸಿದರು. ಕಾರ್ನೇಷನ್ ಮಲ್ಟಿ ಬ್ರಾಂಡ್ ಕಾರು ಮಾರಾಟ ಹಾಗೂ ಸರ್ವೀಸ್ ಕಂಪನಿಯಾಗಿದೆ.

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

2018ರಲ್ಲಿ ಈ ಕಂಪನಿಯನ್ನು ಮಹೀಂದ್ರಾ ಫಸ್ಟ್ ಚಾಯ್ಸ್ ಸ್ವಾಧೀನಪಡಿಸಿಕೊಂಡಿತು. 2019ರ ಡಿಸೆಂಬರ್‌ನಲ್ಲಿ ಸಿಬಿಐ ಅವರ ಮೇಲೆ ಸಾಲ ವಂಚನೆ ಆರೋಪ ಮಾಡಿತ್ತು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಜಗದೀಶ್ ಖಟ್ಟರ್ ಅವರ ಕಾರ್ನೇಷನ್ ಆಟೋ ತನ್ನ ಸಹೋದರಿಯ ಕೆಲಸಗಳಿಗಾಗಿ ಸಾಲದ ಮೊತ್ತವನ್ನು ಬೇರೆಡೆಗೆ ತಿರುಗಿಸಿರುವ ಕಾರಣಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ರೂ.110 ಕೋಟಿ ನಷ್ಟವುಂಟಾಗಿದೆ ಎಂದು ಸಿಬಿಐ ಆರೋಪಿಸಿತ್ತು.

ವಿಧಿವಶರಾದ ಮಾರುತಿ ಸುಜುಕಿ ಕಂಪನಿಯ ಮಾಜಿ ಎಂಡಿ

ಮಾರುತಿ ಸುಜುಕಿಯ ಅಧ್ಯಕ್ಷ ಆರ್.ಸಿ.ಭಾರ್ಗವ ಅವರು ಜಗದೀಶ್ ಖಟ್ಟರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಜಗದೀಶ್ ಖಟ್ಟರ್ ಅವರ ನಿಧನವು ನನಗೆ ವೈಯಕ್ತಿಕ ನಷ್ಟವಾಗಿದ್ದು, ದೊಡ್ಡ ಆಘಾತವನ್ನು ನೀಡಿದೆ. ನಾವು ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವು ಎಂದು ಹೇಳಿದ್ದಾರೆ.

Most Read Articles

Kannada
English summary
Ex Maruti Suzuki MD passes away due to cardiac arrest. Read in Kannada.
Story first published: Monday, April 26, 2021, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X