Just In
- 11 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 13 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 15 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 1 day ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳ ವಾಹನ ನೋಂದಣಿ ಮಾಹಿತಿ ಬಿಡುಗಡೆಗೊಳಿಸಿದ ಫಾಡಾ
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಮಾರ್ಚ್ 2021ರ ವಾಹನ ನೋಂದಣಿಗೆ ಸಂಬಂಧಿಸಿದ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಫಾಡಾ ಮಾರ್ಚ್ ತಿಂಗಳಿನಲ್ಲಿ ನೋಂದಾಯಿಸಲಾದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಜೊತೆಗೆ ಖಾಸಗಿ ಹಾಗೂ ವಾಣಿಜ್ಯ ವಾಹನಗಳ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ವರದಿಗಳ ಪ್ರಕಾರ ಕಳೆದ ತಿಂಗಳು ದೇಶದಲ್ಲಿ 2,79,745 ಯುನಿಟ್ ಪ್ಯಾಸೆಂಜರ್ ಕಾರುಗಳು ನೋಂದಣಿಯಾಗಿವೆ.

2020ರ ಮಾರ್ಚ್ ತಿಂಗಳಿನಲ್ಲಿ 2,17,879 ಯುನಿಟ್'ಗಳು ನೋಂದಣಿಯಾಗಿದ್ದವು. ಈ ಮೂಲಕ ವಾಹನಗಳ ನೋಂದಣಿ ಪ್ರಮಾಣವು ಕಳೆದ ವರ್ಷದ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 28.39%ನಷ್ಟು ಹೆಚ್ಚಳವಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಳೆದ ತಿಂಗಳು, 11,95,445 ಯುನಿಟ್‌ಗಳು ದ್ವಿಚಕ್ರ ವಾಹನಗಳು ಭಾರತದಾದ್ಯಂತ ನೋಂದಾಯಿಸಲ್ಪಟ್ಟಿವೆ. 2020ರ ಮಾರ್ಚ್ ತಿಂಗಳಿನಲ್ಲಿ 18,46,613 ಯುನಿಟ್ ದ್ವಿಚಕ್ರ ವಾಹನಗಳು ನೋಂದಣಿಯಾಗಿದ್ದವು.

ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 35.26%ನಷ್ಟು ಕಡಿಮೆಯಾಗಿದೆ. ಇನ್ನು ತ್ರಿಚಕ್ರ ವಾಹನಗಳ ಬಗ್ಗೆ ಹೇಳುವುದಾದರೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 38,034 ಯುನಿಟ್‌ಗಳು ನೋಂದಣಿಯಾಗಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 77,173 ಯುನಿಟ್‌ಗಳು ನೋಂದಣಿಯಾಗಿದ್ದವು. ತ್ರಿಚಕ್ರ ವಾಹನಗಳ ನೋಂದಣಿ ಪ್ರಮಾಣವು ಕಳೆದ ವರ್ಷಕ್ಕಿಂತ ಈ ಬಾರಿ 50.73%ನಷ್ಟು ಕಡಿಮೆಯಾಗಿದೆ.

ಟ್ರಾಕ್ಟರುಗಳ ನೋಂದಣಿ ಬಗ್ಗೆ ಹೇಳುವುದಾದರೆ, ಮಾರ್ಚ್ ತಿಂಗಳಿನಲ್ಲಿ ಟ್ರಾಕ್ಟರುಗಳ ನೋಂದಣಿ ಪ್ರಮಾಣವು ಕಡಿಮೆಯಾಗಿದೆ. ಕಳೆದ ತಿಂಗಳು 69,082 ಯುನಿಟ್ ಟ್ರಾಕ್ಟರುಗಳು ನೋಂದಣಿಯಾಗಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

2020ರ ಮಾರ್ಚ್ ತಿಂಗಳಿನಲ್ಲಿ 53,463 ಯುನಿಟ್ ಟ್ರಾಕ್ಟರುಗಳು ನೋಂದಣಿಯಾಗಿದ್ದವು. ಟ್ರಾಕ್ಟರುಗಳು ನೋಂದಣಿ ಪ್ರಮಾಣವು ಕಳೆದ ವರ್ಷಕ್ಕಿಂತ ಈ ಬಾರಿ 29.21%ನಷ್ಟು ಕಡಿಮೆಯಾಗಿದೆ.

ಕಳೆದ ತಿಂಗಳು ವಾಣಿಜ್ಯ ವಾಹನಗಳ ನೋಂದಣಿಯಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ಮಾರ್ಚ್ ತಿಂಗಳಲ್ಲಿ 67,372 ಯುನಿಟ್ ವಾಣಿಜ್ಯ ವಾಹನಗಳು ನೋಂದಣಿಯಾಗಿವೆ. 2020ರ ಮಾರ್ಚ್ ತಿಂಗಳಿನಲ್ಲಿ 1,16,559 ಯುನಿಟ್‌ಗಳು ನೋಂದಣಿಯಾಗಿದ್ದವು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಪ್ರಮಾಣವು ಕಳೆದ ವರ್ಷಕ್ಕಿಂತ ಈ ಬಾರಿ 42.20%ನಷ್ಟು ಕಡಿಮೆಯಾಗಿದೆ. ವಾಣಿಜ್ಯ ವಾಹನಗಳಲ್ಲಿ ಲಘು, ಮಧ್ಯಮ ಹಾಗೂ ಭಾರೀ ವಾಹನಗಳ ನೋಂದಣಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮಾರುತಿ ಸುಜುಕಿ ಕಂಪನಿಯು 43.31%ನಷ್ಟು ನೋಂದಣಿಯೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಹ್ಯುಂಡೈ ಮೋಟಾರ್ಸ್ 15%ನೊಂದಿಗೆ ಎರಡನೇ ಸ್ಥಾನದಲ್ಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟಾಟಾ ಮೋಟಾರ್ಸ್ 7.65%ನೊಂದಿಗೆ ಮೂರನೇ ಸ್ಥಾನದಲ್ಲಿದೆ. ದ್ವಿಚಕ್ರ ವಾಹನ ನೋಂದಣಿಯ ಬಗ್ಗೆ ಹೇಳುವುದಾದರೆ ಹೀರೋ ಮೊಟೊಕಾರ್ಪ್‌ನ 42.71%ನಷ್ಟುವಾಹನಗಳು ನೋಂದಣಿಯಾಗಿವೆ.

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್'ನ 21.42%, ಟಿವಿಎಸ್ ಮೋಟಾರ್'ನ 13.87% ಹಾಗೂ ಬಜಾಜ್ ಆಟೋದ 12.08%ನಷ್ಟು ವಾಹನಗಳು ನೋಂದಣಿಯಾಗಿವೆ. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ವಿಭಾಗದಲ್ಲಿ 46.09%ನಷ್ಟು ನೋಂದಣಿ ಮೂಲಕ ಮೊದಲ ಸ್ಥಾನದಲ್ಲಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ 22.15% ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಯ 14.06%ನಷ್ಟು ವಾಹನಗಳು ನೋಂದಣಿಯಾಗಿವೆ. ಮಹೀಂದ್ರಾ ಅಂಡ್ ಮಹೀಂದ್ರಾ ಕೃಷಿ ಸಲಕರಣೆಗಳಲ್ಲಿ 22.50%ನಷ್ಟು ಪಾಲನ್ನು ದಾಖಲಿಸಿದೆ.