2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಕೋವಿಡ್ 19 ಸಾಂಕ್ರಾಮಿಕವು ವಾಹನ ಉದ್ಯಮದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ದೇಶದ್ಯಾಂತ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಕಾರಣದಿಂದಾಗಿ 2020ರಲ್ಲಿ ಕಾರು ಮಾರಾಟವು ಮಂಕಾಗಿತ್ತು. ವರ್ಷಾಂತ್ಯದಲ್ಲಿ ಆಟೋ ಮೊಬೈಲ್ ಉದ್ಯಮವು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳಿತು. 2020 - 21 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆಟೋ ಮೊಬೈಲ್ ಉದ್ಯಮವು ಮಾರಾಟದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿತು.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಆದರೆ ಕೋವಿಡ್ 19 ಎರಡನೇ ಅಲೆಯಿಂದಾಗಿ 2021 - 22ರ ಹಣಕಾಸು ವರ್ಷದ ಆರಂಭದಲ್ಲಿ ಕಾರು ಮಾರಾಟವು ಮತ್ತೊಮ್ಮೆ ಹಿನ್ನಡೆ ಅನುಭವಿಸಿತು. ಇವುಗಳ ಜೊತೆಗೆ ಸೆಮಿಕಂಡಕ್ಟರ್‌ಗಳ ಕೊರತೆ ಹಾಗೂ ಕರೋನಾ ವೈರಸ್ ಹೊಸ ರೂಪಾಂತರವಾದ ಓಮಿಕ್ರಾನ್'ಗಳು ಮತ್ತೊಮ್ಮೆ ಭಾರತದಲ್ಲಿ ಕಾರು ಮಾರಾಟಕ್ಕೆ ಬ್ರೇಕ್ ಹಾಕಿವೆ. ಈ ಸಮಸ್ಯೆಗಳು 2022ರಲ್ಲಿಯೂ ಕಾಡುವ ನಿರೀಕ್ಷೆಗಳಿವೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ (ಎಫ್‌ಎಡಿಎ) ಅಧ್ಯಕ್ಷರಾದ ವಿಂಕೇಶ್ ಗುಲಾಟಿ ರವರು 2022 ರಲ್ಲಿ ನಡೆಯಲಿರುವ ಮಾರಾಟದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾವು 2022ನೇ ವರ್ಷವನ್ನು ತಟಸ್ಥ ವರ್ಷವೆಂದು ಭಾವಿಸುತ್ತೇವೆ. ಏಕೆಂದರೆ ಒಮಿಕ್ರಾನ್‌ನ ಪ್ರಕರಣಗಳ ಏರಿಕೆಯು ಮತ್ತೊಮ್ಮೆ ಜಾಗತಿಕವಾಗಿ ಭಯವನ್ನು ಸೃಷ್ಟಿಸಿದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಇದರ ಜೊತೆಗೆ ಸೆಮಿಕಂಡಕ್ಟರ್ ಚಿಪ್'ಗಳ ಕೊರತೆಯು ಪ್ರಯಾಣಿಕ ವಾಹನಗಳ ಪೂರೈಕೆಯ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದರೆ ಉತ್ಪಾದನಾ ದೇಶಗಳು ಲಾಕ್‌ಡೌನ್‌ ಜಾರಿಗೊಳಿಸಬಹುದು. ಒಂದು ವೇಳೆ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದರೆ ಮತ್ತೊಮ್ಮೆ ಸೆಮಿಕಂಡಕ್ಟರ್ ಚಿಪ್ ಗಳಿಗೆ ಕೊರತೆ ಎದುರಾಗಬಹುದು.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

2022ರ ದ್ವಿತೀಯಾರ್ಧದಲ್ಲಿ ಪೂರೈಕೆ ಹಾಗೂ ಬೇಡಿಕೆ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಗಳಿವೆ. ಮೊದಲೇ ಹೇಳಿದಂತೆ ಆಟೋ ಉದ್ಯಮವು 2023 ರ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. ನಂತರ ಪೂರ್ವ ಕೋವಿಡ್ ಮಟ್ಟಕ್ಕೆ ಹಿಂತಿರುಗಬಹುದು. ಆದರೆ ಇದು ಕೋವಿಡ್ ನಿರ್ಮೂಲವಾದಾಗ ಮಾತ್ರ ಸಂಭವಿಸುತ್ತದೆ ಎಂದು ಹೇಳಿದರು. ದೇಶದಲ್ಲಿ ವಾಹನ ತಯಾರಕ ಕಂಪನಿಗಳು ಸೆಮಿಕಂಡಕ್ಟರ್‌ಗಳ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳನ್ನು ಪರಿಗಣಿಸಿದರೆ ದೇಶದಲ್ಲಿ ಕಾರು ಮಾರಾಟವು ಕಾಲಾನಂತರದಲ್ಲಿ ಕ್ರಮೇಣ ಹೆಚ್ಚಳವಾಗುವ ನಿರೀಕ್ಷೆಗಳಿವೆ. ಪ್ರಪಂಚದಾದ್ಯಂತಸೆಮಿಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿರುವುದರಿಂದ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಇತ್ತೀಚೆಗೆ ರೂ. 76 ಸಾವಿರ ಕೋಟಿಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆಯನ್ನು ಘೋಷಿಸಿದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಮುಂದಿನ 2 ರಿಂದ 3 ವರ್ಷಗಳಲ್ಲಿ ದೇಶಿಯ ಅಗತ್ಯತೆಗಳಿಗೆ ಪೂರಕವಾಗಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ದೇಶದಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ. ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯಿಂದ ಪಿ‌ಎಲ್‌ಐ ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಲಿದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಈ ಅನುಮೋದಿತ ಪಿಎಲ್‌ಐ ಯೋಜನೆಯು ಮುಂದಿನ ಐದರಿಂದ ಆರು ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ರೂ. 76,000 ಕೋಟಿಗಳ ಹೂಡಿಕೆಯನ್ನು ಕಲ್ಪಿಸುತ್ತದೆ. ಇನ್ನು 2 - 3 ವರ್ಷಗಳಲ್ಲಿ ಸುಮಾರು 10 - 12 ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆ ಆರಂಭಿಸಲಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ವೈಷ್ಣವ್ ಜೈನ್ ಹೇಳಿದ್ದಾರೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಈ ಅವಧಿಯಲ್ಲಿ ಸುಮಾರು 50 - 60 ಡಿಸೈನಿಂಗ್ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿ ವಿತರಣೆಯನ್ನು ಮುಂದೂಡಿವೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಇದರ ನಡುವೆ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರು ಹೆಚ್ಚು ಬೆಲೆ ತೆರಬೇಕಾಗುತ್ತದೆ. ಹೊಸದಾಗಿ ಬಿಡುಗಡೆಯಾಗುವ ವಾಹನಗಳ ವಿತರಣೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಕೋವಿಡ್ ಕಾರಣಕ್ಕೆ ವಿಶ್ವಾದಾದ್ಯಂತ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಂ ಆಯ್ಕೆಯನ್ನು ನೀಡಿದವು.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಇದರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಸಹಜವಾಗಿಯೇ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಯಿತು. ಆದರೆ ಬೇಡಿಕೆಗೆ ತಕ್ಕಂತೆ ಸೆಮಿಕಂಡಕ್ಟರ್ ಗಳನ್ನು ಪೂರೈಸಲಾಗುತ್ತಿಲ್ಲ. ಇದರಿಂದಾಗಿ ವಾಹನಗಳ ಉತ್ಪಾದನೆಯಾಗುತ್ತಿಲ್ಲ. ಇತ್ತೀಚಿಗೆ ಬಿಡುಗಡೆಯಾಗುವ ಕಾರುಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗುತ್ತದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಆ ಕಾರುಗಳಲ್ಲಿ ಸೆಮಿಕಂಡಕ್ಟರ್ ಗಳನ್ನು ಬಳಸಲಾಗುತ್ತದೆ. ಕೆಲವು ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿವೆಯಾದರೂ ಆ ಕಾರುಗಳಲ್ಲಿ ಆಧುನಿಕ ಫೀಚರ್ ಗಳನ್ನು ಅಳವಡಿಸುತ್ತಿಲ್ಲ. ಇನ್ನು ಕೆಲವು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ವಾಹನಗಳ ವಿತರಣೆಗೆ ಕಾಯುತ್ತಿರುವ ಗ್ರಾಹಕರು ಮುಂಬರುವ ದಿನಗಳಲ್ಲಿ ಹೆಚ್ಚು ಬೆಲೆ ಪಾವತಿಸಬೇಕಾಗುತ್ತದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಉತ್ಪಾದನಾ ವೆಚ್ಚದ ಹೆಚ್ಚಳವಾಗಿರುವುದರಿಂದ ಕಂಪನಿಗಳು ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ವಾಹನಗಳ ಬೆಲೆಯನ್ನು 6%ನಷ್ಟು ಹೆಚ್ಚಿಸಲಾಗಿದೆ.

2022ರಲ್ಲಿ ಕಾರು ಮಾರಾಟ ತಟಸ್ಥವಾಗಿರಲಿದೆ ಎಂದು ಹೇಳಿದ ಫಾಡಾ

ಮಾರುತಿ ಸುಜುಕಿ ಕಂಪನಿಯ 2.5 ಲಕ್ಷ, ಹ್ಯುಂಡೈ ಕಂಪನಿಯ 1 ಲಕ್ಷ, ಟಾಟಾ ಮೋಟಾರ್ಸ್ ಕಂಪನಿಯ 1 ಲಕ್ಷ, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ 1 ಲಕ್ಷ, ಕಿಯಾ ಮೋಟಾರ್ಸ್ ಕಂಪನಿಯ 75,000, ಎಂಜಿ ಮೋಟಾರ್ಸ್ ಕಂಪನಿಯ 46,000, ಫೋಕ್ಸ್‌ವ್ಯಾಗನ್, ಸ್ಕೋಡಾ, ಟೊಯೊಟಾ, ನಿಸ್ಸಾನ್, ರೆನಾಲ್ಟ್, ಆಡಿ ಕಂಪನಿಗಳ 75,000 ಗ್ರಾಹಕರು ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ.

Most Read Articles

Kannada
English summary
Fada says car sales in india could be neutral in year 2022 details
Story first published: Saturday, December 25, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X