ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ವಾಹನ ವಿತರಕರ ವ್ಯಾಪಾರವನ್ನು ರಕ್ಷಿಸಲು ಕಾನೂನನ್ನು ಜಾರಿಗೆ ತರಬೇಕು ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಫಾಡಾ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ವಾಹನ ಡೀಲರ್ಸ್ ಅಸೋಸಿಯೇಷನ್ ​​ಅಕ್ಟೋಬರ್ 27 ರಂದು ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ಕೋರಿ ನಿರ್ಣಯ ಮಂಡಿಸಿದೆ. ಇದರಿಂದ ಆಟೋಮೊಬೈಲ್ ವಿತರಕರಿಗೆ ರಕ್ಷಣೆ ಒದಗಿಸಲು ಸಾಧ್ಯವಾಗಲಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಈ ಬಗ್ಗೆ ಹೇಳಿಕೆ ನೀಡಿರುವ ವಾಹನ ಡೀಲರ್ಸ್ ಅಸೋಸಿಯೇಷನ್, ​​ಕಾರ್ ಕಂಪನಿ ಹಾಗೂ ಡೀಲರ್ ತಮ್ಮ ಪಾಲುದಾರಿಕೆಯ ಆರಂಭದಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಇದು ಭಾರತೀಯ ಒಪ್ಪಂದ ಕಾಯಿದೆ ಅಡಿಯಲ್ಲಿ ಮಾನ್ಯವಾಗಿರುತ್ತದೆ. ಆದರೆ, ಕಾನೂನಿನಲ್ಲಿ ವಿತರಕರಿಗೆ ಯಾವುದೇ ಪರಿಹಾರವಿಲ್ಲ. ಈ ಹಿನ್ನೆಲೆಯಲ್ಲಿ ಫಾಡಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸರ್ಕಾರವು ಆಟೋಮೊಬೈಲ್ ಡೀಲರ್ಸ್ ಪ್ರೊಟೆಕ್ಷನ್ ಆಕ್ಟ್ ಅನ್ನು ಜಾರಿಗೆ ತರಬೇಕು ಎಂದು ಹೇಳಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಇಂತಹ ಕಾನೂನುಗಳು ಭಾರತದಲ್ಲಿ ವಾಹನ ವಿತರಕರ ಹಕ್ಕುಗಳನ್ನು ರಕ್ಷಿಸುತ್ತವೆ. ಭಾರತದಲ್ಲಿ ಡೀಲರ್‌ಶಿಪ್ ಒಪ್ಪಂದಗಳಿಗೆ ನಿಗದಿತ ಅವಧಿ ಇಲ್ಲ. ಕೆಲವು ಒಪ್ಪಂದಗಳು ಒಂದು ವರ್ಷಕ್ಕಿಂತ ಕಡಿಮೆ ಇರುತ್ತವೆ. ಡೀಲರ್‌ಶಿಪ್ ವ್ಯವಹಾರವನ್ನು ಮುಚ್ಚಲು 3 - 5 ವರ್ಷಗಳ ಆವಧಿ ಬೇಕಾಗುತ್ತದೆ. ಡೀಲರ್‌ಗಳು ಮಾಡಿದ ಬೃಹತ್ ಹೂಡಿಕೆಯನ್ನು ಹಿಂಪಡೆಯಲು ಸಾಕಷ್ಟು ಅವಕಾಶಗಳನ್ನು ನೀಡದ ಕಾರಣ ಒಪ್ಪಂದದ ಅಲ್ಪಾವಧಿಯು ಡೀಲರ್‌ಗಳಿಗೆ ಹಾನಿಕಾರಕವಾಗಿದೆ ಎಂದು ಫಾಡಾ ಹೇಳಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಭಾರತದಲ್ಲಿ ವಾಹನ ವಿತರಕರಿಗೆ ವ್ಯಾಪಾರ ಸಂರಕ್ಷಣಾ ಕಾನೂನಿನ ಅನುಪಸ್ಥಿತಿಯು ವಿತರಕರಿಗಿಂತ ಒಇಎಂಗಳಿಗೆ ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ ಎಂದು ಫಾಡಾ ಹೇಳಿದೆ. ಇದು ಕಂಪನಿಯನ್ನು ಮುಚ್ಚುವ ಸಮಯದಲ್ಲಿ ಮಾತುಕತೆ ನಡೆಸುವ ವಿತರಕರ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರ ಜೊತೆಗೆ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಸ್ಥಗಿತಗೊಳ್ಳುತ್ತಿರುವ ಕಂಪನಿಯ ಕಾರನ್ನು ಹೊಂದಿರುವ ಗ್ರಾಹಕರಿಗೆ ಇದರಿಂದ ನಷ್ಟವಾಗುತ್ತದೆ. ಅಂತಹ ಗ್ರಾಹಕರು ಡೀಲರ್‌ಶಿಪ್ ಮುಚ್ಚುವುದರಿಂದ ಸೇವೆ ಹಾಗೂ ನಿರ್ವಹಣೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ, ಡೀಲರ್‌ಶಿಪ್‌ನಲ್ಲಿ ಉಳಿದಿರುವ ಸ್ಟಾಕ್ ಹಾಗೂ ಬಿಡಿ ಭಾಗಗಳಿಗೆ ಕಾರು ಕಂಪನಿಗಳು ಹಾಗೂ ವಾಹನ ವಿತರಕರ ನಡುವೆ ಒಪ್ಪಂದದ ಯಾವುದೇ ನಿಯಮವಿಲ್ಲ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಈ ಕಾರಣಕ್ಕೆ ಕಂಪನಿಯನ್ನು ಮುಚ್ಚುವ ಸಂದರ್ಭದಲ್ಲಿ ಸ್ಟಾಕ್‌ನಲ್ಲಿರುವ ಕಾರುಗಳ ನಷ್ಟವನ್ನು ವಿತರಕರು ಭರಿಸಬೇಕಾಗುತ್ತದೆ. ಭಾರತದಿಂದ ಹೊರ ಹೋಗುವ Ford ಕಂಪನಿಯ ನಿರ್ಧಾರವು ಆಟೋ ಮೊಬೈಲ್ ಉದ್ಯಮವನ್ನು ತಲ್ಲಣಗೊಳಿಸಿದೆ. ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಫೋರ್ಡ್ ಕಂಪನಿಯ ನಿರ್ಧಾರದ ವಿರುದ್ಧ ಫೋರ್ಡ್ ಡೀಲರ್‌ಗಳು ಆಕ್ರೋಶಗೊಂಡಿದ್ದಾರೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಕಂಪನಿಯು ತನ್ನ ಡೀಲರ್ ಹಾಗೂ ಪಾಲುದಾರರಿಗೆ ಉಂಟಾದ ನಷ್ಟವನ್ನು ಸರಿಯಾಗಿ ಸರಿದೂಗಿಸಬೇಕು ಎಂದು ಫೋರ್ಡ್ ಕಂಪನಿಯ ಡೀಲರ್‌ಗಳು ಹೇಳಿದ್ದಾರೆ. ಫೋರ್ಡ್ ಕಂಪನಿ ಜನರಲ್ ಮೋಟಾರ್ಸ್, ಮ್ಯಾನ್ ಟ್ರಕ್ಸ್, ಯುಎಂ ಲೋಹಿಯಾ ಹಾಗೂ ಹಾರ್ಲೆ ಡೇವಿಡ್ಸನ್ ನಂತರ ಭಾರತವನ್ನು ತೊರೆಯುತ್ತಿರುವ ಐದನೇ ವಾಹನ ತಯಾರಕ ಕಂಪನಿಯಾಗಿದೆ. ವಿತರಕರ ಹಿತಾಸಕ್ತಿಗಳನ್ನು ರಕ್ಷಿಸಲು ವಿಶ್ವದ ಹಲವು ದೇಶಗಳಲ್ಲಿ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಫಾಡಾ ಹೇಳಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಆದರೆ ಭಾರತದಲ್ಲಿರುವ ಕಾನೂನು ವ್ಯವಸ್ಥೆಯು ವಿತರಕರ ಈ ನಿರ್ದಿಷ್ಟ ಕಾಳಜಿಗಳನ್ನು ಪರಿಹರಿಸಲು ಸಾಕಾಗುವುದಿಲ್ಲ. ಜಾಗತಿಕ ಆಟೋ ಮೊಬೈಲ್ ಮಾರುಕಟ್ಟೆಯಂತೆಯೇ ಭಾರತದ ಆಟೋ ಮೊಬೈಲ್ ಉದ್ಯಮವು ಸಹ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ವಾಹನಗಳ ಮಾರಾಟ ಪ್ರಮಾಣ ಕಡಿಮೆಯಾಗಲು ಇದು ಸಹ ಕಾರಣವಾಗಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಫಾಡಾ) 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ಎಲ್ಲಾ ರೀತಿಯ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳ ಪ್ರಕಾರ ಭಾರತೀಯ ಆಟೋ ಮೊಬೈಲ್ ಉದ್ಯಮವು ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ 5% ನಷ್ಟು ಕುಸಿತವನ್ನು ದಾಖಲಿಸಿದೆ. ದ್ವಿ ಚಕ್ರ ವಾಹನ ಹಾಗೂ ಟ್ರಾಕ್ಟರ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಫಾಡಾ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ ಒಟ್ಟು 12,96,257 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗಿಂತ 5.27% ನಷ್ಟು ಕಡಿಮೆಯಾಗಿದೆ. 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ರಿಟೇಲ್ ಮಾರಾಟದಲ್ಲಿ ಒಟ್ಟು 13,68,307 ಯುನಿಟ್‌ ವಾಹನಗಳು ಮಾರಾಟವಾಗಿದ್ದವು. ಕಳೆದ ತಿಂಗಳು ದ್ವಿ ಚಕ್ರ ವಾಹನ ಹಾಗೂ ಟ್ರ್ಯಾಕ್ಟರ್ ಮಾರಾಟ ಪ್ರಮಾಣವು ಕಡಿಮೆಯಾಗಿದ್ದರೆ, ಇತರ ವಿಭಾಗಗಳಾದ ಪ್ರಯಾಣಿಕ ವಾಹನ, ಕಮರ್ಷಿಯಲ್ ವಾಹನ ಹಾಗೂ ತ್ರಿ ಚಕ್ರ ವಾಹನಗಳ ರಿಟೇಲ್ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ಫಾಡಾ ದೇಶದ 1,562 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿ‌ಒ) ಪೈಕಿ 1,357 ಕಚೇರಿಗಳಿಂದ ವಾಹನ ನೋಂದಣಿ ಅಂಕಿ ಅಂಶಗಳನ್ನು ಸಂಗ್ರಹಿಸಿದೆ, ಅದರ ಪ್ರಕಾರ ಕಳೆದ ತಿಂಗಳು ದ್ವಿ ಚಕ್ರ ವಾಹನಗಳ ಮಾರಾಟ ಪ್ರಮಾಣವು 9,14,621 ಯೂನಿಟ್‌ಗಳಾಗಿದೆ. ಈ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 11.54% ನಷ್ಟು ಕಡಿಮೆಯಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 10,33,895 ಯುನಿಟ್‌ ದ್ವಿ ಚಕ್ರ ವಾಹನಗಳು ಮಾರಾಟವಾಗಿದ್ದವು.

ಡೀಲರ್‌ಗಳ ರಕ್ಷಣೆಗೆ ಹೊಸ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದ ಫಾಡಾ

ರಿಟೇಲ್ ಟ್ರಾಕ್ಟರ್ ಮಾರಾಟ ಪ್ರಮಾಣವು ಕಳೆದ ತಿಂಗಳು 52,896 ಯುನಿಟ್‌ಗಳಿಗೆ ಇಳಿದಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 69,462 ಯುನಿಟ್‌ಗಳಾಗಿತ್ತು. ಈ ಮೂಲಕ ರಿಟೇಲ್ ಮಾರಾಟ ಪ್ರಮಾಣವು ಕಳೆದ ತಿಂಗಳು 23.85% ನಷ್ಟು ಕುಸಿದಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 2,00,576 ಯುನಿಟ್‌ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

Most Read Articles

Kannada
English summary
Fada urges central government to bring automobile dealer protection law details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X