ರೈತರ ಟ್ರಾಕ್ಟರ್ ಖರೀದಿಗೆ 50% ನಷ್ಟು ಸಬ್ಸಿಡಿ ನೀಡಲಿದೆ ಕೇಂದ್ರ ಸರ್ಕಾರ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಕೇಂದ್ರ ಸರ್ಕಾರವು ರೈತರಿಗೆ ಟ್ರಾಕ್ಟರ್ ಖರೀದಿಸಲು ಸಬ್ಸಿಡಿ ನೀಡುವ ಯೋಜನೆಯನ್ನು ಆರಂಭಿಸಿದೆ.

ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಎಂಬ ಹೆಸರಿನ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ರೈತರು ಯಾವುದೇ ಕಂಪನಿಯ ಟ್ರಾಕ್ಟರ್'ಗಳನ್ನು ಖರೀದಿಸಬಹುದು.

ಹೀಗೆ ಖರೀದಿಸಲಾಗುವ ಟ್ರಾಕ್ಟರ್‌ನ ಬೆಲೆಯ 50% ನಷ್ಟು ಹಣವನ್ನು ರೈತರು ಪಾವತಿಸಬೇಕಾಗುತ್ತದೆ. ಇದೇ ವೇಳೆ ಉಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ.

ಕೃಷಿ ಕಾರ್ಯಗಳಿಗಾಗಿ ರೈತರಿಗೆ ಟ್ರಾಕ್ಟರ್ ಸೇರಿದಂತೆ ಹಲವು ರೀತಿಯ ಯಂತ್ರೋಪಕರಣಗಳು ಬೇಕಾಗುತ್ತವೆ. ಆದರೆ ಆರ್ಥಿಕ ತೊಂದರೆಯಿಂದಾಗಿ ಟ್ರಾಕ್ಟರ್ ತೆಗೆದುಕೊಳ್ಳಲು ಸಾಧ್ಯವಾಗದ ಹಲವಾರು ರೈತರು ದೇಶದಲ್ಲಿದ್ದಾರೆ.

ಅಂತಹ ರೈತರು ಟ್ರಾಕ್ಟರ್'ಗಳನ್ನು ಬಾಡಿಗೆಗೆ ಪಡೆದು ಕೃಷಿ ಕೆಲಸ ಮಾಡುತ್ತಾರೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದೆ.

ಈ ಕಾರಣಕ್ಕೆ ಟ್ರಾಕ್ಟರ್'ಗಳನ್ನು ಖರೀದಿಸುವ ರೈತರಿಗೆ 50% ನಷ್ಟು ಸಬ್ಸಿಡಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಈ ಯೋಜನೆಯೊಂದಿಗೆ ರೈತರು ಟ್ರ್ಯಾಕ್ಟರ್'ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಸಮಸ್ಯೆಯಿಂದ ಮುಕ್ತರಾಗಲಿದ್ದಾರೆ.

ಇದರಿಂದ ದೇಶದಲ್ಲಿರುವ ಹಲವಾರು ರೈತರಿಗೆ ಅನುಕೂಲವಾಗಲಿದೆ. ಹಲವು ರಾಜ್ಯ ಸರ್ಕಾರಗಳು ರೈತರಿಗೆ ಟ್ರಾಕ್ಟರ್'ಗಳನ್ನು ಖರೀದಿಸಲು 20 ರಿಂದ 50% ನಷ್ಟು ಸಬ್ಸಿಡಿ ನೀಡುತ್ತವೆ.

ಈ ಯೋಜನೆಯ ಲಾಭ ಯಾವ ರೈತರಿಗೆ ಸಿಗುತ್ತದೆ ಎಂಬುದನ್ನು ನೋಡುವುದಾದರೆ, 1 ಟ್ರಾಕ್ಟರ್ ಖರೀದಿಸುವ ರೈತರಿಗೆ ಮಾತ್ರ ಕೇಂದ್ರ ಸರ್ಕಾರದ ಈ ಸಬ್ಸಿಡಿ ದೊರೆಯುತ್ತದೆ. ಒಂದಕ್ಕಿಂತ ಹೆಚ್ಚು 1 ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಸಬ್ಸಿಡಿ ದೊರೆಯುವುದಿಲ್ಲ.

ಈ ಸಬ್ಸಿಡಿ ಪಡೆಯಲು ರೈತರು ಆಧಾರ್ ಕಾರ್ಡ್, ಜಮೀನಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ವಿವರಗಳು, ಪಾಸ್‌ಪೋರ್ಟ್ ಗಾತ್ರದ ಫೋಟೋಗಳನ್ನು ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಲಾಭ ಪಡೆಯ ಬಯಸುವ ರೈತರು ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications