ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಇಂದಿನಿಂದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಫಾಸ್ಟ್‌ಟ್ಯಾಗ್ ಅನುಷ್ಠಾನದಿಂದ ಯಮನಾ ಎಕ್ಸ್‌ಪ್ರೆಸ್‌ವೇಯಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಯಲಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

165 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇಯನ್ನು ಜೆಪಿ ಇನ್ಫ್ರಾಟೆಕ್ ಲಿಮಿಟೆಡ್ (ಜೆಐಎಲ್) ನಿರ್ವಹಿಸುತ್ತದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹಣೆಯ ಕೆಲಸವನ್ನು ಸಹ ಜೆಪಿ ಇನ್ಫ್ರಾಟೆಕ್ ಮಾಡಲಿದೆ. ಇದಕ್ಕೂ ಮುನ್ನ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ ಅಳವಡಿಸಲು ಏಪ್ರಿಲ್ 1ರವರೆಗೆ ಗಡುವು ನೀಡಲಾಗಿತ್ತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಟೋಲ್ ಸಿಸ್ಟಂ ಅಳವಡಿಸಲು ಸಾಧ್ಯವಾಗಿರಲಿಲ್ಲ. ಈಗ ಎರಡೂವರೆ ತಿಂಗಳ ವಿಳಂಬದ ನಂತರ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ ಅಳವಡಿಸಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ನೋಯ್ಡಾವನ್ನು ಆಗ್ರಾದೊಂದಿಗೆ ಸಂಪರ್ಕಿಸುವ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಜುವರ್, ಮಥುರಾ ಹಾಗೂ ಆಗ್ರಾದಲ್ಲಿ ಮೂರು ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ ಅನುಷ್ಠಾನಗೊಳಿಸುವುದರಿಂದ ನೋಯ್ಡಾ - ಲಕ್ನೋ ನಡುವೆ ಪ್ರಯಾಣಿಸುವ ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ವರದಿಗಳ ಪ್ರಕಾರ ಕೆಲವು ವಾರಗಳ ಹಿಂದಷ್ಟೇ ಯಮುನಾ ಅಭಿವೃದ್ಧಿ ಪ್ರಾಧಿಕಾರ, ಐಡಿಬಿಐ ಹಾಗೂ ಜೆಪಿ ಇನ್ಫ್ರಾಟೆಕ್ ಪ್ರತಿನಿಧಿಗಳು ಒಪ್ಪಂದ ಮಾಡಿಕೊಂಡಿದ್ದರು. ಇದಾದ ನಂತರ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲು ತೀರ್ಮಾನಿಸಲಾಯಿತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಆರಂಭದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇಯ ಎರಡು ಪಥಗಳಲ್ಲಿರುವ ಪ್ರತಿ ಟೋಲ್ ಪ್ಲಾಜಾದ ಎರಡೂ ಬದಿಗಳಲ್ಲಿರುವ ಟೋಲ್ ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಪಾವತಿ ಸೌಲಭ್ಯ ಲಭ್ಯವಿರುತ್ತದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಮುಂಬರುವ ದಿನಗಳಲ್ಲಿ ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪೂರೈಸುವ ಲೇನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಈ ವರ್ಷದ ಫೆಬ್ರವರಿ 15ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಫೆಬ್ರವರಿ 1ರಿಂದ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಆರಂಭವಾಗಲಿದೆ ಎಂದು ಯಮುನಾ ಎಕ್ಸ್‌ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಘೋಷಿಸಿತ್ತು. ಆದರೆ ವಿವಿಧ ಕಾರಣಗಳಿಂದ ಇದರ ಅನುಷ್ಠಾನ ವಿಳಂಬವಾಗಿತ್ತು.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಎನ್‌ಎಚ್‌ಎಐ ಇತ್ತೀಚೆಗೆ ದೇಶಾದ್ಯಂತವಿರುವ ಟೋಲ್ ಪ್ಲಾಜಾಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಈ ಮಾರ್ಗಸೂಚಿಗಳ ಅನ್ವಯ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಟೋಲ್ ಶುಲ್ಕವನ್ನು 10 ಸೆಕೆಂಡುಗಳಲ್ಲಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿಸಲು ನಿಲ್ಲುವ ವಾಹನಗಳ ಸಾಲು 100 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರಬಾರದು ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲೂ ಅಳವಡಿಕೆಯಾಯ್ತು ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಿಸ್ಟಂ

ವಾಹನಗಳ ಸಾಲು 100 ಮೀಟರ್‌ಗಿಂತ ಹೆಚ್ಚು ಉದ್ದವಿದ್ದರೆ ಟೋಲ್ ಶುಲ್ಕ ಪಾವತಿಸದೆ ವಾಹನಗಳಿಗೆ ಟೋಲ್ ಗೇಟ್ ಮೂಲಕ ಹಾದುಹೋಗಲು ಅನುಮತಿ ನೀಡಲಾಗುತ್ತದೆ. ಈ ನಿಯಮವನ್ನು ಕಾರ್ಯ ರೂಪಕ್ಕೆ ತರಲು ಟೋಲ್ ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿಗಳನ್ನು ಎಳೆಯಲಾಗುತ್ತದೆ.

Most Read Articles

Kannada
English summary
Fastag electronic toll system installed in Yamuna Expressway. Read in Kannada.
Story first published: Tuesday, June 15, 2021, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X