ಫಿಯೆಟ್ ನಿರ್ಮಾಣದ ಮೊದಲ ಪಲ್ಸ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ
ಇಟಾಲಿಯನ್ ಆಟೋ ಉತ್ಪಾದನಾ ಕಂಪನಿ ಫಿಯೆಟ್ ಆಟೋಮೊಬೈಲ್ಸ್ ಜಾಗತಿಕ ಮಾರುಕಟ್ಟೆಗಳಿಗಾಗಿ ತನ್ನ ಹೊಚ್ಚ ಹೊಸ ಮೊದಲ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಪಲ್ಸ್ ಹೆಸರಿನೊಂದಿಗೆ ಮಾರಾಟಗೊಳ್ಳಲಿದೆ.

ಯುರೋಪ್ ಮತ್ತು ಅಮೆರಿಕದಲ್ಲಿ ಈ ಹಿಂದೆ ಜೀಪ್ ಮಾತೃಸಂಸ್ಥೆಯಾದ ಕ್ರಿಸ್ಲರ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಫಿಯೆಟ್ ಕಂಪನಿಯು ಸದ್ಯ ಹೊಚ್ಚ ಹೊಸ ಕಾರು ಉತ್ಪಾದನಾ ಕಂಪನಿಯಾದ ಸ್ಟೆಲ್ಯಾಂಡಿಸ್ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಯುರೋಪಿನ್ ಕಾರು ಉತ್ಪಾದನಾ ಕಂಪನಿಯಾದ ಪಿಎಸ್ಎ ಮತ್ತು ಅಮೆರಿಕದ ಕ್ರಿಸ್ಲರ್ ಕಂಪನಿಗಳು ಒಂದಾಗಿ ಹುಟ್ಟುಹಾಕಿರುವ ಸ್ಟೆಲ್ಯಾಂಡಿಸ್ ಕಂಪನಿಯು ಇದೀಗ ಹೊಸ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಹೊಸ ಕಂಪನಿಯ ಅಧೀನದಲ್ಲಿ ಫಿಯೆಟ್ ಇದೀಗ ಜಂಟಿ ಕಾರ್ಯಾಚರಣೆ ಮುಂದುವರಿಸಿದೆ.

ಹೊಸ ಯೋಜನೆಯ ಭಾಗವಾಗಿ ಪಿಎಸ್ಎ ಕಂಪನಿಯು ಫಿಯೆಟ್ ಜೊತೆಗೂಡಿ ಹೊಸ ಪಲ್ಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಹೊಸ ಕಾರನ್ನು ಲ್ಯಾಟಿನ್ ಅಮೆರಿಕ ದೇಶಗಳಿಗಾಗಿ ಅಭಿವೃದ್ದಿಗೊಳಿಸಿದೆ.

ಸ್ಟೆಲ್ಯಾಂಡಿಸ್ ಅಧೀನದಲ್ಲಿ ಪಿಎಸ್ಎ ಗ್ರೂಪ್ ಮತ್ತು ಕ್ರಿಸ್ಲರ್ ಕಾರ್ಯನಿರ್ವಹಣೆ ಮಾಡಿದ್ದಲ್ಲಿ ಪಿಎಸ್ಎ ಗ್ರೂಪ್ ಅಧೀನದಲ್ಲಿ ಸಿಟ್ರನ್, ಫ್ಯೂಜೊ ಮತ್ತು ಕ್ರಿಸ್ಲರ್ ಅಧೀನದಲ್ಲಿ ಜೀಪ್, ಡಾಡ್ಜ್, ರಾಮ್, ಮೊಪೆರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಕಾರ್ ಬ್ರಾಂಡ್‌ಗಳನ್ನು ಒಳಗೊಂಡಿರುವ ಫಿಯೆಟ್ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ಹೊಸ ಕಾರನ್ನು ಅಭಿವೃದ್ದಿಪಡಿಸಿದೆ.

ಹೊಸ ಪಲ್ಸ್ ಕಾರನ್ನು ಫಿಯೆಟ್ ಕಂಪನಿಯೇ ಅಭಿವೃದ್ದಿಪಡಿಸಿದರೂ ಹೊಸ ಕಾರಿನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪಿಎಸ್ಎ ಅಂಗಸಂಸ್ಥೆಯಾದ ಫ್ಯೂಜೊ ನಿರ್ವಹಿಸಿದ್ದು, ಹೊಸ ಕಾರನ್ನು ಫಿಯೆಟ್ ಕಂಪನಿಯು ಕ್ಲಾಸಿಕ್ ಇಟಾಲಿಯನ್ ವಿನ್ಯಾಸದೊಂದಿಗೆ ಅಭಿವೃದ್ದಿಗೊಳಿಸಿದೆ.

ಪಲ್ಸ್ ಹೊಸ ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯು ಜೀಪ್ ಕಂಪನಿಯು ರೆನೆಗಡ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ಸಿದ್ದಗೊಂಡಿದ್ದು, ಹೊಸ ಕಾರಿನ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿದೆ.

ಹೊಸ ಪಲ್ಸ್ ಕಾರಿನ ಉತ್ಪಾದನೆಗಾಗಿ ಫಿಯೆಟ್ ಕಂಪನಿಯು ತನ್ನ ಹೊಸ ಎಂಎಲ್ಎ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ನಿರ್ಮಾಣ ಮಾಡಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣವಾಗುತ್ತಿರುವ ಪ್ರಮುಖ ಕಾರು ಯುರೋಪಿನ್ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿವೆ.
MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಪಲ್ಸ್ ಕಾರು ಮಾದರಿಯು ಸದ್ಯಕ್ಕೆ ಲ್ಯಾಟಿನ್ ಅಮೆರಿಕ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಫಿಯೆಟ್ ಕಂಪನಿಯೇ 1.0-ಲೀಟರ್ ಟರ್ಬೊ ಪೆಟ್ರೋಲ್, 1.3-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿದೆ.

ಭಾರತದಲ್ಲೂ ಕೂಡಾ ಪ್ರಮುಖ ಕಾರು ಕಂಪನಿಗಳಿಗೆ ಎಂಜಿನ್ ಒದಗಿಸುವ ಫಿಯೆಟ್ ಕಂಪನಿಯು ಹೊಸ ಎಮಿಷನ್ ನಂತರ ಎಂಜಿನ್ ಪೂರೈಕೆಯನ್ನು ಕೂಡಾ ತಗ್ಗಿಸಿದ್ದು, ಸದ್ಯ ಯಾವುದೇ ಕಾರು ಮಾದರಿಯನ್ನು ಮಾರಾಟ ಮಾಡುತ್ತಿಲ್ಲ.
MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಹೊಸ ಸಹಭಾಗಿತ್ವ ಯೋಜನೆಯೊಂದಿಗೆ ಸದ್ಯ ಯುರೋಪ್, ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಗಮನಹರಿಸುತ್ತಿದ್ದು, ಪಲ್ಸ್ ಕಾರು ಮಾದರಿಯನ್ನೇ ಆಧರಿಸಿರುವ ಸಿಟ್ರನ್ ಸಿ3 ಮತ್ತು ಜೀಪ್ ರನೆಗಡ್ ಹೊಸ ಕಂಪ್ಯಾಕ್ಟ್ ಎಸ್‌ಯುವಿಗಳು ಭಾರತದಲ್ಲಿ ಬಿಡುಗೆಯಾಗುತ್ತಿವೆ.


Click it and Unblock the Notifications








