ವಿತರಣಾ ಸೇವೆಗಾಗಿ ಬರಲಿವೆ 25,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು
2030ರ ವೇಳೆಗೆ 25,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ತನ್ನ ಡೆಲಿವರಿ ಸೇವೆಯಲ್ಲಿ ಬಳಸಿಕೊಳ್ಳುವುದಾಗಿ ಖ್ಯಾತ ಇ ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್ ತಿಳಿಸಿದೆ. ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ಕಂಪನಿಯು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರಲಿದೆ.

ಫ್ಲಿಪ್‌ಕಾರ್ಟ್ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ದೇಶಾದ್ಯಂತ ತನ್ನ ಡೆಲಿವರಿ ಸೇವೆಗಳನ್ನು ನೀಡುವ ಸಲುವಾಗಿ ಕಂಪನಿಯು ಹೀರೋ ಎಲೆಕ್ಟ್ರಿಕ್, ಮಹೀಂದ್ರಾ ಎಲೆಕ್ಟ್ರಿಕ್ ಹಾಗೂ ಪಿಯಾಜಿಯೊ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಫ್ಲಿಪ್‌ಕಾರ್ಟ್ ಕಂಪನಿಯ ಪ್ರತಿಸ್ಪರ್ಧಿ ಕಂಪನಿಯಾದ ಅಮೆಜಾನ್ ಕಂಪನಿಯು ದೇಶದಲ್ಲಿ ಡೆಲಿವರಿ ಸೇವೆಗಳನ್ನು ನೀಡಲು ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯಸುಮಾರು 100 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ನಿಯೋಜಿಸಿಕೊಳ್ಳುವುದಾಗಿ ತಿಳಿಸಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅಮೆಜಾನ್ ಕಂಪನಿಯು ಕಳೆದ ವರ್ಷವಷ್ಟೇ 2025ರ ವೇಳೆಗೆ ದೇಶದಲ್ಲಿ 10,000 ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿ ಕೊಳ್ಳುವುದಾಗಿ ತಿಳಿಸಿತ್ತು. ಫ್ಲಿಪ್‌ಕಾರ್ಟ್ ಕಂಪನಿಯು ತನ್ನ ಡೆಲಿವರಿ ಸೇವೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ, ಎಲೆಕ್ಟ್ರಿಕ್ ತ್ರಿ ಚಕ್ರ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳನ್ನು ಬಳಸಲಿದೆ ಎಂದು ಹೇಳಲಾಗಿದೆ.

ಈ ಎಲ್ಲಾ ವಾಹನಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿ, ಜೋಡಿಸಲಾಗುವುದು. ಕಂಪನಿಯು ಸದ್ಯಕ್ಕೆ ಬೆಂಗಳೂರು, ದೆಹಲಿ, ಪುಣೆ, ಹೈದರಾಬಾದ್, ಕೋಲ್ಕತಾ ಹಾಗೂ ಗುವಾಹಟಿ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಬಳಕೆಗೆ ಚಾಲನೆ ನೀಡಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೆಹಲಿ ಸರ್ಕಾರವು ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸಹ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ.

ರಾಯಿಟರ್ಸ್'ನ 2019ರ ವರದಿಯ ಪ್ರಕಾರ, ಓಲಾ, ಉಬರ್'ನಂತಹ ಕ್ಯಾಬ್ ಸೇವೆಯನ್ನು ನೀಡುವ ಕಂಪನಿಗಳಿಗೆ 2026ರ ಏಪ್ರಿಲ್ ವೇಳೆಗೆ 40% ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಿಕೊಳ್ಳುವಂತೆ ಸೂಚನೆ ನೀಡಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯ ಯೋಜನೆಯ ಬಗ್ಗೆ ವಿವರಿಸಿದ ಫ್ಲಿಪ್‌ಕಾರ್ಟ್‌ನ ಇಕಾರ್ಟ್ ಹಾಗೂ ಮಾರ್ಕೆಟ್‌ಪ್ಲೇಸ್‌ನ ಎಸ್‌ವಿಪಿ ಅಮಿತೇಶ್ ಝಾ, ಲಾಜಿಸ್ಟಿಕ್ ಸೇವೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಫ್ಲಿಪ್‌ಕಾರ್ಟ್ ಕಂಪನಿಯ ಸುಸ್ಥಿರತೆಯ ಗುರಿಯ ಪ್ರಮುಖ ಭಾಗವಾಗಿದೆ.

ಕ್ಲೈಮೇಟ್ ಗ್ರೂಪ್'ನ ಇವಿ 100 ಯೋಜನೆಗೆ ನಮ್ಮ ಬದ್ಧತೆ ಸ್ಥಿರವಾಗಿದೆ ಎಂದು ಹೇಳಿದರು. 2030ರ ವೇಳೆಗೆ ನಮ್ಮ ವಿತರಣಾ ಸೇವೆಯನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಬದಲಿಸುತ್ತೇವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಪ್ರಕ್ರಿಯೆಯಲ್ಲಿ ನಾವು ಪ್ರಮುಖ ಸ್ಥಳೀಯ ಕಂಪನಿಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಾಗೂ ನಿಯೋಜಿಸಲು ಕೆಲಸ ಮಾಡುತ್ತೇವೆ. ಜೊತೆಗೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಕರಿಸುತ್ತೇವೆ ಎಂದು ಹೇಳಿದರು.


Click it and Unblock the Notifications