ಗೂರ್ಖಾ ಆಫ್ ರೋಡ್ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ತನ್ನ ಹೊಸ ಗೂರ್ಖಾ(Gurkha) ಆಫ್ ರೋಡ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿ ವಿತರಣೆ ಆರಂಭಿಸಿದ್ದು, ಕಂಪನಿಯು ಹೊಸ ಕಾರು ಮಾಲೀಕರನ್ನು ಉತ್ತೇಜಿಸಲು ಅತ್ಯುತ್ತಮ ಆಫರ್ ಒಂದನ್ನು ಘೋಷಣೆ ಮಾಡಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಹೊಸ ಗೂರ್ಖಾ ಆಫ್ ರೋಡ್ ಎಸ್‌ಯುವಿ ಮಾದರಿಯನ್ನು ಬಿಎಸ್-6 ಎಂಜಿನ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಳಿಸಿರುವ ಫೋರ್ಸ್ ಮೋಟಾರ್ಸ್ ಕಂಪನಿಯು ಬುಕ್ಕಿಂಗ್ ಆಧರಿಸಿ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಕಾರು ಮಾದರಿಯೊಂದಿಗೆ ಕಂಪನಿಯು ತನ್ನ ಪ್ರತಿಸ್ಪರ್ಧಿ ಮಾದರಿಯಾದ ಮಹೀಂದ್ರಾ ಥಾರ್‌ಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ನವೀಕೃತ ಗೂರ್ಖಾ ಎಸ್‌ಯುವಿ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಕಂಪನಿಯು ಗೂರ್ಖಾ ಕಾರು ಮಾಲೀಕರಿಗಾಗಿ ಹೊಸದಾಗಿ 24x7 ಫ್ರಿ ರೋಡ್ ಸೈಡ್ ಅಸಿಸ್ಟೆನ್ಸ್ ಪ್ರೋಗ್ರಾಂ ಪರಿಚಯಿಸಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಕಂಪನಿಯು ದೇಶಾದ್ಯಂತ 6,200ಕ್ಕೂ ಹೆಚ್ಚು ಪಾಲುದಾರರ ಮೂಲಕ ಉಚಿತವಾಗಿ ರಸ್ತೆಬದಿಯ ಸಹಾಯ ಸೇವೆಯನ್ನು ಒದಗಿಸುವುದಾಗಿ ಘೋಷಣೆ ಮಾಡಿದ್ದು, ರೋಡ್ ಸೈಡ್ ಅಸಿಸ್ಟೆನ್ಸ್ ಪ್ರೋಗ್ರಾಂನಲ್ಲಿ ಆನ್-ಸ್ಪಾಟ್ ರಿಪೇರಿಯ ಜೊತೆಗೆ ಹೆಚ್ಚಿನ ಮಟ್ಟದ ತಾಂತ್ರಿಕ ಸೇವೆಗಳು ಅಗತ್ಯವಿದ್ದಲ್ಲಿ ಟೊಯಿಂಗ್ ಸೇವೆಗಳನ್ನು ಒಳಗೊಂಡಿದೆ

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಹೊಸ ಗೂರ್ಖಾ ಕಾರು ಮಾದರಿಯು ಸದ್ಯ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.59 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಬ್ಲ್ಯಾಕ್ ಔಟ್ ಫ್ರಂಟ್ ಬಂಪರ್, ಎಂಜಿನ್ ಬಾಷ್ ಪ್ಲೇಟ್, ಫಾಗ್ ಲ್ಯಾಂಪ್, ಬಾಡಿ ಕ್ಲ್ಯಾಡಿಂಗ್, ಸ್ನೋರ್ಕಲ್ ಸೌಲಭ್ಯವಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಗೂರ್ಖಾ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಸೇರ್ಪಡೆ ಮಾಡಲಾಗಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಕಾರಿನ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಪ್ರಬಲ ಪೈಪೋಟಿ ನೀಡಲಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಹೊಸ ಗೂರ್ಖಾ ಆವೃತ್ತಿಯು 4116 ಎಂಎಂ ಉದ್ದ, 1812 ಎಂಎಂ ಎತ್ತರ, 2400 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರನ್ನು ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಖರೀದಿಸಬಹುದಾಗಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ನ್ಯೂ ಜನರೇಷನ್ ಗೂರ್ಖಾ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮಾದರಿಯು 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಕ್ಸೆಸರಿಸ್‌ಗಳನ್ನು ಹೊರತುಪಡಿಸಿ ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್ ಆಯ್ಕೆ ನೀಡಲಿದ್ದು, ಹೆಚ್ಚುವರಿ ಆಕ್ಸೆಸರಿಸ್‌ನಲ್ಲಿ ವಿಂಡ್ ಸ್ಕೀನ್ ಬಾರ್, ರೂಫ್ ಕ್ಯಾರಿಯರ್, ರಿಯರ್ ರ್ಯಾಡರ್, ಅಲಾಯ್ ವೀಲ್ಹ್ ಮತ್ತು ರಿಯರ್ ಸೈಡ್ ಫೇಸಿಂಗ್ ಚೈಲ್ಡ್ ಸೀಟ್ ನೀಡಲಾಗಿದೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಇದರೊಂದಿಗೆ ಹೊಸ ಕಾರು ರೆಡ್, ಗ್ರಿನ್, ವೈಟ್, ಆರೇಂಜ್, ಗ್ರೆ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಆಕ್ಸೆಸರಿಸ್ ಫೀಚರ್ಸ್ ಹೊರತುಪಡಿಸಿ ಹೆಚ್ಚುವರಿ ಮೊತ್ತದಲ್ಲಿ ಆಫ್-ರೋಡ್ ಚಾಲನೆ ಪೂರಕವಾದ ಮತ್ತಷ್ಟು ಹೊಸ ಸೌಲಭ್ಯಗಳನ್ನು ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಪಡೆದುಕೊಳ್ಳಬಹುದು.

ಗೂರ್ಖಾ ಎಸ್‌ಯುವಿ ಮಾದರಿಗೆ ಹೊಸ ಆಫರ್ ನೀಡಿದ ಫೋರ್ಸ್ ಮೋಟಾರ್ಸ್

ಹೊಸ ಕಾರಿನಲ್ಲಿ ಆಸಕ್ತ ಗ್ರಾಹಕರು ಹೆಚ್ಚುವರಿ ಮೌಲ್ಯದೊಂದಿಗೆ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿಂಡ್ ಸ್ಕೀನ್ ಬಾರ್, ಲಗೇಜ್ ಸಂಗ್ರಹಿಸಲು ರೂಫ್ ಕ್ಯಾರಿಯರ್, ರಿಯರ್ ಪಿನ್ ಲ್ಯಾಡರ್, ಅಲಾಯ್ ಚಕ್ರದೊಂದಿಗೆ ಆಲ್ ಟೆರೇನ್ ಟೈರ್, ರಿಯರ್ ಸೈಡ್ ಫೇಸಿಂಗ್ ಚೈಲ್ಡ್ ಸೀಟ್ ಮತ್ತು ಟೈಲ್ ಲ್ಯಾಂಪ್ ಗ್ರಿಲ್ ನೀಡಲಾಗುತ್ತದೆ.

More from DriveSpark

Article Published On: Thursday, November 4, 2021, 13:13 [IST]
English summary
Force launched gurkha road side assistance program
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+