ಜನಪ್ರಿಯ ಮಹೀಂದ್ರಾ ಥಾರ್‌ಗೆ ನಡುಕ ಹುಟ್ಟಿಸಿದ ಫೋರ್ಸ್ ಗೂರ್ಖಾ ಎಸ್‍ಯುವಿಯ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಫೋರ್ಸ್ ಕಂಪನಿಯು ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಕೊನೆಗೂ ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಬಿಡುಗಡೆಗೊಳಿಸಿದೆ. ಈ ತಿಂಗಳ ಕೊನೆಯಲ್ಲಿ ಈ ಎಸ್‍ಯುವಿಯ ವಿತರಣೆಗಳು ಪ್ರಾರಂಭವಾಗುತ್ತವೆ.

2024ರ ಫೋರ್ಸ್ ಗೂರ್ಖಾ (Force Gurkha) 3-ಡೋರ್ ಮಾದರಿಯ ಬೆಲೆಯು ರೂ.16.75 ಲಕ್ಷವಾದರೆ, ಹೊಸ 5-ಡೋರ್ ಮಾದರಿಯ ಬೆಲೆಯು ರೂ.18 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಈ ಎಸ್‍ಯುವಿಯ ಖರೀದಿಗಾಗಿ ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

Force Gurkha

ವಿನ್ಯಾಸ: ನವೀಕರಿಸಿದ ಫೋರ್ಸ್ ಗೂರ್ಖಾ ತನ್ನ ಸಾಂಪ್ರದಾಯಿಕ ಬಾಕ್ಸಿ ನಿಲುವನ್ನು ಉಳಿಸಿಕೊಂಡಿದೆ. ಹೊಸ ವಿನ್ಯಾಸವು 'ಗೂರ್ಖಾ' ಬ್ಯಾಡ್ಜ್‌ನೊಂದಿಗೆ ಆಯತಾಕಾರದ ಮುಂಭಾಗದ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (ಡಿಆರ್‌ಎಲ್‌ಗಳು) ರೆಟ್ರೊ-ಶೈಲಿಯ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಮಧ್ಯದಲ್ಲಿ ಸಣ್ಣ ಏರ್ ಡ್ಯಾಮ್‌ನೊಂದಿಗೆ ಕಪ್ಪು ಮುಂಭಾಗದ ಬಂಪರ್ ಮತ್ತು ರೌಂಡ್ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಫೀಚರ್ಸ್: ಈ ಎಸ್‍ಯುವಿಯ ಒಳಭಾಗದ ಮಧ್ಯದಲ್ಲಿ 9 ಇಂಚುಗಳ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು Android Auto ಮತ್ತು Apple CarPlay ಅನ್ನು ಸಂಪೂರ್ಟ್ ಮಾಡುತ್ತದೆ. ಹೊಸ ಗೂರ್ಖಾದ ಆಲ್-ಮೆಟಲ್ ಬಾಡಿಯು ಮುಂಭಾಗದ ಕ್ರ್ಯಾಶ್-ಕಂಪ್ಲೈಂಟ್ ಆಗಿದೆ. ಗೂರ್ಖಾ ತನ್ನ ಸುರಕ್ಷತಾ ಸೂಟ್ ಅನ್ನು ಸಹ ನವೀಕರಿಸಿದೆ ಮತ್ತು ಇದು ಈಗ ಎಬಿಎಸ್ ಮತ್ತು ಇಬಿಡಿ ಜೊತೆಗೆ ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ.

Force Gurkha

ರೂಪಾಂತರಗಳು & ಉದ್ದಳತೆ: 2024ರ ಫೋರ್ಸ್ ಗೂರ್ಖಾ ಎಸ್‍ಯುವಿಯನ್ನು ಮೊದಲ ಬಾರಿಗೆ ಮೂರು ಮತ್ತು ಐದು-ಡೋರಿನ ರೂಪಗಳಲ್ಲಿ ನೀಡುತ್ತಿದೆ. ಈ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿಯು ಹೊಸ ಆಯ್ಕೆಯು ಗೂರ್ಖಾದ ಐದು-ಡೋರಿನ ರೂಪಾಂತರವಾಗಿದೆ ಮತ್ತು 7-ಸೀಟುಗಳ ಸಂರಚನೆಯನ್ನು ಹೊಂದಿದೆ. ಇನ್ನು ಈ ಹೊಸ 5-ಡೊರಿನ ಮಾದರಿಯು 4,390mm ಉದ್ದ, 1,865mm ಅಗಲ ಮತ್ತು 2,095mm ಎತ್ತರವನ್ನು ಹೊಂದಿದೆ. ಇದರೊಂದಿಗೆ 2,825mm ಉದ್ದದ ವೀಲ್‌ಬೇಸ್‌ ಅನ್ನು ಒಳಗೊಂಡಿದೆ.

ಇನ್ನು 3-ಡೋರಿನ ಗೂರ್ಖಾ 3,965mm ಉದ್ದ, 1,865mm ಅಗಲ, 2,080mm ಎತ್ತರ ಮತ್ತು 2,400mm ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ. 3-ಡೊರಿನ ಗೂರ್ಖಾ ಎಸ್‍ಯುವಿಗೆ ಹೋಲಿಸಿದರೆ 15mm ಚಿಕ್ಕದಾಗಿದೆ ಮತ್ತು 425mm ಉದ್ದ ಕಡಿಮೆಯಾಗಿದೆ. ಈ ಗೂರ್ಖಾ ಎಸ್‍ಯುವಿಯ ಬದಿಯಲ್ಲಿ (255/65 R18) ಟೈರ್‌ಗಳಲ್ಲಿ ಹೊಸ ಸ್ನ್ಯಾಜಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಿವೆ.

Force Gurkha

ಎಂಜಿನ್: ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳು ಹೆಚ್ಚು ಪ್ರಬಲವಾದ ಮರ್ಸಿಡಿಸ್ ಮೂಲದ 2.6-ಲೀಟರ್ OM616 ಟರ್ಬೋಡೀಸೆಲ್ ಎಂಜಿನ್‌ ಅನ್ನು ಪಡೆಯುತ್ತವೆ. ಈ ಎಂಜಿನ್ 3,200rpm ನಲ್ಲಿ 138bhp ಮತ್ತು 1,400 ಮತ್ತು 2,600rpm ನಡುವೆ 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಇನ್ನೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಫೋರ್ ವ್ಹೀಲ್ ಡ್ರೈವ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಜಿಮ್ನಿ ಮತ್ತು ಮುಂಬರುವ 5-ಡೋರ್ ಮಹೀಂದ್ರಾ ಥಾರ್‌ ಎಸ್‍ಯುವಿಗಳಿಗೆ ಪೈಪೋಟಿ ನೀಡಲು ಹೊಸ ಫೋರ್ಸ್ ಗೂರ್ಖಾ ಮಾದರಿಯು ಹೆಚ್ಚು ಪ್ರಾಯೋಗಿಕವಾಗಿಸಿದೆ. ಈ ಎಸ್‍ಯುವಿಯು ಕಠಿಣವಾದ ಭೂ ಪ್ರದೇಶಗಳಲ್ಲಿ ಕೂಡ ಈ ಹೊಸ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‍ಯುವಿಯು 5-ಡೋರ್ ಇರುವುದರಿಂದ ನಿಮ್ಮ ಫ್ಯಾಮಿಲಿ ಜೊತೆ ಪ್ರಯಾಣ ಮಾಡಲು ಅನುಕೂಲವಾಗಲಿದೆ.

More from DriveSpark

Article Published On: Friday, May 3, 2024, 19:17 [IST]
English summary
2024 force gurkha suv top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+