ಹೊಸ ಫೋರ್ಸ್ ಗೂರ್ಖಾ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ: ಜನ ಶೋರೂಂ ಮುಂದೆ ಕ್ಯೂ ನಿಲ್ಲುವುದು ಪಕ್ಕಾ!
ಜನಪ್ರಿಯ ವಾಹನ ತಯಾರಕ ಕಂಪನಿಯ ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಫೋರ್ಸ್ ಗೂರ್ಖಾ (Force Gurkha) ಮಾದರಿಗೆ ಭಾರತದಲ್ಲಿ ಮಾತ್ರ ಆಫ್-ರೋಡರ್‌ಗಳಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ. ಫೋರ್ಸ್ ಗೂರ್ಖಾ ಎದುರಾಳಿ ಬಹುಬೇಡಿಕೆಯ ಮಹೀಂದ್ರಾ ಥಾರ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಹೊಸ ರೂಪದಲ್ಲಿ ಭರ್ಜರಿಯಾಗಿ ಸಜ್ಜಾಗಿದೆ.
ಫೋರ್ಸ್ ಮೋಟಾರ್ಸ್ ಕೊನೆಗೂ ಭಾರತೀಯ ಮಾರುಕಟ್ಟೆಗೆ ಫೋರ್ಸ್ ಗೂರ್ಖಾ ಅನಾವರಣಗೊಳಿಸಿದೆ. ಫೋರ್ಸ್ ಗೂರ್ಖಾ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಈ ಎಸ್‍ಯುವಿಯ ಖರೀದಿಗಾಗಿ ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.ಇದೇ ತಿಂಗಳಿನಲ್ಲಿ ಶೋರೂಮ್‌ಗಳನ್ನು ತಲುಪಲು ದೃಢಪಡಿಸಲಾಗಿದೆ.

ಫೋರ್ಸ್ ಗೂರ್ಖಾ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ನವೀಕರಿಸಿದ ಫೋರ್ಸ್ ಗೂರ್ಖಾ ತನ್ನ ಸಾಂಪ್ರದಾಯಿಕ ಬಾಕ್ಸಿ ನಿಲುವನ್ನು ಉಳಿಸಿಕೊಂಡಿದೆ. ಹೊಸ ವಿನ್ಯಾಸವು 'ಗೂರ್ಖಾ' ಬ್ಯಾಡ್ಜ್‌ನೊಂದಿಗೆ ಆಯತಾಕಾರದ ಮುಂಭಾಗದ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (ಡಿಆರ್‌ಎಲ್‌ಗಳು) ರೆಟ್ರೊ-ಶೈಲಿಯ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಮಧ್ಯದಲ್ಲಿ ಸಣ್ಣ ಏರ್ ಡ್ಯಾಮ್‌ನೊಂದಿಗೆ ಕಪ್ಪು ಮುಂಭಾಗದ ಬಂಪರ್ ಮತ್ತು ರೌಂಡ್ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಈ ಗೂರ್ಖಾ ಎಸ್‍ಯುವಿಯ ಬದಿಯಲ್ಲಿ (255/65 R18) ಟೈರ್‌ಗಳಲ್ಲಿ ಹೊಸ ಸ್ನ್ಯಾಜಿ 18-ಇಂಚಿನ ಅಲಾಯ್ ವ್ಹೀಕ್ ಗಳನ್ನು ನೀಡಿವೆ. ಇನ್ನು ಪ್ರತಿ ಬದಿಯಲ್ಲಿ 3-ಡೋರಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯಲ್ಲಿ ಹೆಚ್ಚುವರಿ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಕ್ಯಾಬಿನ್‌ನಲ್ಲಿ ನೀಡಲಾದ ಕಿಟ್‌ನಲ್ಲಿ ಹೊಸ ಗೂರ್ಖಾ ನಿಜವಾಗಿಯೂ ಬದಲಾಗಿದೆ.

ಈ ಎಸ್‍ಯುವಿಯ ಒಳಭಾಗದ ಮಧ್ಯದಲ್ಲಿ 9 ಇಂಚುಗಳ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು Android Auto ಮತ್ತು Apple CarPlay ಅನ್ನು ಸಂಪೂರ್ಟ್ ಮಾಡುತ್ತದೆ. ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಯ ಸ್ಟೀರಿಂಗ್ ವೀಲ್‌ನ ಹಿಂದೆ ಮತ್ತೊಂದು ಡಿಸ್‌ಪ್ಲೇ ಇದ್ದು, ಇದು ಗೂರ್ಖಾದ ಬಗ್ಗೆ ನಿಮಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ವೇಗದಿಂದ ಲಭ್ಯವಿರುವ ಇಂಧನ ಮಟ್ಟದಿಂದ ಟೈರ್ ಒತ್ತಡದವರೆಗೆ (TPMS ಸಿಸ್ಟಮ್‌ನಿಂದ) ನೀಡುತ್ತದೆ.
ಇನ್ನು ಹೊಸ ಫೋರ್ಸ್ ಗೂರ್ಖಾ 5-ಡೋರಿನ ಎಸ್‍ಯುವಿಯು ಸುರಕ್ಷತಾ ವಿಷಯದಲ್ಲಿ, ಎರಡು ಏರ್‌ಬ್ಯಾಗ್‌ಗಳನ್ನು ಎಬಿಎಸ್ ಮತ್ತು ಇಬಿಡಿ ಜೊತೆಗೆ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ ಮತ್ತು ಡ್ರೈವರ್ ಡಿಸ್‌ಪ್ಲೇಗೆ ಸಂಪರ್ಕಗೊಂಡಿರುವ ಟಿಪಿಎಂಎಸ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ. ಈ ಮೂಲಕ ಈ ಆಫ್-ರೋಡ್ ಉತ್ತಮ ಸುರಕ್ಷತೆ ಮಾದರಿಗಳಲ್ಲಿ ಒಂದಾಗಿದೆ.

ಈ ಹೊಸ 5-ಡೊರಿನ ಫೋರ್ಸ್ ಗೂರ್ಖಾ ಎಸ್‍ಯುವಿ 4,390mm ಉದ್ದ, 1,865mm ಅಗಲ ಮತ್ತು 2,095mm ಎತ್ತರವನ್ನು ಹೊಂದಿದೆ. ಇದರೊಂದಿಗೆ 2,825mm ಉದ್ದದ ವೀಲ್‌ಬೇಸ್ ಅನ್ನು ಒಳಗೊಂಡಿದೆ. ಇನ್ನು 3-ಡೋರಿನ ಗೂರ್ಖಾ 3,965mm ಉದ್ದ, 1,865mm ಅಗಲ, 2,080mm ಎತ್ತರ ಮತ್ತು 2,400mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. 3-ಡೊರಿನ ಗೂರ್ಖಾ ಎಸ್‍ಯುವಿಗೆ ಹೋಲಿಸಿದರೆ 15mm ಚಿಕ್ಕದಾಗಿದೆ ಮತ್ತು 425mm ಉದ್ದ ಕಡಿಮೆಯಾಗಿದೆ.
ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳು ಹೆಚ್ಚು ಪ್ರಬಲವಾದ ಮರ್ಸಿಡಿಸ್ ಮೂಲದ 2.6-ಲೀಟರ್ OM616 ಟರ್ಬೋಡೀಸೆಲ್ ಎಂಜಿನ್ ಅನ್ನು ಪಡೆಯುತ್ತವೆ. ಈ ಎಂಜಿನ್ 3,200rpm ನಲ್ಲಿ 138bhp ಮತ್ತು 1,400 ಮತ್ತು 2,600rpm ನಡುವೆ 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಇನ್ನೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಫೋರ್ ವ್ಹೀಲ್ ಡ್ರೈವ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಜಿಮ್ನಿ ಮತ್ತು ಮುಂಬರುವ 5-ಡೋರ್ ಮಹೀಂದ್ರಾ ಥಾರ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲು ಹೊಸ ಫೋರ್ಸ್ ಗೂರ್ಖಾ ಮಾದರಿಯು ಹೆಚ್ಚು ಪ್ರಾಯೋಗಿಕವಾಗಿಸಿದೆ. ಈ ಎಸ್‍ಯುವಿಯು ಕಠಿಣವಾದ ಭೂ ಪ್ರದೇಶಗಳಲ್ಲಿ ಕೂಡ ಈ ಹೊಸ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‍ಯುವಿಯು 5-ಡೋರ್ ಇರುವುದರಿಂದ ನಿಮ್ಮ ಫ್ಯಾಮಿಲಿ ಜೊತೆ ಪ್ರಯಾಣ ಮಾಡಲು ಅನುಕೂಲವಾಗಲಿದೆ.


Click it and Unblock the Notifications








