ಆಕರ್ಷಕ ಬೆಲೆಯಲ್ಲಿ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿ ಬಿಡುಗಡೆ: ಮಹೀಂದ್ರಾ ಥಾರ್‌ಗೆ ಆತಂಕ ಶುರು!
ಜನಪ್ರಿಯ ವಾಹನ ತಯಾರಕ ಕಂಪನಿಯ ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಫೋರ್ಸ್ ಗೂರ್ಖಾ (Force Gurkha) ಮಾದರಿಗೆ ಭಾರತದಲ್ಲಿ ಮಾತ್ರ ಆಫ್-ರೋಡರ್‌ಗಳಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ. ಕೊನೆಗೂ ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಬಿಡುಗಡೆಗೊಳಿಸಿದೆ.
2024ರ ಫೋರ್ಸ್ ಗೂರ್ಖಾ 3-ಡೋರ್ ಮಾದರಿಯ ಬೆಲೆಯು ರೂ.16.75 ಲಕ್ಷವಾದರೆ, ಹೊಸ 5-ಡೋರ್ ಮಾದರಿಯ ಬೆಲೆಯು ರೂ.18 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಆಸಕ್ತ ಗ್ರಾಹಕರು ಈ ಎಸ್‍ಯುವಿಯ ಖರೀದಿಗಾಗಿ ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ.

2024ರ ಫೋರ್ಸ್ ಗೂರ್ಖಾ ಎಸ್‍ಯುವಿಯನ್ನು ಮೊದಲ ಬಾರಿಗೆ ಮೂರು ಮತ್ತು ಐದು-ಡೋರಿನ ರೂಪಗಳಲ್ಲಿ ನೀಡುತ್ತಿದೆ. ಈ ಹೊಸ ಫೋರ್ಸ್ ಗೂರ್ಖಾ ಎಸ್‍ಯುವಿಯು ಹೊಸ ಆಯ್ಕೆಯು ಗೂರ್ಖಾದ ಐದು-ಡೋರಿನ ರೂಪಾಂತರವಾಗಿದೆ ಮತ್ತು 7-ಸೀಟುಗಳ ಸಂರಚನೆಯನ್ನು ಹೊಂದಿದೆ. ಇನ್ನು ಈ ಹೊಸ 5-ಡೊರಿನ ಮಾದರಿಯು 4,390mm ಉದ್ದ, 1,865mm ಅಗಲ ಮತ್ತು 2,095mm ಎತ್ತರವನ್ನು ಹೊಂದಿದೆ. ಇದರೊಂದಿಗೆ 2,825mm ಉದ್ದದ ವೀಲ್‌ಬೇಸ್ ಅನ್ನು ಒಳಗೊಂಡಿದೆ.
ಇನ್ನು 3-ಡೋರಿನ ಗೂರ್ಖಾ 3,965mm ಉದ್ದ, 1,865mm ಅಗಲ, 2,080mm ಎತ್ತರ ಮತ್ತು 2,400mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. 3-ಡೊರಿನ ಗೂರ್ಖಾ ಎಸ್‍ಯುವಿಗೆ ಹೋಲಿಸಿದರೆ 15mm ಚಿಕ್ಕದಾಗಿದೆ ಮತ್ತು 425mm ಉದ್ದ ಕಡಿಮೆಯಾಗಿದೆ. ಈ ಗೂರ್ಖಾ ಎಸ್‍ಯುವಿಯ ಬದಿಯಲ್ಲಿ (255/65 R18) ಟೈರ್‌ಗಳಲ್ಲಿ ಹೊಸ ಸ್ನ್ಯಾಜಿ 18-ಇಂಚಿನ ಅಲಾಯ್ ವ್ಹೀಕ್ ಗಳನ್ನು ನೀಡಿವೆ.

ಫೋರ್ಸ್ ಗೂರ್ಖಾದ ಎರಡೂ ಆವೃತ್ತಿಗಳು ಹೆಚ್ಚು ಪ್ರಬಲವಾದ ಮರ್ಸಿಡಿಸ್ ಮೂಲದ 2.6-ಲೀಟರ್ OM616 ಟರ್ಬೋಡೀಸೆಲ್ ಎಂಜಿನ್ ಅನ್ನು ಪಡೆಯುತ್ತವೆ. ಈ ಎಂಜಿನ್ 3,200rpm ನಲ್ಲಿ 138bhp ಮತ್ತು 1,400 ಮತ್ತು 2,600rpm ನಡುವೆ 320Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಇನ್ನೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಫೋರ್ ವ್ಹೀಲ್ ಡ್ರೈವ್ ನೊಂದಿಗೆ ಜೋಡಿಸಲಾಗಿದೆ.
ನವೀಕರಿಸಿದ ಫೋರ್ಸ್ ಗೂರ್ಖಾ ತನ್ನ ಸಾಂಪ್ರದಾಯಿಕ ಬಾಕ್ಸಿ ನಿಲುವನ್ನು ಉಳಿಸಿಕೊಂಡಿದೆ. ಹೊಸ ವಿನ್ಯಾಸವು 'ಗೂರ್ಖಾ' ಬ್ಯಾಡ್ಜ್‌ನೊಂದಿಗೆ ಆಯತಾಕಾರದ ಮುಂಭಾಗದ ಗ್ರಿಲ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (ಡಿಆರ್‌ಎಲ್‌ಗಳು) ರೆಟ್ರೊ-ಶೈಲಿಯ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಮಧ್ಯದಲ್ಲಿ ಸಣ್ಣ ಏರ್ ಡ್ಯಾಮ್‌ನೊಂದಿಗೆ ಕಪ್ಪು ಮುಂಭಾಗದ ಬಂಪರ್ ಮತ್ತು ರೌಂಡ್ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಈ ಎಸ್‍ಯುವಿಯ ಒಳಭಾಗದ ಮಧ್ಯದಲ್ಲಿ 9 ಇಂಚುಗಳ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು Android Auto ಮತ್ತು Apple CarPlay ಅನ್ನು ಸಂಪೂರ್ಟ್ ಮಾಡುತ್ತದೆ. ಹೊಸ ಗೂರ್ಖಾದ ಆಲ್-ಮೆಟಲ್ ಬಾಡಿಯು ಮುಂಭಾಗದ ಕ್ರ್ಯಾಶ್-ಕಂಪ್ಲೈಂಟ್ ಆಗಿದೆ. ಗೂರ್ಖಾ ತನ್ನ ಸುರಕ್ಷತಾ ಸೂಟ್ ಅನ್ನು ಸಹ ನವೀಕರಿಸಿದೆ ಮತ್ತು ಇದು ಈಗ ಎಬಿಎಸ್ ಮತ್ತು ಇಬಿಡಿ ಜೊತೆಗೆ ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಜಿಮ್ನಿ ಮತ್ತು ಮುಂಬರುವ 5-ಡೋರ್ ಮಹೀಂದ್ರಾ ಥಾರ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲು ಹೊಸ ಫೋರ್ಸ್ ಗೂರ್ಖಾ ಮಾದರಿಯು ಹೆಚ್ಚು ಪ್ರಾಯೋಗಿಕವಾಗಿಸಿದೆ. ಈ ಎಸ್‍ಯುವಿಯು ಕಠಿಣವಾದ ಭೂ ಪ್ರದೇಶಗಳಲ್ಲಿ ಕೂಡ ಈ ಹೊಸ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಫೋರ್ಸ್ ಗೂರ್ಖಾ ಆಫ್-ರೋಡ್ ಎಸ್‍ಯುವಿಯು 5-ಡೋರ್ ಇರುವುದರಿಂದ ನಿಮ್ಮ ಫ್ಯಾಮಿಲಿ ಜೊತೆ ಪ್ರಯಾಣ ಮಾಡಲು ಅನುಕೂಲವಾಗಲಿದೆ.


Click it and Unblock the Notifications








