2020ರ ಡಿಸೆಂಬರ್ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಫೋರ್ಡ್
ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಪೋರ್ಡ್ 2020ರ ಡಿಸೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಫೋರ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 1,662 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಫೋರ್ಡ್ ಕಂಪನಿಯ ವಾರ್ಷಿಕ ಕಾರು ಮಾರಾಟದಲ್ಲಿ ಶೇ.45 ರಷ್ಟು ಭಾರಿ ಕುಸಿತ ಕಂಡಿದೆ. ಇನ್ನು 2020ರ ಡಿಸೆಂಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 0.6 ಶೇಕಡಾ ಮಾರುಕಟ್ಟೆ ಪಾಲನ್ನು ಗಳಿಸಿದೆ. ಫೋರ್ಡ್ ಸರಣಿಯಲ್ಲಿ ಕಳೆದ ತಿಂಗಳು ಇಕೋಸ್ಪೋರ್ಟ್ ಹೆಚ್ಚು ಮಾರಾಟವಾದ ಮಾದರಿಯಾಗಿ ಮುಂದುವರೆದಿದೆ, ಕಳೆದ ತಿಂಗಳು ಫೋರ್ಡ್ ಇಕೋಸ್ಪೋರ್ಟ್ 934 ಯುನಿಟ್‌ಗಳು ಮಾರಾಟವಾಗಿವೆ.

ಆದರೆ 2019ರ ಡಿಸೆಂಬರ್ ತಿಂಗಳಲ್ಲಿ ಫೋರ್ಡ್ ಇಕೋಸ್ಪೋರ್ಟ್ 1,727 ಯುನಿಟ್‌ಗಳು ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇ.46 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇನ್ನು ಫೋರ್ಡ್ ಇಂಡಿಯಾ ಕಂಪನಿಯು ತನ್ನ 2021ರ ಇಕೋಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಫೋರ್ಡ್ ಇಕೊಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‌ಯುವಿಯು ಕೆಲವು ಸೂಕ್ಷ್ಮ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ.

ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್‍ಯುವಿಯ ಬೆಲೆಯ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಗಿಂತ ರೂ.35,000 ಗಳವರೆಗೆ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ 2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯ ಆರಂಭಿಕ ಬೆಲೆಯು ರೂ.7.99 ಲಕ್ಷಗಳಾಗಿದೆ. ಇನ್ನು ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯ ಟಾಪ್-ಸ್ಪೆಕ್ ಬೆಲೆಯು ರೂ.11.49 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಕಳೆದ ತಿಂಗಳು ಫೋರ್ಡ್ ಕಾರುಗಳ ಮಾರಾಟದಲ್ಲಿ ಎಂಡೀವರ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಫೋರ್ಡ್ ಎಂಡೀವರ್ 447 ಯುನಿಟ್‌ಗಳು ಮಾರಾಟವಾಗಿವೆ.

ಇನ್ನು 2019ರ ಡಿಸೆಂಬರ್ ತಿಂಗಳಲ್ಲಿ ಫೋರ್ಡ್ ಎಂಡೀವರ್ 261 ಯುನಿಟ್‌ಗಳು ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇ.71 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಫೋರ್ಡ್ ಕಂಫನಿಯ ಏಕೈಕ ಮಾದರಿ ಎಂಡೀವರ್ ಆಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಕಳೆದ ತಿಂಗಳು ಫ್ರೀಸ್ಟೈಲ್ 170 ಯುನಿಟ್‌ಗಳು ಮಾರಾಟವಾಗಿವೆ. 2019ರ ಡಿಸೆಂಬರ್‌ನಲ್ಲಿ ಫ್ರೀಸ್ಟೈಲ್ 296 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಮಾರಾಟದಲ್ಲಿ ಶೇ.43 ರಷ್ಟು ಕುಸಿತವಾಗಿದೆ.

2020ರ ಡಿಸೆಂಬರ್ ತಿಂಗಳಲ್ಲಿ ಫೋರ್ಡ್ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ 110 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಪೋರ್ಡ್ ಕಂಪನಿಯು ಕಳೆದ ತಿಂಗಳು ಒಂದೇ ಫಿಗೊ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಅನ್ನು ಮಾರಾಟಗೊಳಿಸಿವೆ.


Click it and Unblock the Notifications








