ಲಾಕ್ ಡೌನ್ ಎಫೆಕ್ಟ್: ಏಪ್ರಿಲ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಫೀಗೋ, ಫ್ರೀಸ್ಟೈಲ್ ಕಾರುಗಳು
ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹಂತದ ಲಾಕ್‌ಡೌನ್ ವಿಧಿಸಲಾಗುತ್ತಿದ್ದರು ವಾಹನ ಉತ್ಪಾದನೆ ಮತ್ತು ಮಾರಾಟ ಮೇಲೆ ಪರಿಣಾಮವನ್ನು ಬೀರಿದೆ. ಇದರ ನಡುವೆ ಕಳೆದ ತಿಂಗಳು ಕೆಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟವನ್ನು ಮಾಡುವಲ್ಲಿ ಯಶಸ್ವಿಯಾಗಿದೆ.

ಆದರೆ ಫೋರ್ಡ್ ಕಂಪನಿಯ ಕಾರುಗಳ ಮಾರಾಟದ ಮೇಲೆ ಬಲವಾಗಿ ಪರಿಣಾಮ ಬೀರಿದೆ, ಕಳೆದ ತಿಂಗಳು ಫೋರ್ಡ್ ಕಂಪನಿಯ ಒಂದು ಫಿಗೋ ಕಾರು ಮಾತ್ರ ಮಾರಾಟವಾಗಿದೆ. ಇನ್ನು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಫಿಗೋ ಕಾರಿನ 219 ಯುನಿಟ್ ಗಳು ಮಾರಾಟವಾಗಿತ್ತು. ಕಳೆದ ತಿಂಗಳ ಫಿಗೋ ಮಾರಾಟವನ್ನು ಇದೇ ವರ್ಷದ ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.99.54 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಇನ್ನು ಫೋರ್ಡ್ ಕಂಪನಿಯ ಫ್ರೀಸ್ಟೈಲ್ ಮಾರಾಟವು ಫೀಗೋ ಕಾರಿಗೆ ಹೋಲಿಸಿದರೆ ಉತ್ತಮವಾಗಿದೆ. ಕಳೆದ ತಿಂಗಳು ಫೋರ್ಡ್ ಫ್ರೀಸ್ಟೈಲ್ ಕಾರಿನ 635 ಯುನಿಟ್ ಗಳು ಮಾರಾಟವಾಗಿವೆ. ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಫ್ರೀಸ್ಟೈಲ್ ಮಾದರಿಯ 689 ಯುನಿಟ್ ಗಳು ಮಾರಾಟವಾಗಿತ್ತು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಳೆದ ತಿಂಗಳ ಮಾರಾಟವನ್ನು ಇದೇ ವರ್ಷದ ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.7.84 ರಷ್ಟು ಕುಸಿದಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ ಯಾವುದೇ ಮಾರುಕಟ್ಟೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿಲ್ಲ, ಅದ್ದರಿಂದ ವರ್ಷದಿಂದ ವರ್ಷಕ್ಕೆ ಯಾವುದೇ ಮಾರಾಟ ಅಂಕಿಅಂಶಗಳಿಲ್ಲ.

ಫೋರ್ಡ್ ಫೀಗೋ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆ ಆಯ್ಕೆಯು 1.2-ಲೀಟರ್, ಇನ್-ಲೈನ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 96 ಬಿಹೆಚ್‍ಪಿ ಪವರ್ ಮತ್ತು 119 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಎರಡನೇಯ ಎಂಜಿನ್ ಆಯ್ಕೆಯು 1.5-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್- 4 ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಎರಡು ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಫೋರ್ಡ್ ಫ್ರೀಸ್ಟೈಲ್‌ನಲ್ಲಿಯು ಕೂಡ ಇದೇ ಎಂಜಿನ್ ಗಳ ಆಯ್ಕೆಗಳನ್ನು ನೀಡಲಾಗಿದೆ. ಅಲ್ಲದೇ ಫ್ರೀಸ್ಟೈಲ್‌ನಲ್ಲಿಯು ಅದೇ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರಾಟವನ್ನು ಹೆಚ್ಚಿಸಲು ಫೋರ್ಡ್ ತನ್ನ ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಫೋರ್ಡ್ ಕಂಪನಿಯು ತನ್ನ ಎಂಡೀವರ್, ಇಕೋಸ್ಪೋರ್ಟ್, ಆಸ್ಪೈರ್, ಫಿಗೊ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಫೋರ್ಡ್ ಕಂಪನಿಯ ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿದೆ.

ಫೋರ್ಡ್ ಫಿಗೋ ಮತ್ತು ಫ್ರೀಸ್ಟೈಲ್‌ನ ಕಾರುಗಳ ಮೇಲೆ ಯಾವುದೇ ಅಧಿಕೃತ ನಗದು ರಿಯಾಯಿತಿಯನ್ನು ಹೊಂದಿಲ್ಲ. ಹಳೆಯ ಫೋರ್ಡ್ ಕಾರುಗಳನ್ನು ವಿನಿಮಯ ಮಾಡಿದಾಗ ರೂ.20,000 ವರೆಗಿನ ಎಕ್ಸ್‌ಚೆಂಜ್ ಬೋನಸ್ ಲಭ್ಯವಿದೆ. ಇನ್ನು ಇತರ ಬ್ರ್ಯಾಂಡ್‌ನ ಕಾರಿಗೆ ಎಕ್ಸ್‌ಚೆಂಜ್ ಬೋನಸ್ ರೂ,7,000 ಗಳಾಗಿದೆ. ಇದಲ್ಲದೆ ಕಾರ್ಪೊರೇಟ್ ರಿಯಾಯಿತಿ ರೂ.4,000 ಸಹ ಇದರ ಮೇಲೆ ಲಭ್ಯವಿದೆ.


Click it and Unblock the Notifications








