ಜನಪ್ರಿಯ ಫೋರ್ಡ್ ಕಾರುಗಳ ಮೇಲೆ ಭರ್ಜರಿ ಆಫರ್
ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಕಾರು ಮಾರಾಟದಲ್ಲಿ ಶೇ.18 ರಷ್ಟು ಕುಸಿತವನ್ನು ಕಂಡಿದೆ. ಇದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಫೋರ್ಡ್ ತನ್ನ ಕಾರುಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ಫೋರ್ಡ್ ಕಂಪನಿಯು ಆಯ್ದ ಕಾರುಗಳ ಮೇಲೆ ನಗದು ರಿಯಾಯಿತಿಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗಿದೆ. ಫೋರ್ಡ್ ತನ್ನ ಇಕೋಸ್ಪೋರ್ಟ್, ಫ್ರೀಸ್ಟೈಲ್, ಆಸ್ಪೈರ್ ಮತ್ತು ಫಿಗೋ ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಈ ಕಾರುಗಳ ಮೇಲೆ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಕಂಪನಿಯ ಅಧಿಕೃತ ಡೀಲರುಗಳ ಬಳಿ ಈ ಆಯ್ದ ಕಾರುಗಳನ್ನು ಖರೀದಿಸುವಾಗ ಭರ್ಜರಿ ರಿಯಾಯಿತಿ ಲಭ್ಯವಿರುತ್ತದೆ.

ಫೋರ್ಡ್ ಫಿಗೋ
ಫೋರ್ಡ್ ಕಂಪನಿಯು ಫಿಗೋ ಕಾರಿಗೆ ಫೋರ್ಡ್ ಅಲ್ಲದ ಕಾರನ್ನು ವಿನಿಮಯ ಮಾಡುವಾಗ ರೂ.7,000 ವರೆಗೆ ಎಕ್ಸ್‌ಚೇಂಚ್ ಬೋನಸ್ ಲಭಿಸುತ್ತದೆ. ಫೋರ್ಡ್ ಕಾರನ್ನು ನೀಡಿದರೆ ರೂ.20,000 ವರೆಗೆ ಎಕ್ಸ್‌ಚೇಂಚ್ ಬೋನಸ್ ಲಭ್ಯವಿರುತ್ತದೆ. ಇದಲ್ಲದೆ ರೂ.3,000 ವರಗೆ ಕಾರ್ಪೊರೇಟ್ ರಿಯಾಯಿತಿ ನೀಡುತ್ತಾರೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫೋರ್ಡ್ ಇಕೋಸ್ಪೋರ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಫೋರ್ಡ್ ಎಂಡೀವರ್
ಫೋರ್ಡ್ ಎಂಡೀವರ್ ಎಸ್‍ಯುವಿಗೆ ಕಾರು ತಯಾರಕರು ಯಾವುದೇ ಅಧಿಕೃತ ರಿಯಾಯಿತಿಗಳನ್ನು ನೀಡಲಾಗಿಲ್ಲ. ಆದರೆ ದೇಶಾದ್ಯಂತದವಿರುವ ಫೋರ್ಡ್ ಡೀಲರುಗಳು ಲವು ಅನಧಿಕೃತ ನಗದು ರಿಯಾಯಿತಿಗಳನ್ನು ನೀಡುತ್ತಿದ್ದಾರೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಫೋರ್ಡ್ ಫ್ರೀಸ್ಟೈಲ್ ಮತ್ತು ಇಕೋಸ್ಪೋರ್ಟ್
ಫೋರ್ಡ್ ಫ್ರೀಸ್ಟೈಲ್ ಮತ್ತು ಇಕೋಸ್ಪೋರ್ಟ್ ಸಹ ಒಂದೇ ರೀತಿಯ ರಿಯಾಯಿತಿಗಳು ಲಭ್ಯವಿರುತ್ತದೆ. ಇದಕ್ಕೆ ಫೋರ್ಡ್ ಅಲ್ಲದ ಕಾರಿಗೆ ರೂ.7,000 ವರೆಗೆ ಎಕ್ಸ್‌ಚೇಂಚ್ ಬೋನಸ್ ಲಭಿಸುತ್ತದೆ. ಹಳೆಯ ಫೋರ್ಡ್ ಕಾರುಗಳಲ್ಲಿ ರೂ.20,000 ಮೌಲ್ಯದ ಕ್ಸ್‌ಚೇಂಚ್ ಬೋನಸ್ ಲಭ್ಯವಿರುತ್ತದೆ. ಇದಲ್ಲದೆ ರೂ.3,000 ವರಗೆ ಕಾರ್ಪೊರೇಟ್ ರಿಯಾಯಿತಿಯನ್ನು ಹೊಂದಿರುತ್ತದೆ.

ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಫೋರ್ಡ್ ತನ್ನ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಎಸ್ಇ ವೆರಿಯೆಂಟ್ ಟೈಟಾನಿಯಂ ಮತ್ತು ಸ್ಪೋರ್ಟ್ ಟ್ರಿಮ್‌ಗಳ ಕೆಳಗಿನ ಸ್ಥಾನದಲ್ಲಿರುತ್ತದೆ. ಇನ್ನು ಈ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ.

ಫೋರ್ಡ್ ಇಕೋಸ್ಪೋರ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








