Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

Ford India ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ Figo ಕಾರಿನಲ್ಲಿ ಮೊದಲ ಬಾರಿಗೆ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸಿದ್ದು, ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಹೊಸ ಕಾರಿನ ಪರ್ಫಾಮೆನ್ಸ್ ವಿಡಿಯೋ ಜಾಹೀರಾತು ಬಿಡುಗಡೆ ಮಾಡಲಾಗಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ For Figo ಕಾರು ಮಾದರಿಯು ಇದೀಗ ಆಟೋಮ್ಯಾಟಿಕ್ ಆವೃತ್ತಿಯನ್ನು ಪಡೆದುಕೊಳ್ಳುವ ಮೂಲಕ ಗ್ರಾಹಕರ ಪ್ರಮುಖ ಆಕರ್ಷಣೆ ಕಾರಣವಾಗಿದ್ದು, ಹೊಸ ಕಾರಿನ ಮೂಲಕ ಕಂಪನಿಯು ಉತ್ತಮ ಮಾರಾಟ ದಾಖಲಿಸುವ ನೀರಿಕ್ಷೆಯಲ್ಲಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಮಾರುಕಟ್ಟೆಯಲ್ಲಿ ಸದ್ಯ ಮ್ಯಾನುವಲ್ ಮಾದರಿಗಳಿಂತಲೂ ಹೆಚ್ಚು ಆಟೋಮ್ಯಾಟಿಕ್ ಮಾದಿರಗಳಿಗೂ ಬೇಡಿಕೆ ಹೆಚ್ಚುತ್ತಿದ್ದು, ಬಹುತೇಕ ಕಾರು ಉತ್ಪಾದನಾ ಕಂಪನಿಗಳು ತಮ್ಮ ಪ್ರಮುಖ ಕಾರು ಮಾದರಿಗಳಲ್ಲಿ ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಿವೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಇದೀಗ Ford India ಕಂಪನಿಯು Figo ಮಾದರಿಗಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.75 ಲಕ್ಷ ಬೆಲೆ ಹೊಂದಿವೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

Figo ಹ್ಯಾಚ್‌ಬ್ಯಾಕ್ ಮಾದರಿಯ ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಎಂಟಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Ford ಕಂಪನಿಯು Figo ಪೆಟ್ರೋಲ್ ಮಾದರಿಯಲ್ಲಿ ಮ್ಯಾನುವಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದ ಕಂಪನಿಯು ಇದೀಗ ಹೊಸದಾಗಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಆಟೋಮ್ಯಾಟಿಕ್ ಆವೃತ್ತಿಯು Figo ಪೆಟ್ರೋಲ್ ಮಾದರಿಯ ಮಧ್ಯಮ ಕ್ರಮಾಂಕದ ಆವೃತ್ತಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

Figo ಪೆಟ್ರೋಲ್ ಆವೃತ್ತಿಗಳಾದ Titanium ಮತ್ತು Titanium + ಆವೃತ್ತಿಗಳಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.75 ಲಕ್ಷಕ್ಕೆ ಮತ್ತು ರೂ.8.20 ಲಕ್ಷ ಬೆಲೆ ಹೊಂದಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಹೊಸ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಸೆಲೆಕ್ಟ್ ಶಿಫ್ಟ್ ಟೆಕ್ನಾಲಜಿ ಆಧಾರಿತ ಎಎಂಟಿ ಗೇರ್‌ಬಾಕ್ಸ್ ಜೊತೆಗೆ ಮ್ಯಾನುವಲ್ ಆಗಿ ನಿಯಂತ್ರಣ ಮಾಡಬಹುದಾದ ಸ್ಪೋರ್ಟ್ ಬಟನ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಫಿಗೊ ಕಾರು ಡ್ರಾಗ್ಯನ್ ಸರಣಿಯ 3 ಸಿಲಿಂಡರ್ 1.2-ಲೀಟರ್ ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಆವೃತ್ತಿಯ ಜೊತೆಗೆ ಇದೀಗ ಹೊಸದಾಗಿ ಆಟೋಮ್ಯಾಟಿಕ್ ಆವೃತ್ತಿಯು ಸಹ ಮಾರಾಟಗೊಳ್ಳಲಿದ್ದು, ಎರಡು ಮಾದರಿಗಳು ಗರಿಷ್ಠ 95 ಬಿಎಚ್‌ಪಿ ಮತ್ತು 119 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹೊಸ ಗೇರ್‌ಬಾಕ್ಸ್ ಜೋಡಣೆ ಹೊರತುಪಡಿಸಿ ಮ್ಯಾನುವಲ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಹೊಸ ಕಾರಿನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಮತ್ತು ರೂಫ್, ಫಾಗ್ ಲ್ಯಾಂಪ್, 15-ಇಂಚಿನ ಅಲಾಯ್ ವ್ಹೀಲ್, ಚಾರ್ಕಲ್ ಬ್ಲ್ಯಾಕ್ ಇಂಟಿರಿಯರ್, ಫೋರ್ಡ್ ಪಾಸ್ ಕಾರ್ ಕನೆಕ್ಟ್ ಟೆಕ್ನಾಲಜಿ, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸುರಕ್ಷತೆಗಾಗಿ ಎಬಿಎಸ್, 6 ಏರ್‌ಬ್ಯಾಗ್, ಟ್ರಾಕ್ಷನ್ ಕಂಟ್ರೋಲ್, ಕ್ಲೈಮೆಟ್ ಕಂಟ್ರೋಲ್ ಒಳಗೊಂಡಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಇನ್ನು Figo ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿ 1.2 ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯಲ್ಲಿ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.85 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8.70 ಲಕ್ಷ ಬೆಲೆ ಹೊಂದಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಫಿಗೊ ಕಾರಿನ 1.5 ಲೀಟರ್ ಡೀಸೆಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 215-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ನೀಡಲಾಗಿಲ್ಲ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

ಇನ್ನು Ford ಕಂಪನಿಯು Figo ನಂತರ Aspire ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲೂ ಸಹ ಆಟೋಮ್ಯಟಿಕ್ ವರ್ಷನ್ ಪರಿಚಯಿಸಲು ಸಜ್ಜಾಗುತ್ತಿದ್ದು, ಹೊಸ ಆವೃತ್ತಿಯು ಮುಂದಿನ ಕೆಲ ದಿನಗಳಲ್ಲಿ ಹೊಸ ಮಾದರಿಯು ಬಿಡುಗಡೆಯಾಗಲಿದೆ.

Figo ಆಟೋಮ್ಯಾಟಿಕ್ ವರ್ಷನ್ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದ Ford India

Aspire ಕಾರು ಮಾದರಿಯು Figo ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

Article Published On: Wednesday, August 25, 2021, 18:39 [IST]
English summary
Ford india released figo automatic hatchback tvc details
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+