ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಫೋರ್ಡ್ ಇಂಡಿಯಾ ಕಂಪನಿಯು ದೇಶಾದ್ಯಂತ ನಡೆಸಿದ ಕಾರು ಚಾಲಕರ ಕುರಿತ ವಾರ್ಷಿಕ ಸಮೀಕ್ಷೆಯ ಮೂರನೇ ಹಂತದ ಸಂಶೋಧನೆಗಳನ್ನು ಬಿಡುಗಡೆಗೊಳಿಸಿದೆ. ಈ ಸಮೀಕ್ಷೆಯಲ್ಲಿ ಸಂಚಾರ ನಿಯಮಗಳ ಅರಿವು ಹಾಗೂ ಕಾರು ಚಾಲಕರಲ್ಲಿ ಚಾಲನಾ ನಡವಳಿಕೆ ಸೇರಿದಂತೆ ಹಲವಾರು ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ.

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಚಾಲಕರು ಕಾರು ಚಾಲನೆ ಮಾಡುವಾಗ ಗಮನವು ಬೇರೆಡೆ ಹೋಗುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಬಹುತೇಕ ಚಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಕಡಿಮೆ ಅರಿವು ಹೊಂದಿದ್ದಾರೆ. ಚಾಲನೆ ಮಾಡುವಾಗ ಖಾಲಿ ಬಾಟಲಿಗಳು ಅಥವಾ ಪ್ಯಾಕೆಟ್‌ಗಳನ್ನು ಕಿಟಕಿಯಿಂದ ಹೊರಗೆ ಎಸೆಯುವುದು ಹಾಗೂ ಉಗುಳುವುದನ್ನು ಅನೇಕ ಚಾಲಕರು ಒಪ್ಪಿಕೊಂಡಿದ್ದಾರೆ.

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಚಾಲಕರಿಗೆ ಸಂಚಾರ ನಿಯಮಗಳಿಗೆ ಸಂಬಂಧಿಸಿದ 31 ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ 27% ಜನರು ಮಾತ್ರ 40%ಗಿಂತ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಲು ಸಾಧ್ಯವಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಇನ್ನು ಕೇವಲ 6%ನಷ್ಟು ಜನರು 50%ಗಿಂತ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಕಾರು ಚಾಲಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಮೂಲಭೂತ ಮಾಹಿತಿಯ ಕೊರತೆಯಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಸರಿಯಾದ ಟ್ರಾಫಿಕ್ ಚಿಹ್ನೆ ಅಥವಾ ಸೈನ್ ಬೋರ್ಡ್'ಗಳನ್ನು ಗುರುತಿಸಲು ಹೆಚ್ಚಿನ ಜನರು ವಿಫಲರಾಗಿದ್ದಾರೆ. ಹೆಚ್ಚಿನ ಜನರು ಕಾರನ್ನು ತಿರುಗಿಸುವಾಗ ಸಿಗ್ನಲ್ ಬಳಸದೇ ಇರುವ ಬಗ್ಗೆ ಹಾಗೂ ವೇಗದ ಮಿತಿಯನ್ನು ಅನುಸರಿಸದೇ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪ್ರತಿ 3 ಜನರಲ್ಲಿ ಒಬ್ಬರು ನಗರದ ಸಂಚಾರ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಹೊರಗೆ ಹೋದಾಗ ಹೆಚ್ಚು ಸಂಚಾರ ದಟ್ಟಣೆಯನ್ನು ಎದುರಿಸಿರುವುದಾಗಿ ತಿಳಿಸಿದರು. 97%ನಷ್ಟು ಜನರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವ ಕಾರಣ ಗಮನವು ಬೇರೆಡೆ ಹೋಗುತ್ತದೆ ಎಂದು ಹೇಳಿದ್ದಾರೆ.

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ 81%ನಷ್ಟು ಜನರು ಅತಿ ವೇಗದಲ್ಲಿ ವಾಹನ ಚಲಾಯಿಸುವುದೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣವೆಂದು ಹೇಳಿದ್ದಾರೆ. ಸುಮಾರು ಅರ್ಧದಷ್ಟು ಜನರು ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫೋರ್ಡ್ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಯ್ತು ಕಾರು ಚಾಲಕರ ನಿರ್ಲಕ್ಷ್ಯ

58%ನಷ್ಟು ಜನರು ನಿದ್ರೆ ಮಂಪರಿನಲ್ಲಿ ಹಲವು ಬಾರಿ ಕಾರು ಚಾಲನೆ ಮಾಡಿರುವುದಾಗಿ ತಿಳಿಸಿದ್ದಾರೆ. ರಸ್ತೆಯಲ್ಲಿ ಇತರ ವಾಹನಗಳಿಗೆ ಅನುಕೂಲ ಕಲ್ಪಿಸುವ ಬಗ್ಗೆ ಕೇಳಿದ ಪ್ರಶ್ನೆಯಲ್ಲಿ 53%ನಷ್ಟು ಜನರು ಆಂಬುಲೆನ್ಸ್‌ಗಳಂತಹ ತುರ್ತು ವಾಹನಗಳಿಗೆ ದಾರಿ ಮಾಡಿಕೊಟ್ಟಿಲ್ಲವೆಂದು ತಿಳಿಸಿದ್ದಾರೆ. ಇನ್ನು 57%ನಷ್ಟು ಜನರು ವಾಹನ ಚಾಲನೆ ಮಾಡುವಾಗ ತ್ಯಾಜ್ಯವನ್ನು ರಸ್ತೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

Most Read Articles

Kannada
English summary
Ford India road awareness survey report reveals about drivers negligence. Read in Kannada.
Story first published: Saturday, February 13, 2021, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X